ETV Bharat / bharat

ಬಾಲಿವುಡ್​ ಡ್ಯಾನ್ಸ್​ ಕಿಂಗ್​ ರೆಮೋ ಡಿಸೋಜಾ ಸೋದರ ಮಾವ ಆತ್ಮಹತ್ಯೆಗೆ ಶರಣು!

author img

By

Published : Jan 21, 2022, 7:44 AM IST

ನೃತ್ಯ ಸಂಯೋಜಕ ಮತ್ತು ನಿರ್ದೇಶಕ ರೆಮೋ ಡಿಸೋಜಾ ಅವರ ಸೋದರ ಮಾವ ಜೇಸನ್ ವಾಟ್ಕಿನ್ಸ್ ಗುರುವಾರ ಅಂಧೇರಿಯ ಯಮುನಾ ನಗರದ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Remo DSouza brother in law found dead in Mumbai  Jason Watkins was suffering from health issues  Watkin dies by suicide  mumbai Police registered a case  ರೆಮೋ ಡಿಸೋಜಾ ಸೋದರ ಮಾವ ಆತ್ಮಹತ್ಯೆಗೆ ಶರಣು  ಅನಾರೋಗ್ಯದಿಂದ ಬಳಲುತ್ತಿದ್ದ ಜೇಸನ್ ವಾಟ್ಕಿನ್ಸ್  ಜೇಸನ್ ವಾಟ್ಕಿನ್ಸ್ ಆತ್ಮಹತ್ಯೆ  ಮುಂಬೈ ಪೊಲೀಸರಿಂದ ತನಿಖೆ ಚುರುಕು
ರೆಮೋ ಡಿಸೋಜಾ ಸೋದರ ಮಾವ ಆತ್ಮಹತ್ಯೆಗೆ ಶರಣು

ಮುಂಬೈ: ನೃತ್ಯ ನಿರ್ದೇಶಕ ಮತ್ತು ನಿರ್ದೇಶಕ ರೆಮೋ ಡಿಸೋಜಾ ಅವರ ಸೋದರ ಮಾವ ಜೇಸನ್ ವಾಟ್ಕಿನ್ಸ್ ಅವರು ಗುರುವಾರ ಅಂಧೇರಿಯ ಯಮುನಾ ನಗರದ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೇಸನ್ ವಾಟ್ಕಿನ್ಸ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದ್ದು, ಆ ಕಾರಣದಿಂದಲೇ ಆತ ಈ ಆತ್ಮಹತ್ಯೆಗೆ ಮುಂದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅವರ ಪೋಷಕರು ಔಷಧ ಖರೀದಿಸಲು ಹೋದಾಗ ಅವರು ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಓದಿ: ಕೊರೊನಾದಿಂದ ಗುಣಮುಖರಾಗಿ 'ಕುಂಡಲಿ ಭಾಗ್ಯ' ಸೆಟ್​ಗೆ ಮರಳಿದ ಶ್ರದ್ಧಾ ಆರ್ಯ

ಪೋಷಕರು ಹಿಂತಿರುಗಿದಾಗ ಅವರು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ತಕ್ಷಣ, ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ಆದರೆ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ನಂತರ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.