ನವದೆಹಲಿ: ದಾಖಲೆ ಮಟ್ಟ ತಲುಪಿದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಮುನಾ ನದಿ ನೀರಿನ ಮಟ್ಟ ಕೊಂಚ ಇಳಿಕೆಯಾಗತೊಡಗಿದೆ. ಆದರೂ ಮಳೆಯಿಂದಾಗಿ ನೀರು ಅಪಾಯದ ಮಟ್ಟದಲ್ಲಿದ್ದು, ನಿರಂತರವಾಗಿ ವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ. ಪರಿಣಾಮ ಐಟಿಒ ಪ್ರದೇಶವೂ ಮುಳುಗಡೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ನದಿಗಳಾಗಿ ಮಾರ್ಪಟ್ಟಿದ್ದು, ಮನೆಗಳು, ವೈದ್ಯಕೀಯ ಸೌಲಭ್ಯ, ಸ್ಮಶಾನ ಮತ್ತು ಆಶ್ರಯ ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ.
ಗುರುವಾರ ಸಂಜೆ 6 ಗಂಟೆಗೆ ಯಮುನಾ ನದಿಯ ನೀರಿನ ಮಟ್ಟ 208.66 ಮೀಟರ್ ದಾಖಲಾಗಿದ್ದು, ಈವರೆಗಿನ ಇತಿಹಾಸದಲ್ಲೇ ಇದು ಗರಿಷ್ಠ ಮಟ್ಟವಾಗಿದೆ. ಗುರುವಾರ ರಾತ್ರಿ 8 ಗಂಟೆಯವರೆಗೆ 208.66 ಮೀಟರ್ ನೀರಿನ ಮಟ್ಟವಿತ್ತು. ನಂತರ ಯಮುನೆಯ ಮಟ್ಟದಲ್ಲಿ ಕೊಂಚ ಇಳಿಕೆಯಾಗಿದೆ. ಗುರುವಾರ ರಾತ್ರಿ 9 ಗಂಟೆಗೆ 208.65 ಮೀಟರ್ ದಾಖಲಾಗಿದೆ. ಇದಾದ ಬಳಿಕ ರಾತ್ರಿ 10 ಗಂಟೆಗೆ 208.63 ಮೀಟರ್‌ಗೆ ಏರಿತು. ಶುಕ್ರವಾರ ಬೆಳಗ್ಗೆ 6 ಗಂಟೆಗೆ ನೀರಿನ ಮಟ್ಟ 208.46ಕ್ಕೆ ಮೀಟರ್ ತಲುಪಿದೆ. ಆದರೂ ಸದ್ಯಕ್ಕೆ ನೀರಿನ ಮಟ್ಟ ಸುಮಾರು ಎರಡೂವರೆ ಮೀಟರ್‌ಗಳಷ್ಟು ಅಪಾಯದ ಮಟ್ಟಕ್ಕಿಂತ ಹೆಚ್ಚಿದೆ.
-
#WATCH | Severe waterlogging in Delhi's Yamuna Bazar due to rise in water level of Yamuna River. Drone visuals show the extent of the situation there. pic.twitter.com/Np5ZalGXbm
— ANI (@ANI) July 14, 2023 " class="align-text-top noRightClick twitterSection" data="
">#WATCH | Severe waterlogging in Delhi's Yamuna Bazar due to rise in water level of Yamuna River. Drone visuals show the extent of the situation there. pic.twitter.com/Np5ZalGXbm
— ANI (@ANI) July 14, 2023#WATCH | Severe waterlogging in Delhi's Yamuna Bazar due to rise in water level of Yamuna River. Drone visuals show the extent of the situation there. pic.twitter.com/Np5ZalGXbm
— ANI (@ANI) July 14, 2023
ಐಟಿಒ ಬಳಿಯ ರಿಂಗ್ ರಸ್ತೆ, ಕಾಶ್ಮೀರ ಗೇಟ್‌ನ ಐಎಸ್‌ಬಿಟಿ ಜಲಾವೃತವಾಗಿದೆ. ಜೈತ್‌ಪುರ, ವಜೀರಾಬಾದ್, ನಿಗಮ್ ಬೋಧ್ ಸುತ್ತಮುತ್ತಲಿನ ಪ್ರದೇಶ, ಗೀತಾ ಕಾಲೋನಿ ಸೇರಿದಂತೆ ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಹೆಚ್ಚುತ್ತಿರುವ ಯಮುನಾ ನದಿ ನೀರಿನ ಮಟ್ಟದಿಂದಾಗಿ ಮೂರು ನೀರು ಸಂಸ್ಕರಣಾ ಘಟಕಗಳಾದ ವಜೀರಾಬಾದ್, ಚಂದ್ರವಾಲ್ ಮತ್ತು ಓಖ್ಲಾಗಳನ್ನು ಮುಚ್ಚಿದ್ದು, 25 ಪ್ರತಿಶತದಷ್ಟು ಪೂರೈಕೆಯನ್ನು ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ದೆಹಲಿಯ ಗೀತಾ ಕಾಲೋನಿ ಬಳಿಯ ರೈಲ್ವೆ ಸೇತುವೆಯ ಕೆಳಗೆ ಮತ್ತು ಲೋಹಾ ಪುಲ್ ಮತ್ತು ಯಮುನಾ ಬಜಾರ್ ಪ್ರದೇಶದಲ್ಲಿ ಹಲವಾರು ವಾಹನಗಳು ನೀರಿನಡಿ ಸಿಲುಕಿವೆ.
