ETV Bharat / bharat

ಖುಷಿ ತಂದ ಚಂದ್ರಯಾನ, ನಿರಾಸೆ ಮೂಡಿಸಿದ ವಿಶ್ವಕಪ್ ಸೋಲು; 2023ರ ಘಟನಾವಳಿಗಳತ್ತ ಒಂದು ನೋಟ - ಹಮಾಸ್

2023ರಲ್ಲಿ ಭಾರತವು ಸಾಕ್ಷಿಯಾದ ಹೆಮ್ಮೆಯ ಹಾಗೂ ನಿರಾಶಾದಾಯಕ ಘಟನೆಗಳ ಮಾಹಿತಿ ಇಲ್ಲಿದೆ.

Summing up 2023 for India
Summing up 2023 for India
author img

By ETV Bharat Karnataka Team

Published : Dec 31, 2023, 6:45 PM IST

2023 ರಲ್ಲಿ ಭಾರತದ ಸಾಧನೆಗಳು ಹಲವಾರು. ಭೂಮಿಯ ಏಕೈಕ ಉಪಗ್ರಹ ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಲ್ಯಾಂಡರ್ ಇಳಿಸಿದ ಭಾರತ ಲ್ಯಾಗ್ರೇಂಜ್ ಪಾಯಿಂಟ್-ಎಲ್ 1ನಿಂದ ಸೂರ್ಯನ ಅಧ್ಯಯನ ಮಾಡಲು ಉಪಗ್ರಹ ಉಡಾವಣೆ ಮಾಡಿತು. ಈ ಸಾಧನೆಗಳು ದೇಶಕ್ಕೆ ಹೆಮ್ಮೆ ಮೂಡಿಸಿದರೆ ಮಣಿಪುರ ಜನಾಂಗೀಯ ಕಲಹ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿತು. ಒಡಿಶಾದ ಬಾಲಸೋರ್​ನಲ್ಲಿ ಕನಿಷ್ಠ 296 ಜನರ ಸಾವಿಗೆ ಕಾರಣವಾದ ತ್ರಿವಳಿ ರೈಲು ಅಪಘಾತ ದುರಂತ, ದೆಹಲಿಯಲ್ಲಿನ ಗಾಳಿಯ ಕಳಪೆ ಗುಣಮಟ್ಟ ಮತ್ತು ಐತಿಹಾಸಿಕ ಪ್ರವಾಹಗಳು ಈ ವರ್ಷ ದೇಶ ಎದುರಿಸಿದ ವಿಪತ್ತುಗಳಲ್ಲಿ ಸೇರಿವೆ.

ಆಗಸ್ಟ್ 23 ರ ಸಂಜೆ 6.03 ಕ್ಕೆ ಭಾರತದ ಚಂದ್ರಯಾನ -3 ನೌಕೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯಿತು. ಇದು ದೇಶವನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ರಾಷ್ಟ್ರಗಳ ಪಟ್ಟಿಗೆ ಸೇರಿಸಿತು. ಜುಲೈ 14 ರಂದು ಉಡಾವಣೆಯಾದ ಚಂದ್ರಯಾನ -3 41 ದಿನಗಳ ನಂತರ ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದಿತ್ತು. ವಿಕ್ರಮ್ ಲ್ಯಾಂಡರ್ 1.4 ಬಿಲಿಯನ್ ಭಾರತೀಯರ ಕನಸುಗಳ ಜೊತೆಗೆ ಆರು ಚಕ್ರಗಳ ರೋವರ್ ಪ್ರಜ್ಞಾನ್ ಅನ್ನು ಹೊತ್ತೊಯ್ದಿತ್ತು.

