ETV Bharat / bharat

ಉ.ಪ್ರದೇಶ ಕೋವಿಡ್ ಪರೀಕ್ಷಾ ಅಭಿಯಾನ: ಡಬ್ಲ್ಯುಹೆಚ್‌ಒ ವರದಿಯೇ ಬೇರೆ, ವಾಸ್ತವವೇ ಬೇರೆ! - ಡಬ್ಲ್ಯುಹೆಚ್‌ಒ ವರದಿ

ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲು ಉತ್ತರ ಪ್ರದೇಶದಲ್ಲಿ ಐದು ದಿನಗಳ ವಿಶೇಷ ಅಭಿಯಾನ ಮಾಡಲಾಗಿತ್ತು. ಈ ಬಗ್ಗೆ ಡಬ್ಲ್ಯುಹೆಚ್‌ಒ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ, ನಮ್ಮ ಪ್ರತಿನಿಧಿಗಳು ಕಲೆ ಹಾಕಿದ ಮಾಹಿತಿ ಬೇರೆಯದೇ ಕಥೆ ಹೇಳುತ್ತಿದೆ ಎಂದು ತಿಳಿಸಿದೆ.

Covid testing data of UP does not support WHO claims
ಉತ್ತರ ಪ್ರದೇಶ ಕೋವಿಡ್ ಪರೀಕ್ಷೆ
author img

By

Published : May 18, 2021, 2:04 PM IST

ಹೈದರಾಬಾದ್/ಲಖನೌ: ಪರೀಕ್ಷೆ, ಚಿಕಿತ್ಸೆ ಮತ್ತು ಸಂಪರ್ಕ ಪತ್ತೆ ಹಚ್ಚುವಿಕೆಯನ್ನು ಹೆಚ್ಚಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡುವಿಕೆಯನ್ನು ತಡೆಯಲು, ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ಸರ್ಕಾರವು ನಡೆಸಿದ್ದ ಐದು ದಿನಗಳ ಮನೆ-ಮನೆ ಪರೀಕ್ಷಾ ಅಭಿಯಾನದ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಯ ಭಾರತೀಯ ಕಚೇರಿ ಪ್ರಕಟಿಸಿದ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದೆ.

ಈ ನಡುವೆ, ಕೋವಿಡ್ ಪರೀಕ್ಷೆಯ ಕುರಿತು ಈಟಿವಿ ಭಾರತ್ ಪ್ರತಿನಿಧಿಗಳು ಕಲೆ ಹಾಕಿದ ಮಾಹಿತಿ ಬೇರೆಯದೇ ಕಥೆ ಹೇಳುತ್ತದೆ. ಇತ್ತೀಚೆಗೆ ಗಾಝೀಪುರ ಜಿಲ್ಲೆಯ ಗಂಗಾನದಿಯಲ್ಲಿ ಶವಗಳು ತೇಲಿ ಬರುವ ಮೂಲಕ ಉತ್ತರ ಪ್ರದೇಶ ರಾಜ್ಯವು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಗ್ರಾಮೀಣ ಭಾಗದಲ್ಲಿ ಸೋಂಕು ಹರಡುವಿಕೆ ತಡೆಯಲು ಸರ್ಕಾರ ಐದು ದಿನಗಳ ಅಭಿಯಾನ ನಡೆಸಿದೆ. ಈ ಮೂಲಕ ರಾಜ್ಯದ 75 ಜಿಲ್ಲೆಗಳ 9,941 ಗ್ರಾಮಗಳನ್ನು ತಲುಪುವ ಗುರಿ ಹೊಂದಲಾಗಿತ್ತು. ಆದರೆ, ಈ ಅಭಿಯಾನದಲ್ಲಿ ವಿಶೇಷವಾದ ಯಾವುದೇ ಸಾಧನೆ ಆಗಿಲ್ಲ ಎಂಬುವುದು ಗೊತ್ತಾಗಿದೆ. ಅಭಿಯಾನದ ಕುರಿತು ಡಬ್ಲ್ಯುಹೆಚ್‌ಒ ವೆಬ್​ಸೈಟ್ https://www.covid19india.org/ ನಲ್ಲಿ ನೀಡಿರುವ ಅಂಕಿ ಅಂಶಗಳು ಮತ್ತು ಈಟಿವಿ ಭಾರತ್ ಪ್ರತಿನಿಧಿಗಳು ಗ್ರಾಮೀಣ ಭಾಗದ ಜನರು, ಆರೋಗ್ಯ ಕಾರ್ಯಕರ್ತರನ್ನು ಸಂದರ್ಶನ ನಡೆಸಿ ಸಂಗ್ರಹಿಸಿದ ಮಾಹಿತಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ​

ಐದು ದಿನಗಳ ಕೋವಿಡ್ ಪರೀಕ್ಷಾ ಅಭಿಯಾನಕ್ಕಾಗಿ 1,41, 610 ತಂಡಗಳು ಮತ್ತು 21,242 ಮೇಲ್ವಿಚಾರಕರನ್ನು ನಿಯೋಜಿಸಲಾಗಿತ್ತು ಎಂದು ಡಬ್ಲ್ಯುಹೆಚ್‌ಒನ ವರದಿ 'UTTAR PRADESH Going the last mile to stop COVID-19’ ತಿಳಿಸಲಾಗಿದೆ.