-
#WATCH | Delhi: Severe waterlogging on ITO road due to rise in water level of Yamuna River pic.twitter.com/wz3ZXBA3IS
— ANI (@ANI) July 14, 2023 " class="align-text-top noRightClick twitterSection" data="
">#WATCH | Delhi: Severe waterlogging on ITO road due to rise in water level of Yamuna River pic.twitter.com/wz3ZXBA3IS
— ANI (@ANI) July 14, 2023#WATCH | Delhi: Severe waterlogging on ITO road due to rise in water level of Yamuna River pic.twitter.com/wz3ZXBA3IS
— ANI (@ANI) July 14, 2023
ಇದನ್ನೂ ಓದಿ : Heavy rain : ದೆಹಲಿಯಲ್ಲಿ ಎದೆ ಮಟ್ಟದ ನೀರಿನಲ್ಲೇ ಸೈಕಲ್ ರಿಕ್ಷಾ ಚಾಲನೆ - ವಿಡಿಯೋ
ಇನ್ನು ರಾಜಧಾನಿ ದೆಹಲಿಯಲ್ಲಿ ಪ್ರವಾಹದಿಂದ ಒಂದು ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ಯಮುನಾ ಖದರ್ನಲ್ಲಿ 40 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ. ದೆಹಲಿ ಸರ್ಕಾರವು ವಿವಿಧ ಸ್ಥಳಗಳಲ್ಲಿ ಶಿಬಿರಗಳನ್ನು ಸ್ಥಾಪಿಸಿದ್ದು, ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ, ಅನೇಕ ಸಾಮಾಜಿಕ ಸಂಸ್ಥೆಗಳು ಸಹ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವಲ್ಲಿ ನಿರತವಾಗಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ, ‘ಜಲಾವೃತವಾಗಿರುವ ಪ್ರದೇಶಗಳಲ್ಲಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲಾಗಿದೆ’ ಎಂದು ಹೇಳಿದ್ದಾರೆ.
-
#WATCH | Delhi: People face problems due to waterlogging situation
— ANI (@ANI) July 14, 2023 " class="align-text-top noRightClick twitterSection" data="
(Visuals from ITO) pic.twitter.com/MXruybvrqb
">#WATCH | Delhi: People face problems due to waterlogging situation
— ANI (@ANI) July 14, 2023
(Visuals from ITO) pic.twitter.com/MXruybvrqb#WATCH | Delhi: People face problems due to waterlogging situation
— ANI (@ANI) July 14, 2023
(Visuals from ITO) pic.twitter.com/MXruybvrqb
ಇದನ್ನೂ ಓದಿ : ಯಮುನೆಯ ನೀರಿನ ಮಟ್ಟ 204 ಮೀಟರ್ ! ಅಪಾಯದ ಗಡಿ ಮೀರಿ ಹರಿಯುತ್ತಿದೆ ನದಿ - ವಿಡಿಯೋ