ETV Bharat / bharat

ಚುನಾವಣೆಗಳಲ್ಲಿ 6.5 ಲಕ್ಷ ದೋಷಯುಕ್ತ VVPAT ಬಳಕೆ ಆರೋಪ: ಸ್ಪಷ್ಟನೆ ನೀಡಲು ಕಾಂಗ್ರೆಸ್ ಆಗ್ರಹ​

author img

By

Published : Apr 21, 2023, 6:39 PM IST

ಯಾವ ರಾಜ್ಯದಲ್ಲಿ ಎಷ್ಟು ದೋಷಪೂರಿತ ವಿವಿಪ್ಯಾಟ್‌ ಯಂತ್ರಗಳನ್ನು ಬಳಸಲಾಗಿದೆ ಎಂಬುದರ ಕುರಿತು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ವಿವರಿಸಬೇಕೆಂದು ಕಾಂಗ್ರೆಸ್​ ಆಗ್ರಹಿಸಿದೆ.

cong-urges-centre-ec-to-clarify-over-use-of-6-dot-5-lakh-faulty-vvpat-machines-in-polls-since-2019
2019ರಿಂದ ವಿವಿಧ ಚುನಾವಣೆಗಳಲ್ಲಿ 6.5 ಲಕ್ಷ ದೋಷಯುಕ್ತ ವಿವಿಎಂಗಳ ಬಳಕೆ ಆರೋಪ: ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್​

ನವದೆಹಲಿ: 2019ರ ಲೋಕಸಭೆ ಚುನಾವಣೆ ಮತ್ತು ನಂತರದ ರಾಜ್ಯಗಳ ಚುನಾವಣೆಗಳಲ್ಲಿ 6.5 ಲಕ್ಷ ದೋಷಯುಕ್ತ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗಿದೆ ಎಂಬ ವರದಿಗಳ ಕುರಿತು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್​ ಒತ್ತಾಯಿಸಿದೆ.

"2018ರಲ್ಲಿ ಚುನಾವಣಾ ಆಯೋಗವು ಒಟ್ಟು 17.5 ಲಕ್ಷ ವಿವಿಪ್ಯಾಟ್‌ಗಳನ್ನು ಖರೀದಿಸಿದೆ. 2021ರಲ್ಲಿ ಇವುಗಳ ಪೈಕಿ ಶೇ.37ರಷ್ಟು ದೋಷಪೂರಿತ ಎಂದು ಕಂಡುಬಂದ ನಂತರ ಚುನಾವಣಾ ಆಯೋಗವು ತಯಾರಕರಿಗೆ ಪತ್ರ ಬರೆದಿದೆ. ಇದೇ ಯಂತ್ರಗಳನ್ನು 2019ರ ಲೋಕಸಭೆ ಮತ್ತು ನಂತರದ ವಿಧಾನಸಭಾ ಚುನಾವಣೆಗಳಲ್ಲಿ ಬಳಸಲಾಗಿದೆ. ಈ ವಿವಿಪ್ಯಾಟ್ ಯಂತ್ರಗಳು ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ವಿಶ್ವಾಸ ಬಲಪಡಿಸಲು ಉದ್ದೇಶ ಹೊಂದಿತ್ತು. ಆದರೆ, ದೋಷಪೂರಿತ ಯಂತ್ರಗಳಿಗೆ ಸಂಬಂಧಿಸಿದಂತೆ ಎದ್ದಿರುವ ಅನುಮಾನಗಳನ್ನು ಸ್ಪಷ್ಟಪಡಿಸುವಂತೆ ನಾವು ಪ್ರಧಾನಿ, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ಒತ್ತಾಯಿಸುತ್ತೇವೆ'' ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಹೇಳಿದರು.

ಇದನ್ನೂ ಓದಿ: ಕರ್ನಾಟಕ ಚುನಾವಣೆಯಲ್ಲಿ ಸಂಪೂರ್ಣವಾಗಿ ಹೊಸ‌ ಮತಯಂತ್ರಗಳ ಬಳಕೆ: ಮನೋಜ್ ಕುಮಾರ್ ಮೀನಾ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಹೈದರಾಬಾದ್​ನ ಇಸಿಐಎಲ್​ನಿಂದ ನಾಲ್ಕು ಲಕ್ಷ ವಿವಿಪ್ಯಾಟ್​ ಮತ್ತು ಬೆಂಗಳೂರಿನ ಬಿಇಎಲ್​ನಿಂದ 1.8 ಲಕ್ಷ ಮತ್ತು ಪಂಚಕುಲದ ಬಿಇಎಲ್​ನಿಂದ ಖರೀದಿಸಿದ 68,500 ವಿವಿಪ್ಯಾಟ್​ ಸೇರಿ ಒಟ್ಟು 6.5 ಲಕ್ಷ ಯಂತ್ರಗಳು ದೋಷಪೂರಿತ ಎಂದು ಕಂಡು ಬಂದಿರುವ ಬಗ್ಗೆ ವರದಿಯಾಗಿದೆ. ಇದನ್ನು ನಿರ್ಲಕ್ಷಿಸುವಂತಿಲ್ಲ. ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಮತ್ತು ಮತದಾರರಿಗೆ ಇದರಲ್ಲಿ ನಡೆದ ತಪ್ಪನ್ನು ವಿವರಿಸಬೇಕು'' ಎಂದು ಒತ್ತಾಯಿಸಿದರು.

