ETV Bharat / bharat

ಕೋವಿಡ್​​ ಲಸಿಕೆ ಹಾಕಿಸಿಕೊಳ್ಳದಿದ್ದರೆ ಕೆಲಸ ಕಳೆದುಕೊಳ್ಳಲಿದ್ದಾರಾ ಗೂಗಲ್​ ಉದ್ಯೋಗಿಗಳು? - ಲಸಿಕೆ ಹಾಕಿಸಿಕೊಳ್ಳದಿದ್ದರೆ ಕೆಲಸವಿಲ್ಲ

ಒಮಿಕ್ರಾನ್​​ ಭಿತಿ ಹೆಚ್ಚುತ್ತಿರುವ ಈ ಸಮಸಯದಲ್ಲಿ ಗೂಗಲ್​​ ಕೋವಿಡ್​ ರೂಲ್ಸ್​​ಗೆ ಹೆಚ್ಚು ಒತ್ತು ನೀಡುತ್ತಿದೆ. ಕೊವಿಡ್​ ನಿಯಮ ಪಾಲಿಸದವರಿಗೆ ಮತ್ತು ವ್ಯಾಕ್ಸಿನ್​ ಪಡೆಯದವರಿಗೆ ವೇತನ ಕಡಿತದ ಜೊತೆಗೆ ಕ್ರಮೇಣ ಕೆಲಸದಿಂದ ವಜಾ ಮಾಡುವ ಕ್ರಮಕ್ಕೆ ಗೂಗಲ್ ಮುಂದಾಗಿದೆ.

covid rules for google employees
ಗೂಗಲ್​ ಉದ್ಯೋಗಿಗಳಿಗೆ ಕೋವಿಡ್​ ನಿಯಮ
author img

By

Published : Dec 15, 2021, 4:07 PM IST

ನವದೆಹಲಿ: ಉದ್ಯೋಗಿಗಳು ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸದಿದ್ದಲ್ಲಿ, ಲಸಿಕೆ ಪಡೆಯದಿದ್ದಲ್ಲಿ ವೇತನ ಕಡಿತದ ಜೊತೆಗೆ ಕ್ರಮೇಣ ಕೆಲಸದಿಂದ ವಜಾ ಮಾಡುವ ಕ್ರಮಕ್ಕೆ ಗೂಗಲ್ ಮುಂದಾಗಿದೆ. ಈ ಕುರಿತು ಉದ್ಯೋಗಿಗಳಿಗೆ ಸೂಚನೆ ನೀಡಿರುವುದಾಗಿ ವರದಿಯಾಗಿದೆ.

ವರದಿಗಳ ಪ್ರಕಾರ, ಗೂಗಲ್ ಹೊರಡಿಸಿರುವ ಜ್ಞಾಪನಪತ್ರದಲ್ಲಿ ಕೋವಿಡ್ ಪ್ರಮಾಣಪತ್ರ ಅಪ್ಲೋಡ್​ ಮಾಡಲು ಸಮಯಾವಕಾಶ ನೀಡಲಾಗಿತ್ತು ಎಂದು ಹೇಳಿದೆ. ನಿಗದಿತ ಸಮಯ ಮುಗಿದರೂ ಕೋವಿಡ್ ಪ್ರಮಾಣಪತ್ರ ಅಪ್ಲೋಡ್​​ ಮಾಡದ ಅಥವಾ ವಿನಾಯಿತಿ ವಿನಂತಿಗಳಿಗೆ ಅನುಮೋದನೆ ಲಭಿಸದ ಉದ್ಯೋಗಿಗಳನ್ನು ಗೂಗಲ್ ಸಂಪರ್ಕಿಸಿ ಕ್ರಮ ಕೈಗೊಳ್ಳಲಿದೆ.

ಜನವರಿ 18ರ ಒಳಗೆ ಕೋವಿಡ್ ಲಸಿಕೆ ನಿಯಮಗಳನ್ನು ಪಾಲಿಸದ ಉದ್ಯೋಗಿಗಳನ್ನು 30 ದಿನಗಳವರೆಗೆ ಪಾವತಿ ಸಹಿತ ರಜೆಯಲ್ಲಿ ಇರಿಸಲಾಗುತ್ತದೆ. ಬಳಿಕ ಆರು ತಿಂಗಳವರಗೆ ಪಾವತಿ ರಹಿತ ವೈಯಕ್ತಿಕ ರಜೆ ಮತ್ತು ಅಂತಿಮವಾಗಿ ವಜಾಗೊಳಿಸಲಾಗುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ಫ್ರೆಂಚ್ ​ ಫ್ಯಾಷನ್ ಸಂಸ್ಥೆ 'ಚಾನೆಲ್' ಸಿಇಒ ಸ್ಥಾನಕ್ಕೆ ಭಾರತದ ಲೀನಾ ನಾಯರ್

ಒಮಿಕ್ರಾನ್​ ಆತಂಕದ ಹಿನ್ನೆಲೆ, ಉದ್ಯೋಗಿಗಳು ಕಚೇರಿಗೆ ಹಿಂತಿರುಗುವುದನ್ನು ಗೂಗಲ್ ಅಲ್ಪ ವಿಳಂಬಗೊಳಿಸಿತ್ತು. ಅಲ್ಲದೇ ಎಲ್ಲ ಉದ್ಯೋಗಿಗಳಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.