ಚೆನ್ನೈ(ತಮಿಳುನಾಡು): ಮುಖ್ಯಮಂತ್ರಿ ಸ್ಟಾಲಿನ್ ಅವರು ತಮಿಳುನಾಡು ಹೌಸಿಂಗ್ ಬೋರ್ಡ್‌ನ ಹೈ ಇನ್‌ಕಮ್ ಗ್ರೂಪ್ ಫ್ಲಾಟ್‌ನಲ್ಲಿ ತೆಲಂಗಾಣ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರ ತಂದೆ ಕುಮಾರಿ ಅನಂತನ್ ಅವರಿಗೆ ಮನೆ ಮಂಜೂರು ಮಾಡಿದ್ದಾರೆ.
ಕುಮಾರಿ ಅನಂತನ್ ಅವರು ಕನ್ಯಾಕುಮಾರಿಯ ಕುಮಾರಿಮಂಗಳಂನ ಸ್ವಾತಂತ್ರ್ಯ ಹೋರಾಟಗಾರ ಅರಿಕ್ರಿಟ್ಟಿನನ್- ತಂಗಮ್ಮಾಳ್ ದಂಪತಿಯ ಪುತ್ರ. ಅವರು ನಾಲ್ಕು ಬಾರಿ ವಿಧಾನಸಭೆ ಸದಸ್ಯರಾಗಿ, ಒಮ್ಮೆ ಸಂಸತ್ ಸದಸ್ಯರಾಗಿ ಮತ್ತು ತಮಿಳುನಾಡು ತಾಳೆ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: 'ಇಂಡಿಯಾವನ್ನು ಹಿಂದಿಯಾ ಮಾಡುವ ಪ್ರಯತ್ನ ನಿಲ್ಲಿಸಿ': ಅಮಿತ್ ಶಾ ವಿರುದ್ಧ ಸ್ಟಾಲಿನ್ ವಾಗ್ದಾಳಿ
ವಾಸಕ್ಕೆ ತಮಿಳುನಾಡು ಸರ್ಕಾರದ ವತಿಯಿಂದ ಮನೆ ನೀಡಬೇಕು ಎಂದು ಮನವಿ ಮಾಡಿದ್ದರು. ಅವರ ಕೋರಿಕೆಯ ಮೇರೆಗೆ ಸಿಎಂ ಸ್ಟಾಲಿನ್ ಅವರು ಮಂಗಳವಾರ ಸೆಕ್ರೆಟರಿಯಟ್‌ನಲ್ಲಿರುವ ಅಣ್ಣಾನಗರ ವಲಯದಲ್ಲಿರುವ ತಮಿಳುನಾಡು ಹೌಸಿಂಗ್ ಬೋರ್ಡ್‌ನಲ್ಲಿ ಫ್ಲ್ಯಾಟ್ ನೀಡಿ, ಆದೇಶ ಹೊರಡಿಸಿದರು.
ಇದನ್ನೂ ಓದಿ: ಒಂದು ಭಾಷೆ, ಸಂಸ್ಕೃತಿ ಹೇರಲು ಪ್ರಯತ್ನಿಸುವವರು ದೇಶದ ಶತ್ರುಗಳು: ಸಿಎಂ ಸ್ಟಾಲಿನ್