ಕಂಕೇರ್(ಛತ್ತೀಸ್ಗಢ): ಇಲ್ಲಿನ ಕಂಕೇರ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ಬಸ್ತಾರ್ ಲಾಡ್ಜ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತಿ-ಪತ್ನಿಯ ಮೃತದೇಹ ಪತ್ತೆಯಾಗಿದ್ದು, ಕೋಣೆಯ ಹಾಸಿಗೆಯ ಮೇಲೆ ಇಬ್ಬರು ಮಕ್ಕಳ ಶವ ಕೂಡಾ ಸಿಕ್ಕಿದೆ. ದಂಪತಿ ಆತ್ಮಹತ್ಯೆಗೆ ಶರಣಾಗುವುದಕ್ಕೂ ಮುಂಚಿತವಾಗಿ ತಮ್ಮ ಮಕ್ಕಳಿಗೆ ವಿಷವುಣಿಸಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಇಬ್ಬರ ಮಕ್ಕಳ ವಯಸ್ಸು 8ರಿಂದ 9 ವರ್ಷ ಎನ್ನಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಕುಟುಂಬ ಕಂಕೇರ್ನ ಬಸ್ತಾರ್ನಲ್ಲಿ ಉಳಿದುಕೊಂಡಿದ್ದರು. ಗುರುವಾರ ರಾತ್ರಿ 10 ಗಂಟೆಗೆ ಕೋಣೆಯ ಬಾಗಿಲು ತೆರೆಯದಿದ್ದಾಗ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದಾಗ ಮೃತದೇಹಗಳು ಕಂಡುಬಂದಿವೆ. ಸಾವಿಗೆ ಮುಖ್ಯ ಕಾರಣವೇನೆಂದು ತಿಳಿದು ಬಂದಿಲ್ಲ. ಮೃತರನ್ನು ಸವಿತಾ, ದೇವಾಂಗನ್ ಮಕ್ಕಳಾದ ಗುಂಗುನ್ ಹಾಗೂ ಟಕ್ಟುಕ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಶಿರಡಿಯಲ್ಲಿ ಟ್ರಕ್- ರಿಕ್ಷಾ ನಡುವೆ ಭೀಕರ ಅಪಘಾತ: 6 ಮಂದಿ ದುರ್ಮರಣ
ಬುಧವಾರದಿಂದಲೂ ಲಾಡ್ಜ್ನಲ್ಲಿ ಈ ಕುಟುಂಬ ಉಳಿದುಕೊಂಡಿತ್ತು. ನಿನ್ನೆ ರಾತ್ರಿ ಇವರೀಗ ಊಟ ನೀಡಲು ಲಾಡ್ಜ್ ಸಿಬ್ಬಂದಿ ಮುಂದಾಗಿದ್ದು, ಬಾಗಿಲು ತೆರೆಯದ ಕಾರಣ ಪ್ರಕರಣ ಬೆಳಕಿಗೆ ಬಂದಿದೆ.