ETV Bharat / bharat

ಹತ್ಯಾಕಾಂಡ ನಡೆದ ಬಿರ್ಭೂಮ್​ನಲ್ಲಿ 40 ಕಚ್ಚಾ ಬಾಂಬ್​ಗಳು ಪತ್ತೆ.. ಕೇಸ್​ ಲಿಂಕ್​​ ಬಗ್ಗೆ ತನಿಖೆ - ಬಿರ್ಭೂಮ್​ನಲ್ಲಿ ದೇಶಿ ಬಾಂಬ್​ಗಳು ಪತ್ತೆ

ಬಿರ್ಭೂಮ್​ನಲ್ಲಿ ನಡೆದ ಹಿಂಸಾಚಾರದ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅನಧಿಕೃತ ಬಾಂಬ್​ ಹಾಗೂ ಬಂದೂಕುಗಳನ್ನು ವಶಪಡಿಸಿಕೊಳ್ಳಲು ಆದೇಶಿಸಿದ ಬೆನ್ನಲ್ಲೇ ರಾಜ್ಯದಲ್ಲಿ 40ಕ್ಕೂ ಹೆಚ್ಚು ಕಚ್ಚಾ ಬಾಂಬ್​ಗಳು ಒತ್ತೆಯಾಗಿವೆ.

bombs-recovered
ದೇಶಿ ಬಾಂಬ್​ಗಳು ಪತ್ತೆ
author img

By

Published : Mar 26, 2022, 8:56 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬಿರ್ಭೂಮ್​ ಹಿಂಸಾಚಾರದಲ್ಲಿ 8 ಜನರನ್ನು ಸಜೀವವಾಗಿ ದಹಿಸಿದ ಘಟನೆ ನಡೆದು 3 ದಿನಗಳ ಬಳಿಕ ರಾಜ್ಯದಲ್ಲಿ 40ಕ್ಕೂ ಅಧಿಕ ದೇಶಿ ಬಾಂಬ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಾಂಬ್​ಗಳು ಮತ್ತು ಬಿರ್ಭೂಮ್​ನಲ್ಲಿ ನಡೆದ ಹತ್ಯಾಕಾಂಡಕ್ಕೆ ಯಾವುದಾದರೂ ಸಂಬಂಧವಿದೆಯಾ ಎಂಬುವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯಾದ್ಯಂತ ಅಕ್ರಮ ಬಾಂಬ್​ಗಳು ಮತ್ತು ಬಂದೂಕುಗಳನ್ನು ವಶಕ್ಕೆ ಪಡೆಯಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೂಚಿಸಿದ ಬಳಿಕ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು ಎಲ್ಲೆಡೆ ಜಾಲಾಡುತ್ತಿದ್ದಾರೆ. ಈ ವೇಳೆ ಬಿರ್ಭೂಮ್​ ಜಿಲ್ಲೆಯ ರಾಮ್​ಪುರಹತ್​ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದ ಹಿಂಭಾಗ 40ಕ್ಕೂ ಅಧಿಕ ಕಚ್ಚಾ ಬಾಂಬ್​ಗಳು ಪತ್ತೆಯಾಗಿವೆ. ಇವುಗಳನ್ನು ಬಕೆಟ್​ಗಳಲ್ಲಿ ಅಡಗಿಸಿಡಲಾಗಿತ್ತು.

ಸಿಕ್ಕಿರುವ ಈ ಕಚ್ಚಾ ಬಾಂಬ್​ಗಳಿಗೂ 8 ಜನರ ಸಜೀವ ದಹನ ಪ್ರಕರಣಕ್ಕೂ ಏನಾದರೂ ಲಿಂಕ್​ ಇದೆಯಾ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಇವುಗಳನ್ನು ಬಾಂಬ್​ ದಳದಿಂದ ನಿಷ್ಕ್ರಿಯಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಚ್ಚರಿಕೆ ವಹಿಸಲು ಬಿಜೆಪಿ ಕರೆ: 40ಕ್ಕೂ ಅಧಿಕ ಕಚ್ಚಾ ಬಾಂಬ್​ಗಳು ಪತ್ತೆಯಾದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು, ಮುಖಂಡರು ಎಚ್ಚರಿಕೆ ವಹಿಸಲು ಕರೆ ನೀಡಲಾಗಿದೆ. ಪ್ರಕರಣವನ್ನು ಬಿಜೆಪಿಯ ತಲೆಗೆ ಕಟ್ಟಲು ಪಕ್ಷದ ಕಚೇರಿ, ಕಟ್ಟಡಗಳಲ್ಲಿ ಬಾಂಬ್​ಗಳನ್ನು ತಂದಿಡುವ ಹುನ್ನಾರ ನಡೆದಿದೆ. ಈ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ಬಿಜೆಪಿ ತನ್ನ ಮುಖಂಡರು, ಕಾರ್ಯಕರ್ತರಿಗೆ ಸೂಚನೆ ನೀಡಿದೆ. ಪ್ರತಿಪಕ್ಷ ಬಿಜೆಪಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪಕ್ಷದ ಕಚೇರಿಗಳಲ್ಲಿ ಬಾಂಬ್‌ಗಳನ್ನು ಇರಿಸಲೂಬಹುದು ಎಂದು ಎಚ್ಚರಿಸಿದೆ.

ಓದಿ: ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕನಾದ್ರೂ 20 ಕಾಲೇಜುಗಳ ಒಡೆಯ.. ಇಲ್ಲೋರ್ವ ಕುಬೇರ ಟೀಚರ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.