ETV Bharat / bharat

ಬ್ರಾಹ್ಮಣರ ವಿರುದ್ಧ ವಿವಾದಿತ ಹೇಳಿಕೆ: ಛತ್ತೀಸ್​​ಗಢ ಸಿಎಂ ಬಘೇಲ್​​ ಅವರ ತಂದೆಗೆ 15 ದಿನಗಳ ನ್ಯಾಯಾಂಗ ಬಂಧನ - ಛತ್ತೀಸ್​​ಗಢ ಸಿಎಂ ಬಘೇಲ್​​ ತಂದೆ

Chhattisgarh CM Bhupesh Baghel’s father arrested: ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಗಂಭೀರ ಆರೋಪದಲ್ಲಿ ಛತ್ತೀಸ್​ಗಢ ಸಿಎಂ ಭೂಪೇಶ್ ಬಘೇಲ್ ಅವರ ತಂದೆ ನಂದ ಕುಮಾರ್ ಬಘೇಲ್ ಅವರನ್ನು ರಾಯ್ಪುರ​ ಪೊಲೀಸರು ಬಂಧಿಸಿದ್ದಾರೆ. ಕೋರ್ಟ್‌ ಆರೋಪಿಯನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Bhupesh Bagel father
Bhupesh Bagel father
author img

By

Published : Sep 7, 2021, 4:36 PM IST

ರಾಯ್ಪುರ್​​(ಛತ್ತೀಸ್​​ಗಢ): ಬ್ರಾಹ್ಮಣರ ಬಗ್ಗೆ ವಿವಾದಿತ ಹೇಳಿಕೆ ನೀಡಿರುವ ಛತ್ತೀಸ್​​ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಂದ ಕುಮಾರ್ ಬಘೇಲ್ ಅವರನ್ನು ಬಂಧಿಸಿರುವ ಪೊಲೀಸರು, 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಪಡೆದುಕೊಂಡಿದ್ದಾರೆ.

  • #UPDATE | Chhattisgarh CM Bhupesh Baghel’s father Nand Kumar Baghel has been sent to 15-day judicial custody by a court in Raipur for allegedly making derogatory remarks against Brahmin community, says Nand Kumar's lawyer Gajendra Sonkar https://t.co/CWWR5zWal3

    — ANI (@ANI) September 7, 2021 " class="align-text-top noRightClick twitterSection" data=" ">

ವಿವಾದಿತ ಹೇಳಿಕೆ ಏನು?

'ಬ್ರಾಹ್ಮಣರು ವಿದೇಶಿ ಮೂಲದವರು. ಅವರನ್ನು ದೇಶದಿಂದ ಹೊರಗೆ ಓಡಿಸಬೇಕು' ಎಂದು ವಿವಾದಿತ ಹೇಳಿಕೆ ನೀಡಿದ್ದ ನಂದ ಕುಮಾರ್ ಬಘೇಲ್​ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ಈ ಬೆನ್ನಲ್ಲೇ ಅವರನ್ನು ಬಂಧಿಸಿರುವ ಪೊಲೀಸರು ಕೋರ್ಟ್​​ಗೆ ಹಾಜರುಪಡಿಸಿದ್ದಾರೆ. ಈ ಕುರಿತ ವಿಚಾರಣೆ ನಡೆಸಿದ ಕೋರ್ಟ್​ ಆರೋಪಿಯನ್ನು​ 15 ದಿನಗಳ ನ್ಯಾಯಾಂಗ ಬಂಧನ ಒಪ್ಪಿಸಿದೆ.

ಇದನ್ನೂ ಓದಿ: ಸಮುದಾಯವೊಂದರ ವಿರುದ್ಧ ಅವಹೇಳಕಾರಿ ಹೇಳಿಕೆ: ಛತ್ತೀಸ್​ಗಢ ಸಿಎಂ ಬಘೇಲ್ ತಂದೆ ವಿರುದ್ಧ ದೂರು

86 ವರ್ಷದ ನಂದ ಕುಮಾರ್ ಬಘೇಲ್​ ವಿರುದ್ಧ ರಾಯ್ಪುರದ ಡಿಡಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ(IPC) ಸೆಕ್ಷನ್ 153-A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷ ಭಾವನೆ ಮೂಡಿಸುವುದು) ಮತ್ತು 505 (1) (b) (ಉದ್ದೇಶಪೂರ್ವಕವಾಗಿ ವಿವಿಧ ಗುಂಪುಗಳ ನಡುವೆ ದ್ವೇಷ ಭಾವನೆ ಬರುವಂತೆ ಮಾಡುವುದು) ಅಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಸಿಎಂ ಪ್ರತಿಕ್ರಿಯೆ

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಬಘೇಲ್​, 'ಕಾನೂನಿನ ಮುಂದೆ ಯಾರೂ ಕೂಡ ದೊಡ್ಡವರಲ್ಲ. ನಮ್ಮ ತಂದೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ' ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.