ETV Bharat / bharat

ಕಾಮನ್​ವೆಲ್ತ್​ 2022 ಮಹಿಳಾ ಹಾಕಿ: ಘಾನಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ..

ಶುಕ್ರವಾರ ನಡೆದ 2022 ಕಾಮನ್​ವೆಲ್ತ್​ ಹಾಕಿ ಪಂದ್ಯದಲ್ಲಿ ಭಾರತದ ವನಿತೆಯರು ಘಾನ ತಂಡದ ವಿರುದ್ದ 5-0 ಅಂತರದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ವಿಶ್ವಕಪ್​ನಲ್ಲಿ ಕಳಪೆ ಫಾರ್ಮ್​ನಲ್ಲಿದ್ದ ತಂಡ ಇದೀಗ ಉತ್ತಮ ನಿರ್ವಹಣೆ ತೋರುವ ಮೂಲಕ ಕಾಮನ್​ವೆಲ್ತ್​ನಲ್ಲಿ ಮೊದಲ ಜಯಗಳಿಸಿದೆ.

CWG 2022
ಕಾಮನ್​ವೆಲ್ತ್​ 2022 ಮಹಿಳಾ ಹಾಕಿ ಪಂದ್ಯ
author img

By

Published : Jul 30, 2022, 7:22 AM IST

ಬರ್ಮಿಂಗ್ಹ್ಯಾಮ್: ಶುಕ್ರವಾರ ನಡೆದ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ​ ಮಹಿಳಾ ಹಾಕಿ ತಂಡ ಘಾನ ವಿರುದ್ದ 5-0 ಅಂತರದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಕಾಮನ್​ವೆಲ್ತ್​ ಗೇಮ್ಸ್​​ನಲ್ಲಿ ತಂಡ ಶುಭರಾಂಭ ಮಾಡಿದೆ.

ಡ್ರ್ಯಾಗ್​ ಫ್ಲಿಕ್ಕರ್​ ಗುರ್ಜಿತ್​ ಕೌರ್​ ಅವರ 2 ಗೋಲ್​ಗಳು ಭಾರತವನ್ನು ಗೆಲುವಿನ ದಡ ಸೇರಿಸಲು ಸಹಾಯ ಮಾಡಿತು. ಈ ತಿಂಗಳ ಆರಂಭದಲ್ಲಿ ನೆದರ್ಲ್ಯಾಂಡ್ಸ್ ಮತ್ತು ಸ್ಪೇನ್​ನಲ್ಲಿ ನಡೆದ ಎಫ್​ಐಹೆಚ್​ ಮಹಿಳಾ ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ತಂಡ ಇದೀಗ ಕಾಮನ್​ವೆಲ್ತ್​ ಗೇಮ್​ನಲ್ಲಿ ಉತ್ತಮ ಆರಂಭ ಮಾಡಿದೆ.

ಭಾರತ ತಂಡ ಮೊದಲ ಎರಡು ಕ್ವಾರ್ಟರ್​ನಲ್ಲಿ ತಲಾ ಒಂದು ಗೋಲ್​ಗಳಿಸಿದರೆ, ಮೂರನೇ ಕ್ವಾರ್ಟರ್​ನಲ್ಲಿ ಎರಡು ಗೋಲುಗಳಿಸಿತು. ನಾಲ್ಕನೇ ಕ್ವಾರ್ಟರ್​ನಲ್ಲಿ ಮತ್ತೊಂದು ಗೋಲುಗಳಿಸುವ ಮೂಲಕ ಗೆಲುವ ಖಚಿತ ಪಡಿಸಿತು.

ಪಂದ್ಯ ಆರಂಭಿಕ ಮೂರನೇ ನಿಮಿಷದಲ್ಲಿ ಭಾರತದ ಪರ ಗುರ್ಜಿತ್​ ಕೌರ್​ ಅವರು ಪೆನಾಲ್ಟಿ ಕಾರ್ನರ್ ಅ​ನ್ನು ಸದುಪಯೋಗ ಪಡೆಸಿಕೊಂಡು ಗೋಲ್​ ಭಾರಿಸುವ ಮೂಲಕ ತಂಡಕ್ಕೆ 1-0 ಮನ್ನಡೆ ತಂದುಕೊಟ್ಟರು. ಇನ್ನು ಫಾರ್ವರ್ಡ್​ ಆಟಗಾರ್ತಿ ನೇಹಾ 28ನೇ ನಿಮಿಷದಲ್ಲಿ ಫೀಲ್ಡ್​ ಗೋಲು ಭಾರಿಸುವ ಮೂಲಕ ತಂಡ 2-0 ಅಂತರದ ಮುನ್ನಡೆ ಸಾಧಿಸಿತು.

ಸಂಗೀತ ಕುಮಾರಿ 36ನೇ ನಿಮಿಷಕ್ಕೆ ಮೂರನೇ ಗೋಲು ಬಾರಿಸಿದರು. ಪೆನಾಲ್ಟಿ ಸ್ಟ್ರೋಕ್​ ಮೂಲಕ ಗುರ್ಜಿತ್​ ಕೌರ್​ ಬಾಲನ್ನು ಗೋಲಿಗೆ ಅಟ್ಟುವ ಮೂಲಕ ಭಾರತ 4-0 ಅಂತರದ ಮುನ್ನಡೆ ಸಾಧಿಸಿತು. ಇನ್ನು ಯುವ ಆಟಗಾರ್ತಿ ಸಲೀಮಾ ಟೆಟೆ ಪಂದ್ಯ ಮುಗಿಯಲು ನಾಲ್ಕು ನಿಮಿಷ ಭಾಕಿ ಇರುವಾಗ ಗೋಲು ಭಾರಿಸುವ ಮೂಲಕ ಸುಲಭವಾಗಿ ಭಾರತ ತಂಡ ಜಯ ಸಾಧಿಸಿತು.

ಇದನ್ನೂ ಓದಿ: ರೋಹಿತ್, ಕಾರ್ತಿಕ್ ಸ್ಫೋಟಕ ಆಟ.. ವೆಸ್ಟ್ ಇಂಡೀಸ್ ಗೆಲುವಿಗೆ 191ರನ್​ಗಳ ಟಾರ್ಗೆಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.