ಗಾಳಿಯ ಕಳಪೆ ಗುಣಮಟ್ಟದ ಚಕ್ರ ಈ ಬಾರಿಯೂ ಯಥಾಪ್ರಕಾರ ದೆಹಲಿಯಲ್ಲಿ ಮರುಕಳಿಸಿತು. ವಿಷಕಾರಿ ಗಾಳಿಯು ದೆಹಲಿಯನ್ನು ಆವರಿಸಿತ್ತು. ಗಾಳಿಯ ಗುಣಮಟ್ಟವು ಅಕ್ಟೋಬರ್​ ನಂತರ ಅನೇಕ ಬಾರಿ 'ಕಳಪೆ' ಯಿಂದ 'ತೀವ್ರ ಕಳಪೆ' ಮತ್ತು 'ತೀವ್ರ ಪ್ಲಸ್ ಕಳಪೆಗೆ' ಗೆ ತಿರುಗಿತು. ಇದು ನವೆಂಬರ್​ನಲ್ಲಿ ಉತ್ತುಂಗಕ್ಕೇರಿತು. ಕೃಷಿ ತ್ಯಾಜ್ಯ ಸುಡುವಿಕೆ ಮತ್ತು ವಾಹನ ಮಾಲಿನ್ಯದಿಂದಾಗಿ ದೆಹಲಿಯಲ್ಲಿ ವಾಯುಮಾಲಿನ್ಯ ವಿಕೋಪಕ್ಕೆ ತಿರುಗಿತ್ತು. ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತು ಅಂದರೆ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್ಎಪಿ) - ಹಂತ 4, ತುರ್ತು ಪ್ರತಿಕ್ರಿಯೆ ಕ್ರಿಯಾ ಯೋಜನೆ ಅಡಿಯಲ್ಲಿ ಕ್ರಮಗಳನ್ನು ಘೋಷಿಸಿತ್ತು. ಇದರನ್ವಯ ದೆಹಲಿಯ ಹೊರಗೆ ನೋಂದಾಯಿಸಲಾದ ಲಘು ವಾಣಿಜ್ಯ ವಾಹನಗಳು ಮತ್ತು ದೆಹಲಿ ನೋಂದಾಯಿತ ಡೀಸೆಲ್ ಚಾಲಿತ ಮಧ್ಯಮ ಸರಕು ವಾಹನಗಳು ಮತ್ತು ಭಾರಿ ಸರಕು ವಾಹನಗಳ ಸಂಚಾರವನ್ನು ದೆಹಲಿಯಲ್ಲಿ ನಿರ್ಬಂಧಿಸಲಾಗಿತ್ತು ಮತ್ತು ನಿರ್ಮಾಣ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿತ್ತು.

ದೆಹಲಿಯಲ್ಲಿ ಇದು ಮಾತ್ರವಲ್ಲದೆ ಇನ್ನೂ ಅನೇಕ ರೀತಿಯ ಪ್ರಕೃತಿ ವಿಕೋಪಗಳು ಈ ವರ್ಷ ಮರುಕಳಿಸಿದವು. ಪ್ರವಾಹದ ನೀರು ಭಾರತದ ಸರ್ವೋಚ್ಚ ನ್ಯಾಯಾಲಯದ ದ್ವಾರಕ್ಕೆ ತಲುಪಿತ್ತು ಮತ್ತು ಇನ್ನೇನು ರಾಜ್ ಘಾಟ್​ಗೆ ನೀರು ನುಗ್ಗುವ ಹಂತಕ್ಕೆ ಬಂದಿತ್ತು. ಯಮುನಾ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿದು ರಾಜಧಾನಿಯ ತಗ್ಗು ಪ್ರದೇಶಗಳು ಜಲಾವೃತಗೊಂಡವು. ಜುಲೈ 13 ರಂದು, ಯಮುನಾ ನದಿ ನೀರಿನ ಮಟ್ಟ ದಾಖಲೆಯ 208.66 ಮೀಟರ್​ಗೆ ಏರಿಕೆಯಾಗಿತ್ತು. ಯಮುನಾ ನದಿಯು ಜುಲೈ 10 ರಿಂದ ಎಂಟು ದಿನಗಳ ಕಾಲ ಅಪಾಯದ ಮಟ್ಟವಾದ 205.33 ಮೀಟರ್ ಮೀರಿ ಹರಿಯಿತು.

