ETV Bharat / bharat

ಕಳ್ಳತನ ಆರೋಪ ಮುಚ್ಚಿ ಹಾಕೋಕೆ 50 ಸಾವಿರ ಬೇಡಿಕೆಯಿಟ್ಟ.. ಹಣ ನೀಡದಿದ್ದಕ್ಕೆ ಗ್ರಾಮದಿಂದಲೇ ಹೊರ ಹಾಕಿದ ಸರಪಂಚ್​

ಛತ್ತೀಸ್​ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಸರಪಂಚನೊಬ್ಬ ಘಟನೆಯೊಂದರ ಸಂಬಂಧ ಬುಡಕಟ್ಟು ಕುಟುಂಬಕ್ಕೆ ಐವತ್ತು ಸಾವಿರ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಬುಡಕಟ್ಟು ಕುಟುಂಬಕ್ಕೆ ಹಣ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಅವರನ್ನು ಗ್ರಾಮದಿಂದ ಹೊರ ಹಾಕಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

decree of bilaspur khap panchayat  Salka sarpanch asked for money from tribal family  Victim woman complained in Kota police station  tribal widow woman  Tribal woman complained in Kota police station  ಛತ್ತೀಸ್​ಗಢದಲ್ಲಿ ಹಣ ನೀಡದಿದ್ದಕ್ಕೆ ಗ್ರಾಮದಿಂದಲೇ ಹೊರ ಹಾಕಿದ ಸರಪಂಚ್​ ಅನ್ನ ಮತ್ತು ನೀರು ನೀಡದಂತೆ ಸರಪಂಚ್​ ಆದೇಶ  ಬಿಲಾಸ್ಪುರ್​ ಸುದ್ದಿ  ಬುಡಕಟ್ಟ ಜನಾಂಗದ ಮೇಲೆ ಮೇಲೆ ಕಳ್ಳತನ ಆರೋಪ
ಹಣ ನೀಡದಿದ್ದಕ್ಕೆ ಗ್ರಾಮದಿಂದಲೇ ಹೊರ ಹಾಕಿದ ಸರಪಂಚ್
author img

By

Published : Mar 30, 2022, 1:38 PM IST

ಬಿಲಾಸ್ಪುರ್: ಸರಪಂಚ್​ನೊಬ್ಬ​ ಆದಿವಾಸಿ ಕುಟುಂಬಕ್ಕೆ ಐವತ್ತು ಸಾವಿರ ನೀಡುವಂತೆ ಬೇಡಿಕೆಯಿಟ್ಟಿದ್ದ. ಕೂಲಿ ಮಾಡಿ ದುಡಿಯುವ ಬುಡಕಟ್ಟು ಕುಟುಂಬವು ಹಣವನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಆ ಕುಟುಂಬವನ್ನು ಗ್ರಾಮದಿಂದ ಹೊರಗೆ ಹಾಕಿದ್ದಾನೆ. ಇದೀಗ ಆ ಸಂತ್ರಸ್ತ ಕುಟುಂಬ ಮನೆ ಮನೆಗೆ ಅಲೆದಾಡುತ್ತಿದೆ. ಈ ಪ್ರಕರಣ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಸಲ್ಕಾ ಗ್ರಾಮದಲ್ಲಿ ನಡೆದಿದೆ.

