ETV Bharat / bharat

ಸೈಕ್ಲೋನ್.. ಕೇರಳಿಗರು ಎಚ್ಚರಿಕೆಯಿಂದಿರುವಂತೆ ಐಎಂಡಿ ಸೂಚನೆ - ಕೇರಳ ಜನತೆ ಎಚ್ಚರಿಕೆಯಿಂದಿರುವಂತೆ ಐಎಂಡಿ ಸೂಚನೆ

ಡಿಸೆಂಬರ್​​ 3ರಂದು ತಮಿಳುನಾಡು ಮತ್ತು ಕೇರಳದಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಇದು ಡಿಸೆಂಬರ್ 2ರ ಸಂಜೆ/ರಾತ್ರಿಯ ಸಮಯದಲ್ಲಿ ಪಶ್ಚಿಮ-ವಾಯವ್ಯ ದಿಕ್ಕಿಗೆ ತೆರಳಿ ಶ್ರೀಲಂಕಾ ಕರಾವಳಿಯನ್ನು ಬಾಧಿಸಲಿದೆ..

IMD asks people of southern Kerala to remain vigilant
ದಕ್ಷಿಣ ಕೇರಳದ
author img

By

Published : Dec 1, 2020, 1:06 PM IST

ತಿರುವನಂತಪುರಂ : ಬೇ ಆಫ್​ ಬೆಂಗಾಲ್​ನಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡು ಹಾಗೂ ಕೇರಳದ ದಕ್ಷಿಣ ಭಾಗದಲ್ಲಿ ಮತ್ತೆ ಚಂಡಮಾರುತ ಉಂಟಾಗುವ ಸಾಧ್ಯತೆ ಇದ್ದು ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

ದಕ್ಷಿಣ ತಮಿಳುನಾಡು ಮತ್ತು ಕೇರಳದ ದಕ್ಷಿಣ ಭಾಗಗಳಲ್ಲಿ ನವೆಂಬರ್ 30ರಂದು ರಾತ್ರಿ 11:30ಕ್ಕೆ ಸರಿ ಸುಮಾರು 590 ಕಿ.ಮೀ ವೇಗದಲ್ಲಿ ಚಂಡಮಾರುತ ಉಂಟಾಗಲಿದೆ ಎಂದು ಭಾರತ ಹವಾಮಾನ ಇಲಾಖೆ ಹೇಳಿದೆ.

ನಂತರದ 12 ಗಂಟೆಗಳಲ್ಲಿ ಈ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ಪೂರ್ವ ಆಗ್ನೇಯಕ್ಕೆ 590 ಕಿ.ಮೀ ಮತ್ತು ಕನ್ಯಾಕುಮಾರಿ (ಭಾರತ)ದಿಂದ ಪೂರ್ವಕ್ಕೆ 1000 ಕಿ.ಮೀ ದೂರದಲ್ಲಿ ಚಂಡ ಮಾರುತ ಉಂಟಾಗಲಿದೆ.

ಡಿಸೆಂಬರ್​​ 3ರಂದು ತಮಿಳುನಾಡು ಮತ್ತು ಕೇರಳದಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಇದು ಡಿಸೆಂಬರ್ 2ರ ಸಂಜೆ/ರಾತ್ರಿಯ ಸಮಯದಲ್ಲಿ ಪಶ್ಚಿಮ-ವಾಯವ್ಯ ದಿಕ್ಕಿಗೆ ತೆರಳಿ ಶ್ರೀಲಂಕಾ ಕರಾವಳಿಯನ್ನು ಬಾಧಿಸಲಿದೆ.

ನಂತರ ಪಶ್ಚಿಮ ದಿಕ್ಕಿಗೆ ಚಲಿಸುವಂತಿದ್ದು, ಡಿಸೆಂಬರ್ 3ರಂದು ಕೊಮೊರಿನ್ ಪ್ರದೇಶಕ್ಕೆ ಲಗ್ಗೆ ಇಡಲಿದೆ. ನಂತರ ಬೆಳಗ್ಗೆ ದಕ್ಷಿಣ ತಮಿಳುನಾಡು ಕರಾವಳಿಯ ಕಡೆಗೆ ಬೀಸಲಿದೆ ಎಂದು ಐಎಂಡಿ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.