ಇದೇ ವೇಳೆ, ''ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಪ್ರಕಾರ, ಖರೀದಿಸಿದ ಏಳು ದಿನಗಳೊಳಗೆ ದೋಷ ಕಂಡುಬಂದಲ್ಲಿ ದುರಸ್ತಿಗಾಗಿ ಯಂತ್ರಗಳನ್ನು ಕಳುಹಿಸಬೇಕು. ಆದರೆ, ಇಷ್ಟು ಸಮಯದವರೆಗೆ ಏಕೆ ವಿಳಂಬ ಮಾಡಲಾಗಿತ್ತು?. ಅದೇ ದೋಷಪೂರಿತ ಯಂತ್ರಗಳನ್ನು 2019ರಿಂದ ವಿವಿಧ ಚುನಾವಣೆಗಳಲ್ಲಿ ಬಳಸಲಾಗಿದೆ. ಯಾವ ರಾಜ್ಯದ ಚುನಾವಣೆಯಲ್ಲಿ ಎಷ್ಟು ದೋಷಪೂರಿತ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗಿದೆ ಎಂಬುದರ ಕುರಿತು ಸರ್ಕಾರ ಮತ್ತು ಚುನಾವಣಾ ಆಯೋಗ ವಿವರಿಸಬೇಕು. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು'' ಎಂದೂ ಆಗ್ರಹಿಸಿದರು.

ಇದನ್ನೂ ಓದಿ: ಇವಿಎಂ ಯಂತ್ರಗಳ ದುರುಪಯೋಗ ಆಗಲ್ಲ.. ಕಾಂಗ್ರೆಸ್ ಮನವಿ ತಿರಸ್ಕಾರ: ಮುಖ್ಯ ಚುನಾವಣಾ ಆಯುಕ್ತರ ಸ್ಟಷ್ಟನೆ

ಮುಂದುವರೆದು, ''ಕಾಂಗ್ರೆಸ್​ಗೆ ಚುನಾವಣೆಯಲ್ಲಿ ಗೆದ್ದಾಗ ಯಂತ್ರಗಳಲ್ಲಿ ಯಾವುದೇ ದೋಷವಿರಲಿಲ್ಲ. ಆದರೆ, ಸೋತಾಗ ಮಾತ್ರ ಕಾಂಗ್ರೆಸ್​ ಈ ಕುರಿತು ಅಳುತ್ತದೆ ಎಂದು ಬಿಜೆಪಿ ಸಾಮಾನ್ಯವಾಗಿ ಟೀಕೆ ಮಾಡುತ್ತದೆ. ಅಂದರೆ, ಒಂದು ರಾಜ್ಯದಲ್ಲಿ ಗೆದ್ದೆವು ಎಂಬ ಮಾತ್ರ ನಾವು ಆತಂಕ ಪಡುವುದನ್ನು ನಿಲ್ಲಿಸಬೇಕೇ?, ನಾವು ದೀರ್ಘಕಾಲದವರೆಗೆ ಚುನಾವಣೆಯಲ್ಲಿ ಪಾರದರ್ಶಕತೆಯ ವಿಷಯವನ್ನು ಎತ್ತುತ್ತಲೇ ಇರುತ್ತವೆ. ಇವಿಎಂಗಳು ಮತ್ತು ವಿವಿಪ್ಯಾಟ್‌ಗಳ ಬಗ್ಗೆ ಮತದಾರರ ಮನಸ್ಸಿನಲ್ಲಿರುವ ಯಾವುದೇ ಸಂದೇಹಗಳನ್ನು ಪರಿಹರಿಸುವುದು ಸರ್ಕಾರ ಮತ್ತು ಚುನಾವಣಾ ಆಯೋಗದ ಕರ್ತವ್ಯ. ಹಾಗೆ ಸರ್ಕಾರ ಪ್ರತಿಪಕ್ಷಗಳ ಕಾಳಜಿಗೆ ಸ್ಪಂದಿಸಬೇಕೇ ಹೊರತು ಅದನ್ನು ತಳ್ಳಿ ಹಾಕುವಂತಿಲ್ಲ'' ಎಂದು ಖೇರಾ ಹೇಳಿದರು.

ಇವಿಎಂಗಳು ಮತ್ತು ವಿವಿಪ್ಯಾಟ್‌ಗಳ ಬಗ್ಗೆ ಕಾಂಗ್ರೆಸ್​ ಹಲವು ದಿನಗಳಿಂದಲೂ ಪ್ರಶ್ನೆ ಮಾಡುತ್ತಲೇ ಇದೆ. ಎರಡು ವಾರಗಳ ಹಿಂದೆ ಎನ್‌ಸಿಪಿ ನಾಯಕ ಶರದ್ ಪವಾರ್ ಕೂಡ ದೆಹಲಿಯಲ್ಲಿ ಸುಮಾರು 14 ಪ್ರತಿಪಕ್ಷಗಳ ಸಭೆ ನಡೆಸಿ ದೋಷಪೂರಿತ ಇವಿಎಂಗಳ ವಿಷಯದ ಬಗ್ಗೆ ಚರ್ಚಿಸಿದ್ದರು. ಅದಕ್ಕೂ ಮೊದಲು, ಅನೇಕರು ಇವಿಎಂಗಳ ಲೋಪಗಳು ಕುರಿತು ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಮನವಿಗಳನ್ನೂ ಸಲ್ಲಿಸಿದ್ದರು.

ಇದನ್ನೂ ಓದಿ: ಇವಿಎಂ ಬಳಕೆ ತಡೆ ಕೋರಿದ್ದ ಅರ್ಜಿ ಸುಪ್ರೀಂಕೋರ್ಟ್​ನಿಂದ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.