ಏನಿದು ಘಟನೆ: ಖುಸ್ರೋ ಗ್ರಾಮದ ರಾಧೆ ನಾಯಕ್ ಎಂಬುವವರ ಮೇಕೆಯನ್ನು ಚಂದ್ರಮತಿಯ ಹಿರಿಯ ಮಗ ತೋರನ್ ತಂದಿದ್ದಾನೆ. ಆದರೆ ಗ್ರಾಮಸ್ಥರು ನಿಮ್ಮ ಮಗ ಈ ಮೇಕೆಯನ್ನು ಕಳ್ಳತನ ಮಾಡಿ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಆಗ ಗ್ರಾಮಸ್ಥರು ಚಂದ್ರಮತಿ ಹಾಗೂ ಆಕೆಯ ಕುಟುಂಬದೊಂದಿಗೆ ವಾಗ್ವಾದಕ್ಕಿಳಿದರು. ಈ ವೇಳೆ, ಕೆಲ ಗ್ರಾಮಸ್ಥರು ಚಂದ್ರಮತಿ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಚಂದ್ರಮತಿ ಕುಟುಂಬಕ್ಕೆ ಯಾರೂ ಪಡಿತರ ಸಾಮಗ್ರಿ ನೀಡಬಾರದೆಂದು ಘೋಷಿಸಿದ್ದಾರೆ. ನಂತರ ಸಂತ್ರಸ್ತ ಕುಟುಂಬದ ಮಗ ತಂದಿದ್ದ ಮೇಕೆಯನ್ನು ಗ್ರಾಮಸ್ಥರು ಹಿಂತಿರುಗಿಸಿದ್ದಾರೆ.

ಓದಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ: ಮಾಜಿ ಸಿಎಂ ಬಿಎಸ್​ವೈ ಸ್ಪಷ್ಟನೆ

ಮೇಕೆಯನ್ನು ಹಿಂತಿರುಗಿಸಿದ ನಂತರವೂ ವಿವಾದ ಹಾಗೆಯೇ ಉಳಿದಿತ್ತು. ಈ ವೇಳೆ, ಸರಪಂಚ್ ಭುವನ್ ಸಿಂಗ್ ಜಗತ್ ಈ ವಿಷಯವನ್ನು ಮುಚ್ಚಿ ಹಾಕೋಕೆ 50 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ಆದರೆ ಸಂತ್ರಸ್ತ ಕುಟುಂಬದವರು ಹಣ ನೀಡೋದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಈ ಕುಟುಂಬಕ್ಕೆ ಒದಗಿಸುತ್ತಿರುವ ನೀರಿನ ಕಲೆಕ್ಷನ್​​ ನಿಲ್ಲಿಸುವಂತೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಗಿರಿಜನ ಕುಟುಂಬವನ್ನು ಗ್ರಾಮ ಬಿಟ್ಟು ಹೋಗುವಂತೆ ಆದೇಶಿಸಿದ್ದಾನೆ. ಸರಪಂಚ್ ಭುವನ್ ಸಿಂಗ್ ಜಗತ್ ಆದೇಶದ ನಂತರ ಸಂತ್ರಸ್ತರಿಗೆ ಪಡಿತರ ಮತ್ತು ನೀರು ಸಿಗದೇ ಸಾಕಷ್ಟು ತೊಂದರೆಗೊಳಗಾದರು.

ಮಹಿಳೆಯಿಂದ ದೂರು: ಪ್ರಕರಣದ ಸಂಬಂಧ ಸಂತ್ರಸ್ತ ಮಹಿಳೆ ಚಂದ್ರಮತಿ ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೋಟ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಮಾತನಾಡಿ, ಈ ಬಗ್ಗೆ ತನಿಖೆ ನಡೆಸಲಾಗುವುದು. ತನಿಖೆಗಾಗಿ ಗ್ರಾಮಕ್ಕೆ ಸಿಬ್ಬಂದಿಯನ್ನು ಕಳುಹಿಸಿದ್ದು, ಸಂತ್ರಸ್ತೆಯ ಕುಟುಂಬ ಪತ್ತೆಯಾಗಿಲ್ಲ. ಅವರೆಲ್ಲರೂ ಹಳ್ಳಿಯಿಂದ ಬೇರೆಡೆ ಹೋಗಿದ್ದಾರೆ. ಸಂತ್ರಸ್ತೆಯ ಕುಟುಂಬದವರು ಬಂದ ನಂತರ ಈ ಬಗ್ಗೆ ಸರಿಯಾದ ಮಾಹಿತಿ ದೊರೆಯಲಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.