ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿರುವ ಚಂದ್ರಯಾನ-3ರ ಲ್ಯಾಂಡರ್ ಹಾಗೂ ರೋವರ್ ಬಗ್ಗೆ ಇಸ್ರೋ ಶುಕ್ರವಾರ ಹೊಸ ಮಾಹಿತಿ ಹಂಚಿಕೊಂಡಿದೆ. ವಿಕ್ರಮ್ ಲ್ಯಾಂಡರ್‌ನಿಂದ ಹೊರ ಬಂದಿರುವ ರೋವರ್ ಪ್ರಜ್ಞಾನ್ ಸುಮಾರು 8 ಮೀಟರ್‌ಗಳಷ್ಟು ದೂರವನ್ನು ಯಶಸ್ವಿಯಾಗಿ ಕ್ರಮಿಸಿದೆ. ಅದರ ಉಪಕರಣಗಳು ಕಾರ್ಯಾರಂಭಿಸಿವೆ ಎಂದು ಇಸ್ರೋ ಮಾಹಿತಿ ಒದಗಿಸಿದೆ.
-
Chandrayaan-3 Mission:
— ISRO (@isro) August 25, 2023 " class="align-text-top noRightClick twitterSection" data="
All planned Rover movements have been verified. The Rover has successfully traversed a distance of about 8 meters.
Rover payloads LIBS and APXS are turned ON.
All payloads on the propulsion module, lander module, and rover are performing nominally.…
">Chandrayaan-3 Mission:
— ISRO (@isro) August 25, 2023
All planned Rover movements have been verified. The Rover has successfully traversed a distance of about 8 meters.
Rover payloads LIBS and APXS are turned ON.
All payloads on the propulsion module, lander module, and rover are performing nominally.…Chandrayaan-3 Mission:
— ISRO (@isro) August 25, 2023
All planned Rover movements have been verified. The Rover has successfully traversed a distance of about 8 meters.
Rover payloads LIBS and APXS are turned ON.
All payloads on the propulsion module, lander module, and rover are performing nominally.…
"ರೋವರ್ ಚಲನವಲನಗಳನ್ನು ಪರಿಶೀಲಿಸಲಾಗಿದೆ. ರೋವರ್ ಸುಮಾರು 8 ಮೀಟರ್‌ಗಳಷ್ಟು ದೂರವನ್ನು ಯಶಸ್ವಿಯಾಗಿ ಕ್ರಮಿಸಿತು. ಇದರಲ್ಲಿರುವ ಪೇಲೋಡ್‌ಗಳಾದ (ವೈಜ್ಞಾನಿಕ ಸಾಧನಗಳು) ಎಲ್ಐಬಿಎಸ್ (LIBS) ಮತ್ತು ಎಪಿಎಕ್ಸ್ಎಸ್ (APXS) ಕಾರ್ಯಾರಂಭಿಸಿವೆ'' ಎಂದು ಸಂಜೆ ಟ್ವೀಟ್ ಮಾಡಿದೆ. ಮುಂದುವರೆದು, "ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್‌ನಲ್ಲಿನ ಎಲ್ಲ ಪೇಲೋಡ್‌ಗಳೂ ಕಾರ್ಯನಿರ್ವಹಿಸುತ್ತಿವೆ" ಎಂದೂ ತಿಳಿಸಿದೆ.
ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (Alpha Particle X-Ray Spectrometer-APXS) ರಾಸಾಯನಿಕ ಸಂಯೋಜನೆ ಗುರುತಿಸುವ ಗುರಿ ಹೊಂದಿದೆ. ಚಂದ್ರನ ಮೇಲ್ಮೈಯ ಖನಿಜ ಸಂಯೋಜನೆಯನ್ನು ಇದು ಕಂಡುಹಿಡಿಯಲಿದೆ. ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (Laser-Induced Breakdown Spectroscope-LIBS) ಚಂದ್ರನ ಲ್ಯಾಂಡಿಂಗ್ ಪ್ರದೇಶದ ಸುತ್ತಲೂ ಚಂದ್ರನ ಮಣ್ಣು ಮತ್ತು ಬಂಡೆಗಳ ಧಾತುರೂಪದ ಸಂಯೋಜನೆಗಳನ್ನು (Mg, Al, Si, K, Ca, Ti, Fe) ಪತ್ತೆ ಹಚ್ಚಲು ಪ್ರಯತ್ನಿಸುತ್ತದೆ.
