ETV Bharat / bharat

ಸೇನಾ ಕಾಪ್ಟರ್​ ಪತನ : ಹಿರಿಯ ಅಧಿಕಾರಿಗಳೊಂದಿಗೆ ರಾಜನಾಥ್​ ಸಿಂಗ್​ ಚರ್ಚೆ,  ನಾಳೆ ಸಂಸತ್​​ಗೆ ಮಾಹಿತಿ ಸಾಧ್ಯತೆ - ಸೇನಾ ಹೆಲಿಕಾಪ್ಟರ್ ಪತನ

ಸೇನಾ ಮುಖ್ಯಸ್ಥ ಬಿಪಿನ್​ ರಾವತ್​​ ಹಾಗೂ ಅವರ ಕುಟುಂಬ ಸೇರಿದಂತೆ 14 ಜನರು ಪ್ರಯಾಣಿಸುತ್ತಿದ್ದ ಸೇನಾ ವಿಮಾನ ಪತನಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ರಕ್ಷಣಾ ಸಚಿವ ರಾಜನಾಥ್​​ ಸಿಂಗ್ ನಾಳೆ ಸಂಸತ್​​​ನಲ್ಲಿ ಹೇಳಿಕೆ ನೀಡುವ ಸಾಧ್ಯತೆ ಇದೆ.

Army Helicopter Crash
Army Helicopter Crash
author img

By

Published : Dec 8, 2021, 3:27 PM IST

Updated : Dec 8, 2021, 4:27 PM IST

ನವದೆಹಲಿ : ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್​ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 14 ಜನರು ಪ್ರಯಾಣಿಸುತ್ತಿದ್ದ ​ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕುನೂರಿನಲ್ಲಿ ಪತನಗೊಂಡಿದೆ.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿರುವ ರಕ್ಷಣಾ ಸಚಿವ ರಾಜನಾಥ್​​ ಸಿಂಗ್,​​ ಸಂಸತ್​​ನಲ್ಲೂ ಇದರ ಬಗ್ಗೆ ನಾಳೆ ಮಾಹಿತಿ ನೀಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ಘಟನಾ ಸ್ಥಳಕ್ಕೆ ರಕ್ಷಣಾ ಸಚಿವ ರಾಜನಾಥ್​​ ಸಿಂಗ್​​ ಭೇಟಿ ನೀಡಲಿದ್ದಾರೆ. ಇದಾದ ಬಳಿಕ ಅಧಿಕೃತವಾಗಿ ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ.

  • Defence Minister Rajnath Singh is monitoring the situation following crash of IAF chopper carrying CDS Bipin Rawat & others. A meeting of senior Defence Ministry officials is underway. Singh has briefed the PM about the crash: Sources

    (File photo) pic.twitter.com/3XUZsfLqDP

    — ANI (@ANI) December 8, 2021 " class="align-text-top noRightClick twitterSection" data=" ">

ವಿಮಾನ ಪತನಗೊಂಡಿರುವ ಸ್ಥಳದಲ್ಲಿ ಈಗಾಗಲೇ ನೀಲಗಿರಿ ಜಿಲ್ಲಾಧಿಕಾರಿ ಸೇರಿದಂತೆ ಅನೇಕ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಸ್ಥಳದಲ್ಲಿ ವೈದ್ಯಕೀಯ ತಂಡ ಬೀಡು ಬಿಟ್ಟಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಈಗಾಗಲೇ ಸೇನಾ ವಿಮಾನ ಪತನಗೊಂಡಿರುವ ಸ್ಥಳದಿಂದ ಐವರ ಮೃತದೇಹ ವಶಕ್ಕೆ ಪಡೆದುಕೊಳ್ಳಲಾಗಿದೆ. ಸೇನಾ ಕಾಪ್ಟರ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹಲವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿರಿ: ಸೇನಾ ಹೆಲಿಕಾಪ್ಟರ್​​ ಪತನ: ಘಟನಾ ಸ್ಥಳದಲ್ಲಿ 5 ಮೃತದೇಹ ಪತ್ತೆ: ರಾವತ್​​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಭಾರತೀಯ ವಾಯುಪಡೆಯ Mi-17V5 ಹೆಲಿಕಾಪ್ಟರ್​ನಲ್ಲಿ ಬಿಪಿನ್​ ರಾವತ್​​ ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಅಧಿಕಾರಿಗಳಾದ ಗುರುಸೇವಕ್ ಸಿಂಗ್, ಜಿತೇಂದ್ರ ಕುಮಾರ್, ವಿವೇಕ್ ಕುಮಾರ್, ಸಾಯಿತೇಜಾ, ಸತ್ಪಾಲ್ ಅವರೊಂದಿಗೆ ಪ್ರಯಾಣಿಸುತ್ತಿದ್ದರು.

ರಾಜನಾಥ್​ ಸಿಂಗ್ ಮಹತ್ವದ ಸಭೆ

ಸೇನಾ ವಿಮಾನ ಪತನಗೊಳ್ಳುತ್ತಿದ್ದಂತೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​​ ರಕ್ಷಣಾ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆಯಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಇದರ ಬೆನ್ನಲ್ಲೇ ಅವರು ಸಂಸತ್​​ಗೆ ಅವರು ನಾಳೆ ಮಾಹಿತಿ ನೀಡಲಿದ್ದಾರೆ. ಇದೇ ವೇಳೆ ಅವರು, ನವದೆಹಲಿಯಲ್ಲಿ ಸಿಡಿಎಸ್ ರಾವತ್​ ನಿವಾಸಕ್ಕೆ ಭೇಟಿ ನೀಡಿದರು.​​

ಘಟನಾ ಸ್ಥಳಕ್ಕೆ ಸ್ಟಾಲಿನ್​​ ಭೇಟಿ

  • Tamil Nadu Chief Minister MK Stalin to move Coimbatore from Chennai Airport today evening and then move to Nilgiris, following the incident of military chopper crash between Coimbatore and Sulur.

    (File photo) pic.twitter.com/R4EDDNzLwD

ಸೇನಾ ವಿಮಾನ ಪತನಗೊಂಡಿರುವ ಸ್ಥಳಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್​ ಇಂದು ಭೇಟಿ ನೀಡಲಿದ್ದಾರೆ. ಚೆನ್ನೈ ಏರ್​​ಪೋರ್ಟ್​​ನಿಂದ ಅವರು ನೀಲಗಿರಿಗೆ ತೆರಳಲಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಹತ್ವದ ಮಾಹಿತಿ ಪಡೆದುಕೊಳ್ಳಲಿದ್ದಾರೆ.

Last Updated : Dec 8, 2021, 4:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.