ETV Bharat / bharat

ಚಂದ್ರಯಾನ-3ರ ಲ್ಯಾಂಡರ್​ ಸೆರೆಹಿಡಿದ ಚಂದ್ರಯಾನ-2ರ ಆರ್ಬಿಟರ್​: ಫೋಟೋ ಬಿಡುಗಡೆ ಮಾಡಿದ ಇಸ್ರೋ

author img

By ETV Bharat Karnataka Team

Published : Sep 9, 2023, 4:17 PM IST

ಚಂದ್ರಯಾನ-2ರ ಆರ್ಬಿಟರ್​ ಸೆರೆಹಿಡಿದ ಚಂದ್ರಯಾನ-3ರ ವಿಕ್ರಮ್​ ಲ್ಯಾಂಡರ್ ಚಿತ್ರವನ್ನು ಇಸ್ರೋ ಹಂಚಿಕೊಂಡಿದೆ.

Chandrayaan-3 lander is imaged Chandrayaan-2 Orbiter
ಚಂದ್ರಯಾನ-3ರ ಲ್ಯಾಂಡರ್​ಅನ್ನು ಸೆರೆಹಿಡಿದ ಚಂದ್ರಯಾನ-2ರ ಆರ್ಬಿಟರ್​: ಫೋಟೋ ಬಿಡುಗಡೆ ಮಾಡಿದ ಇಸ್ರೋ

ನವದೆಹಲಿ: ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿರುವ ಚಂದ್ರಯಾನ-3ರ ವಿಕ್ರಮ್​ ಲ್ಯಾಂಡರ್ ​ಅನ್ನು ಚಂದ್ರಯಾನ-2ರ ಆರ್ಬಿಟರ್​ ಸೆರೆಹಿಡಿದಿದೆ. ಇದರ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಬಿಡುಗಡೆ ಮಾಡಿದೆ.

ಸೆಪ್ಟೆಂಬರ್ 6ರಂದು ಚಂದ್ರಯಾನ-2 ಆರ್ಬಿಟರ್‌ನಲ್ಲಿ ಡ್ಯುಯಲ್-ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರಾಡಾರ್ (Dual-frequency Synthetic Aperture Radar - DFSAR) ಉಪಕರಣದಿಂದ ಚಂದ್ರಯಾನ-3 ಲ್ಯಾಂಡರ್​​ನ ಚಿತ್ರವನ್ನು ಸೆರೆಹಿಡಿದಿದೆ ಎಂದು ಇಸ್ರೋ ಸಾಮಾಜಿಕ ಜಾಲತಾಣ 'ಎಕ್ಸ್​' (ಟ್ವಿಟ್ಟರ್​)ನಲ್ಲಿ ಪೋಸ್ಟ್​ ಮಾಡಿದೆ.

ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಕರಣವು ನಿರ್ದಿಷ್ಟ ತರಂಗಾಂತರ ಬ್ಯಾಂಡ್‌ನಲ್ಲಿ ಸೂಕ್ಷ್ಮ ತರಂಗಗಳನ್ನು ರವಾನಿಸುತ್ತದೆ. ಮೇಲ್ಮೈಯಿಂದ ಚದುರಿದ ಅದೇ ತರಂಗಗಳನ್ನು ಸ್ವೀಕರಿಸುತ್ತದೆ. ಇದೊಂದು ರಾಡಾರ್ ಆಗಿರುವುದರಿಂದ ಸೌರ ಪ್ರಕಾಶವಿಲ್ಲದೆಯೂ ಚಿತ್ರಿಸುತ್ತಿದೆ. ಇದು ಗುರಿಯ ವೈಶಿಷ್ಟ್ಯಗಳ ದೂರ ಮತ್ತು ಭೌತಿಕ ಗುಣಲಕ್ಷಣಗಳನ್ನು ಒದಗಿಸುತ್ತದೆ. ಆದ್ದರಿಂದ ಈ ಸಿಂಥೆಟಿಕ್ ಅಪರ್ಚರ್ ರಾಡಾರ್​ ಅನ್ನು ಭೂಮಿ ಮತ್ತು ಇತರ ಆಕಾಶಕಾಯಗಳ ರಿಮೋಟ್ ಸೆನ್ಸಿಂಗ್​ಗಾಗಿ ಬಳಸಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.

ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡ್​ ಆದ ಸ್ಥಳದ ಚಿತ್ರ ಸೆರೆಹಿಡಿದ ನಾಸಾ

ಡಿಎಫ್​ಎಸ್​ಎಆರ್​ ಚಂದ್ರಯಾನ-2 ಆರ್ಬಿಟರ್‌ನಲ್ಲಿರುವ ಪ್ರಮುಖ ವೈಜ್ಞಾನಿಕ ಸಾಧನವಾಗಿದೆ. ಇದು ಎಲ್​ ಮತ್ತು ಎಸ್​ ಬ್ಯಾಂಡ್‌ಗಳಲ್ಲಿ ಸೂಕ್ಷ್ಮ ತರಂಗಗಳನ್ನು ಬಳಸಿಕೊಳ್ಳುತ್ತದೆ. ಈ ಅತ್ಯಾಧುನಿಕ ಉಪಕರಣವು ಪ್ರಸ್ತುತ ಯಾವುದೇ ಗ್ರಹಗಳ ಕಾರ್ಯಾಚರಣೆಯಲ್ಲಿ ಅತ್ಯುತ್ತಮ ರೆಸಲ್ಯೂಶನ್ ಪೋಲಾರಿಮೆಟ್ರಿಕ್ ಚಿತ್ರಗಳನ್ನು ನೀಡುತ್ತಿದೆ ಎಂದು ಮಾಹಿತಿ ನೀಡಿದೆ.

ದೀರ್ಘವಾದ ರಾಡಾರ್ ತರಂಗಾಂತರವು ಡಿಎಫ್​ಎಸ್​ಎಆರ್​ಅನ್ನು ಕೆಲವು ಮೀಟರ್‌ಗಳವರೆಗೆ ಚಂದ್ರನ ಉಪಮೇಲ್ಮೈ ವೈಶಿಷ್ಟ್ಯಗಳನ್ನು ಅನ್ವೇಷಿಸಲು ಶಕ್ತಗೊಳಿಸುತ್ತದೆ. ಡಿಎಫ್​ಎಸ್​ಎಆರ್​ ಕಳೆದ ನಾಲ್ಕು ವರ್ಷಗಳಿಂದ ಚಂದ್ರನ ಧ್ರುವ ವಿಜ್ಞಾನದ ಮೇಲೆ ಮುಖ್ಯವಾದ ಗಮನಹರಿಸುತ್ತಿದೆ. ಜೊತೆಗೆ ಚಂದ್ರನ ಮೇಲ್ಮೈಯನ್ನು ಚಿತ್ರಿಸುವ ಮೂಲಕ ಉತ್ತಮ ಗುಣಮಟ್ಟದ ದತ್ತಾಂಶವನ್ನು ಒದಗಿಸುತ್ತದೆ ಎಂದು ಇಸ್ರೋ ವಿವರಿಸಿದೆ.

ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಗಗನನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿತ್ತು. ಇದಾದ 41 ದಿನಗಳ ನಂತರ ಎಂದರೆ, ಆಗಸ್ಟ್​ ​23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಇಳಿದೆ. ಲ್ಯಾಂಡರ್​ನಲ್ಲಿದ್ದ ಪ್ರಜ್ಞಾನ್ ರೋವರ್ ಹೊರಬಂದು​ ವೈಜ್ಞಾನಿಕ ಅಧ್ಯಯನಗಳನ್ನು​ ನಡೆಸಿದೆ. ಚಂದ್ರನ ಮೇಲೆ ರಾತ್ರಿಯಾದ ಕಾರಣ ಸೆಪ್ಟೆಂಬರ್ 3ರಂದು ರೋವರ್​ಗೆ ವಿಶ್ರಾಂತಿ ನೀಡಲಾಗಿದೆ.

ಚಂದ್ರಯಾನ-2ರ ಬಾಹ್ಯಾಕಾಶ ನೌಕೆಯನ್ನು 2019ರ ಜುಲೈ 22ರಂದು ಉಡಾವಣೆ ಮಾಡಲಾಗಿತ್ತು. ಅದೇ ವರ್ಷ ಸೆಪ್ಟೆಂಬರ್ 02ರಂದು ಚಂದ್ರನ ಮೇಲೆ ಇಳಿಸುವ ಸಲುವಾಗಿ ಆರ್ಬಿಟರ್‌ನಿಂದ ಲ್ಯಾಂಡರ್​ಅನ್ನು ಬೇರ್ಪಡಿಸಲಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಅದು ಸಂಪರ್ಕವನ್ನು ಕಡೆದುಕೊಂಡಿತ್ತು. ಮತ್ತೊಂದೆಡೆ, ಚಂದ್ರನ ಸುತ್ತ ತನ್ನ ಉದ್ದೇಶಿತ ಕಕ್ಷೆಯಲ್ಲಿ ಇರಿಸಲಾಗಿರುವ ಆರ್ಬಿಟರ್ ಇನ್ನೂ ಕಾರ್ಯ ನಿರ್ವಹಿಸುತ್ತಿದೆ.

ಇದನ್ನೂ ಓದಿ: ನೋಡಿ ಲ್ಯಾಂಡರ್​ನ 3-ಡಿ ಚಿತ್ರ; ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಅಧ್ಯಯನ ನಡೆಸಿದ 'ವಿಕ್ರಮ್​' ಚಿತ್ರ ಹಂಚಿಕೊಂಡ ಇಸ್ರೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.