ಮಣಿಪುರದ ಮೇ 4 ರ ವೀಡಿಯೊ ರಾಷ್ಟ್ರದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿತು ಮತ್ತು ದೇಶಾದ್ಯಂತ ಕಂಪನದ ಅಲೆಗಳನ್ನು ಉಂಟು ಮಾಡಿತು. ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ನಡೆದ ಘಟನೆಯ ವೀಡಿಯೊದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಪುರುಷರ ಗುಂಪು ಕಿರುಕುಳ ನೀಡುತ್ತಿರುವುದು ಬಹಿರಂಗವಾಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ನಾಲ್ವರನ್ನು ಬಂಧಿಸಲಾಯಿತು. ಈ ವೀಡಿಯೊವನ್ನು ಮತ್ತೆ ಶೇರ್ ಮಾಡದಂತೆ ಸರ್ಕಾರ ನಿರ್ಬಂಧಿಸಿದೆ. ಈಶಾನ್ಯ ರಾಜ್ಯದಲ್ಲಿನ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ನಲ್ಲಿ ಅನೇಕ ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು ಸಿಬಿಐ ತನಿಖೆ ನಡೆಸಿದ ಕನಿಷ್ಠ 17 ಪ್ರಕರಣಗಳನ್ನು ವಿಚಾರಣೆಗಾಗಿ ನೆರೆಯ ಅಸ್ಸಾಂಗೆ ವರ್ಗಾಯಿಸಲಾಗಿದೆ.

ಬಹುಸಂಖ್ಯಾತ ಮೈಟಿ ಸಮುದಾಯವು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿತ್ತು. ಈ ಬೇಡಿಕೆಯನ್ನು ವಿರೋಧಿಸಿ ಗುಡ್ಡಗಾಡು ಜಿಲ್ಲೆಗಳಲ್ಲಿ ನಡೆದ 'ಬುಡಕಟ್ಟು ಐಕ್ಯತಾ ಮೆರವಣಿಗೆ'ಯ ನಂತರ ಮೇ 3 ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗಿನಿಂದ 170 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ನೂರಾರು ಜನರು ಗಾಯಗೊಂಡರು.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಘಟನೆಯೊಂದರ ವೀಡಿಯೊ ದೇಶದ ಮನಕಲಕಿತು. ರಕ್ತಸ್ರಾವದಿಂದ ಬಳಲುತ್ತಿದ್ದ ಮತ್ತು ಅರೆಬೆತ್ತಲೆಯಾಗಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಬಾಲಕಿಯೊಬ್ಬಳನ್ನು ಜನ ಓಡಿಸಿದ ಘಟನೆ ಇದಾಗಿತ್ತು. ನಮ್ಮ ಸಮಾಜದಲ್ಲಿ ಮಾನವೀಯತೆಯ ಪ್ರಜ್ಞೆ ಮರೆಯಾಗಿ ಹೋಯಿತಾ ಎಂಬ ಪ್ರಶ್ನೆಯನ್ನು ಈ ವಿಡಿಯೋ ಹುಟ್ಟು ಹಾಕಿತು.

ಜನವರಿ 3 ರಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ 20,000 ಕ್ಕೂ ಹೆಚ್ಚು ಜನಸಂಖ್ಯೆಯ ಜೋಶಿಮಠ್ ಪಟ್ಟಣದಲ್ಲಿ ಭೂಕುಸಿತ ಸಂಭವಿಸಿದ್ದು ಈ ವರ್ಷದ ಭಾರಿ ಅನಾಹುತಗಳಲ್ಲಿ ಒಂದಾಗಿದೆ. 6,150 ಅಡಿ ಎತ್ತರದಲ್ಲಿರುವ ಈ ಪಟ್ಟಣದಲ್ಲಿ 868 ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅವುಗಳಲ್ಲಿ 181 ಕಟ್ಟಡಗಳನ್ನು ಅಸುರಕ್ಷಿತವೆಂದು ಪರಿಗಣಿಸಲಾಗಿದೆ. ಜೋಶಿಮಠದಲ್ಲಿನ ಭೂ ಕುಸಿತವನ್ನು ಎಂಟು ವಿವಿಧ ಸಂಸ್ಥೆಗಳು ಅಧ್ಯಯನ ಮಾಡಿದವು. ಪಟ್ಟಣವು ಸಡಿಲವಾದ ಕೆಸರು ಅಡಿಪಾಯದ ಮೇಲೆ ನೆಲೆಗೊಂಡಿದೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯ ಒತ್ತಡ ಮತ್ತು ಹೋಟೆಲ್​ಗಳು ಸೇರಿದಂತೆ ಬಹುಮಹಡಿ ಕಟ್ಟಡಗಳ ನಿರ್ಮಾಣದ ಕಾರಣದಿಂದ ಭೂಕುಸಿತ ಸಂಭವಿಸುತ್ತಿದೆ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿತು.

