ತಿರುವನಂತಪುರಂ (ಕೇರಳ): ತಿರುವನಂತಪುರಂನಲ್ಲಿ ದುರಂತವೊಂದು ಸಂಭವಿಸಿದೆ. ಖಾರ ತಿನಿಸು ತಿನ್ನುವಾಗ ಪುಟಾಣಿ ಉಸಿರುಗಟ್ಟಿ ಸಾವಿಗೀಡಾಗಿದೆ.
ಕಾಟನ್ ಹಿಲ್ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿರುವ ಪುಟ್ಟ ಬಾಲಕಿ ನಿವೇದಿತಾ ನಿನ್ನೆ ತ್ರಿಕ್ಕಣಪುರಂನಲ್ಲಿರುವ ತಮ್ಮ ಮನೆಯಲ್ಲಿ ಮಧ್ಯಾಹ್ನ ತಿಂಡಿ ಸೇವಿಸುತ್ತಿದ್ದಳು. ಈ ವೇಳೆ ಆಕೆಗೆ ಉಸಿರುಗಟ್ಟಿದೆ. ಮಗು ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ಶಾಂತಿವಿಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿಂದ ಎಸ್‌ಎಟಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.
ಬಾಲಕಿ ತ್ರಿಕ್ಕಣಪುರಂ ಮೂಲದ ರಾಜೇಶ್ ಮತ್ತು ಕವಿತಾ ಅವರ ಏಕೈಕ ಪುತ್ರಿ.