ಆಗಸ್ಟ್ 23ರಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾಗಿ ವಿಕ್ರಮ್ ಲ್ಯಾಂಡರ್ ಅನ್ನು ಇಸ್ರೋ ಇಳಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಿದ ಏಕೈಕ ಹಾಗೂ ಪ್ರಥಮ ರಾಷ್ಟ್ರವೆಂಬ ಹಿರಿಮೆ ಭಾರತದ್ದಾಗಿದೆ. ಗುರುವಾರ, ಲ್ಯಾಂಡರ್ ಮಾಡ್ಯೂಲ್ ಉಪಕರಣಗಳಾದ ಎಲ್ಐಎಸ್ಎ (ILSA), ರಂಭಾ (RAMBHA) ಮತ್ತು ಚೇಸ್ಟ್ (ChaSTE) ಕಾರ್ಯಾರಂಭ ಮಾಡಿವೆ. ರೋವರ್ ಮೊಬಿಲಿಟಿ ಕಾರ್ಯಾಚರಣೆಗಳು ಸಹ ಪ್ರಾರಂಭವಾಗಿವೆ ಎಂದು ಇಸ್ರೋ ಹೇಳಿತ್ತು.
-
... ... and here is how the Chandrayaan-3 Rover ramped down from the Lander to the Lunar surface. pic.twitter.com/nEU8s1At0W
— ISRO (@isro) August 25, 2023 " class="align-text-top noRightClick twitterSection" data="
">... ... and here is how the Chandrayaan-3 Rover ramped down from the Lander to the Lunar surface. pic.twitter.com/nEU8s1At0W
— ISRO (@isro) August 25, 2023... ... and here is how the Chandrayaan-3 Rover ramped down from the Lander to the Lunar surface. pic.twitter.com/nEU8s1At0W
— ISRO (@isro) August 25, 2023
ಎಲ್ಐಎಸ್ಎ ಚಂದ್ರನ ಲ್ಯಾಂಡಿಂಗ್ ಪ್ರದೇಶದ ಸುತ್ತಲಿನ ಭೂಕಂಪನ ಚಟುವಟಿಕೆಗಳನ್ನು ಅಳೆಯುತ್ತದೆ. ರಂಭಾ ಪ್ಲಾಸ್ಮಾ ಪರಿಸರವನ್ನು ಅಧ್ಯಯನ ಮಾಡುತ್ತದೆ. ಚಂದ್ರನ ಮೇಲ್ಮೈ ಥರ್ಮೋಫಿಸಿಕಲ್ ಪ್ರಯೋಗ (Chandra's Surface Thermophysical Experiment - ChaSTE )ವು ಚಂದ್ರನ ಮೇಲ್ಮೈ ಉಷ್ಣ ಗುಣಲಕ್ಷಣಗಳನ್ನು ಅಳೆಯುತ್ತದೆ. ಶುಕ್ರವಾರ ಬೆಳಗ್ಗೆ ಲ್ಯಾಂಡರ್ ಇಮೇಜರ್ ಕ್ಯಾಮರಾದಲ್ಲಿ ಸೆರೆಯಾದ ವಿಕ್ರಮ್ ಲ್ಯಾಂಡರ್‌ನಿಂದ ಪ್ರಜ್ಞಾನ್ ರೋವರ್ ಹೊರ ಬರುತ್ತಿರುವ ವಿಡಿಯೋವನ್ನು ಇಸ್ರೋ ಬಿಡುಗಡೆ ಮಾಡಿತ್ತು.
ಇದನ್ನೂ ಓದಿ: ಲ್ಯಾಂಡರ್ ಸೆರೆಹಿಡಿದ ಚಂದ್ರನ ಚಿತ್ರಗಳ ವಿಡಿಯೋ ಬಿಡುಗಡೆಗೊಳಿಸಿದ ಇಸ್ರೋ-ನೋಡಿ