ಇನ್ನು ನವೆಂಬರ್​ನಲ್ಲಿ ಭಾರತವು ಅತಿದೊಡ್ಡ ಮಾನವ ರಕ್ಷಣಾ ಕಾರ್ಯಾಚರಣೆಯೊಂದನ್ನು ಯಶಸ್ವಿಯಾಗಿ ನಡೆಸಿತು. 17 ದಿನಗಳ ಕಠಿಣ ಪ್ರಯತ್ನದ ನಂತರ 41 ಕಾರ್ಮಿಕರ ಜೀವವನ್ನು ಉಳಿಸಲಾಯಿತು. ನವೆಂಬರ್ 12 ರಂದು ಉತ್ತರಕಾಶಿ ಸುರಂಗದ ಒಂದು ಭಾಗವು ಪ್ರವೇಶದ್ವಾರದಿಂದ 200 ಮೀಟರ್ ದೂರದಲ್ಲಿ ಕುಸಿದು 41 ಕಾರ್ಮಿಕರು ಸುರಂಗದೊಳಗೆ ಸಿಕ್ಕಿಬಿದ್ದಿದ್ದರು. ಆದರೆ ಸತತ ಪ್ರಯತ್ನಗಳ ಫಲವಾಗಿ 17 ದಿನಗಳ ನಂತರ ರಕ್ಷಣಾ ತಂಡವು ಇವರೆಲ್ಲರನ್ನು ಸುರಂಗದಿಂದ ಹೊರತರಲು ಯಶಸ್ವಿಯಾಯಿತು.

ಅಂತರರಾಷ್ಟ್ರೀಯ ಎಂಜಿನಿಯರಿಂಗ್ ತಜ್ಞರಿಂದ ಹಿಡಿದು ಸ್ಥಳೀಯ ಗಣಿ ತಜ್ಞರವರೆಗೆ ಎಲ್ಲರೂ ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದರು. ಸಿಲ್ಕ್ಯಾರಾ ಸುರಂಗ ಯೋಜನೆಯು 4.5 ಕಿಲೋಮೀಟರ್ ಉದ್ದವಿದ್ದು, ಕೇಂದ್ರದ 900 ಕಿ.ಮೀ 'ಚಾರ್ ಧಾಮ್ ಯಾತ್ರಾ ಆಲ್ ವೆದರ್ ರೋಡ್' ನ ಭಾಗವಾಗಿದೆ.

ಕ್ರಿಕೆಟ್​ನ ಜಗತ್ತಿನ ಬಗ್ಗೆ ನೋಡುವುದಾದರೆ ಈ ವರ್ಷ ಭಾರತವು ತನ್ನ 10 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸಲು ವಿಫಲವಾಯಿತು. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್​ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತ ತೀವ್ರ ನಿರಾಸೆ ಮೂಡಿಸಿತು. ಟೂರ್ನಿಯಲ್ಲಿ, ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಗ್ರ್ಯಾಂಡ್ ಫಿನಾಲೆಯವರೆಗೆ ಲೀಗ್ ಹಂತದಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ.

ಡಿಸೆಂಬರ್ 1, 2022 ರಂದು ಜಿ 20 ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಭಾರತವು ಈ ವರ್ಷ ಅದೇ ದಿನಾಂಕದಂದು ಅಧಿಕಾರವನ್ನು ಬ್ರೆಜಿಲ್​ಗೆ ಹಸ್ತಾಂತರಿಸಿತು. ಜಿ 20 ನೇತೃತ್ವ ವಹಿಸಿದ್ದ ಭಾರತವು ಸೆಪ್ಟೆಂಬರ್​ನಲ್ಲಿ ಜಿ20ಗೆ ಆಫ್ರಿಕನ್ ಯೂನಿಯನ್ (ಎಯು) ಸೇರ್ಪಡೆಗೆ ಮುಂದಾಳತ್ವ ವಹಿಸಿತು. ಎಯು ಆಫ್ರಿಕಾ ಖಂಡದ ದೇಶಗಳ 55 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಪ್ರಭಾವಶಾಲಿ ಸಂಸ್ಥೆಯಾಗಿದೆ.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸ್ಟಾರ್ ಕುಸ್ತಿಪಟುಗಳು ಮತ್ತು ಒಲಿಂಪಿಯನ್​ಗಳು ಬೀದಿಗಿಳಿದ ಘಟನೆ ಕೂಡ ಈ ವರ್ಷ ನಡೆಯಿತು. ಬಜರಂಗ್ ಪೂನಿಯಾ, ಸಾಕ್ಷಿ ಮಲ್ಲಿಕ್, ವಿನೇಶ್ ಫೋಗಟ್ ಸೇರಿದಂತೆ ಕುಸ್ತಿಪಟುಗಳು ತೀವ್ರ ಪ್ರತಿಭಟನೆ ನಡೆಸಿದರು ಮತ್ತು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಭರವಸೆಯ ನಂತರ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