ಮೇ 7 ರಂದು ಡಬ್ಲ್ಯುಹೆಚ್​ಒ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದ ವರದಿಯಲ್ಲಿ, ಮೇ 5 ರಂದು ಪ್ರಾರಂಭವಾದ ಅಭಿಯಾನದ ಬಗ್ಗೆ ಮೇಲ್ವಿಚಾರಣೆ ಮಾಡಲು ಮತ್ತು ಸಮಯಕ್ಕೆ ಸರಿಯಾಗಿ ಮಾಹಿತಿ ಒದಗಿಸಲು ಅಧಿಕಾರಿಗಳು ಕ್ಷೇತ್ರ ಕಾರ್ಯದಲ್ಲಿ ತೊಡಗಿದ್ದರು ಎಂದು ಉತ್ತರ ಸರ್ಕಾರವನ್ನು ಬೆಂಬಲಿಸಿದೆ. ಅಭಿಯಾನದ ಮೊದಲ ದಿನ ಸುಮಾರು 2 ಸಾವಿರ ಸರ್ಕಾರಿ ತಂಡಗಳು ಸುಮಾರು 10 ಸಾವಿರ ಮನೆಗಳಿಗೆ ಭೇಟಿ ನೀಡಿದೆ ಎಂದು ಹೇಳಿದೆ.

ಆದರೆ, ಈಟಿವಿ ಭಾರತ ಪ್ರತಿನಿಧಿಗಳು ಸಂಗ್ರಹಿಸಿದ ಮಾಹಿತಿ ಪ್ರಕಾರ, https://www.covid19india.org/state/UP ವೆಬ್​ಸೈಟ್​ನಲ್ಲಿ ನೀಡಿದಂತೆ ಗಮನಾರ್ಹ ಬದಲಾವಣೆ ಏನೂ ಕಂಡು ಬಂದಿಲ್ಲ. ವಾಸ್ತವದಲ್ಲಿ ಅಭಿಯಾನ ನಡೆದ ದಿನಗಳಿಗಿಂತ ಇತರ ದಿನಗಳಲ್ಲಿ ಹೆಚ್ಚಿನ ಪರೀಕ್ಷೆಗಳು ನಡೆದಿವೆ.

ಭಾರತದ ಸರ್ಕಾರದ ಕೋವಿಡ್ ವೆಬ್​ಸೈಟ್ ಮತ್ತು ವಿವಿಧ ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲ್ಪಟ್ಟಂತೆ, ಉತ್ತರ ಪ್ರದೇಶದಲ್ಲಿ ಮೇ 1 ರಂದು 2,66,619, ಮೇ 2 ರಂದು 2,97,385, ಮೇ 3 ರಂದು 2, 29,613 ಮತ್ತು ಮೇ 4 ರಂದು 2,08,564 ಪರೀಕ್ಷೆಗಳನ್ನು ನಡೆಸಲಾಗಿದೆ

ಸರ್ಕಾರದ ಅಭಿಯಾನದ ದಿನಗಳಲ್ಲಿ 1,14, 610 ತಂಡಗಳು 2 ಟೆಸ್ಟ್ ಮಾಡಿದ್ದರೂ, ದಿನಕ್ಕೆ 2,83,220 ಟೆಸ್ಟ್ ಆಗಬೇಕಿತ್ತು. ಅಭಿಯಾನದ ಐದು ದಿನಗಳಲ್ಲಿ ಸುಮಾರು ಪ್ರತಿದಿನ ಪರಿಕ್ಷಾ ಪ್ರಮಾಣ 2,30,000 ಸಾವಿರದಿಂದ 5,10,000 ಆಗಬೇಕಿತ್ತು.

ರಾಜ್ಯ ಸರ್ಕಾರದ ವೆಬ್​ಸೈಟ್​ನಲ್ಲಿರುವ ಮಾಹಿತಿಯ ಪ್ರಕಾರ, ಉತ್ತರ ಪ್ರದೇಶದಲ್ಲಿ ಅಭಿಯಾನದ ಮೊದಲ ದಿನ, ಅಂದರೆ ಮೇ 5 ರಂದು 2,32,038 ಪರೀಕ್ಷೆಗಳನ್ನು ನಡೆಸಿದೆ. ಮುಂದಿನ ನಾಲ್ಕು ದಿನಗಳಲ್ಲಿ, ಅಂದರೆ ಮೇ 6 ರಂದು 2, 26,112, ಮೇ 7 ರಂದು 2,41,403 , ಮೇ 8 ರಂದು 2, 24,529 ಮತ್ತು ಮೇ 9 ರಂದು 2,29,595 ಪರೀಕ್ಷೆಗಳನ್ನು ನಡೆಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.