2024 ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಇದರಲ್ಲಿ ಆಡಳಿತಾರೂಢ ಬಿಜೆಪಿ ಸತತ ಮೂರನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕೇಸರಿ ಪಕ್ಷವನ್ನು ಸೋಲಿಸಲು ಪ್ರತಿಪಕ್ಷ ಐಎನ್​ಡಿಐಎ ಬಣವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಇನ್ನು ಕೇಂದ್ರ ನರೇಂದ್ರ ಮೋದಿ ಸರ್ಕಾರವು ಅಯೋಧ್ಯೆಯಲ್ಲಿ ಒಂದು ಕಾಲದಲ್ಲಿ ಬಾಬರಿ ಮಸೀದಿ ಇದ್ದ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಿದೆ ಮತ್ತು ಮುಂದಿನ ವರ್ಷ ಜನವರಿ 22 ರಂದು ಭವ್ಯ ಉದ್ಘಾಟನೆಗೆ ಮಂದಿರ ಸಜ್ಜಾಗಿದೆ.

ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿ ಮತ್ತು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣಗಳು ರಕ್ತಸಿಕ್ತ ಯುದ್ಧಗಳಿಗೆ ಸಾಕ್ಷಿಯಾದವು. ಇಸ್ರೇಲ್ ಗಾಝಾ ಪಟ್ಟಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಎದುರು ನೋಡುತ್ತಿದೆ. ಒಂದು ಕಾಲದಲ್ಲಿ 2.3 ಮಿಲಿಯನ್ ಜನರಿಗೆ ನೆಲೆಯಾಗಿದ್ದ ಕಿರಿದಾದ ಪಟ್ಟಿಯಲ್ಲಿ ಹಮಾಸ್ ಅಧ್ಯಾಯದ ಅಂತ್ಯ ಸನ್ನಿಹಿತವಾಗುತ್ತಿದೆ.

ಹಮಾಸ್ ದಾಳಿಯು ಇಸ್ರೇಲ್​ನಲ್ಲಿ 1,140 ಜನರ ಸಾವಿಗೆ ಕಾರಣವಾಯಿತು ಮತ್ತು ಸುಮಾರು 120 ಜನರು ಇನ್ನೂ ಸೆರೆಯಾಳುಗಳಾಗಿದ್ದಾರೆ. ಇಸ್ರೇಲ್​ನ ಪ್ರತಿದಾಳಿಯಿಂದ ಗಾಜಾದಲ್ಲಿ 19,000 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ ಮತ್ತು ಗಾಜಾ ಜನಸಂಖ್ಯೆಯ 80 ಪ್ರತಿಶತಕ್ಕೂ ಹೆಚ್ಚು ಜನ ಸ್ಥಳಾಂತರವಾಗಿದ್ದಾರೆ. ಮುಂಬರುವ 2024 ರಲ್ಲಿ ಜಗತ್ತು ಜಾಗತಿಕ ಶಾಂತಿ ಮತ್ತು ಸಮೃದ್ಧಿಯತ್ತ ಸಾಗುತ್ತದೆ ಎಂದು ಆಶಿಸೋಣ.

ಇದನ್ನೂ ಓದಿ : ಜೊಮಾಟೊ 2023 ಟ್ರೆಂಡ್ಸ್​; ಬಿರಿಯಾನಿಗಾಗಿ 10 ಕೋಟಿ ಆರ್ಡರ್, 2ನೇ ಸ್ಥಾನದಲ್ಲಿ ಪಿಜ್ಜಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.