ETV Bharat / bharat

ಬಿಎಸ್ಎಫ್ ಯೋಧನ ನಕಲಿ ಸಾವು.. ಅಸಲಿ ರಹಸ್ಯ ಭೇದಿಸಿದ ಚಂಬಾ ಪೊಲೀಸರು

author img

By

Published : Jul 21, 2023, 8:50 PM IST

ಹಿಮಾಚಲಪ್ರದೇಶದ ಚಂಬಾದಲ್ಲಿ ನಡೆದಿದೆ ಎನ್ನಲಾದ ಬಿಎಸ್​ಎಫ್​ ಜವಾನ್​​ರೊಬ್ಬರು ಸಾವಿನ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಅಸಲಿ ಕಹಾನಿಯನ್ನು ಚಂಬಾ ಪೊಲೀಸರು ಭೇದಿಸಿದ್ದಾರೆ.

ಚಂಬಾ ಪೊಲೀಸರು
ಚಂಬಾ ಪೊಲೀಸರು

ಚಂಬಾ : (ಹಿಮಾಚಲ ಪ್ರದೇಶ): ಜೂನ್ 29 ರ ರಾತ್ರಿ ಪೊಲೀಸರು ಜೋಟ್ ರಸ್ತೆಯಲ್ಲಿ ಸುಟ್ಟ ಕಾರನ್ನು ಪತ್ತೆ ಮಾಡಿದ್ದರು. ಅದರಲ್ಲಿ ವ್ಯಕ್ತಿಯ ಅವಶೇಷಗಳು ಸಹ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಮೃತರನ್ನು ನೂರ್‌ಪುರ ನಿವಾಸಿ ಬಿಎಸ್‌ಎಫ್ ಜವಾನ್ ಅಮಿತ್ ರಾಣಾ ಎಂದು ಗುರುತಿಸಲಾಗಿತ್ತು. ಆದರೆ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೇರೆಯದೇ ತಿರುವು ಪಡೆದುಕೊಂಡಿತ್ತು. ಕಾರಿನಲ್ಲಿ ಸುಟ್ಟು ಕರಕಲಾಗಿದ್ದ ಅಮಿತ್ ಜೀವಂತವಾಗಿದ್ದಾರೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ ಎಂದು ಚಂಬಾ ಎಸ್ಪಿ ಅಭಿಷೇಕ್ ಯಾದವ್ ತಿಳಿಸಿದ್ದಾರೆ.

ಜೂನ್ 28-29 ರ ಮಧ್ಯರಾತ್ರಿ, ಜೋಟ್ ರಸ್ತೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಕಾರೊಂದು ಪತ್ತೆಯಾಗಿತ್ತು. ಅದರಲ್ಲಿ ವ್ಯಕ್ತಿಯೊಬ್ಬರು ಸುಟ್ಟು ಕರಕಲಾಗಿದ್ದರು. ಈ ಕಾರು ನೂರ್‌ಪುರದ ನಿವಾಸಿ ಬಿಎಸ್‌ಎಫ್ ಜವಾನ್ ಅಮಿತ್ ರಾಣಾ ಎಂಬುವವರಿಗೆ ಸೇರಿದೆ. ಅವರ ಕಾರು ಸುಟ್ಟು ಕರಕಲಾಗಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು.

ಕಥೆಯನ್ನು ಕೇಳುವುದರಲ್ಲಿ ಎಷ್ಟು ಸರಳವಾಗಿದೆಯೋ, ವಾಸ್ತವದಲ್ಲಿ ಈ ವಿಷಯವು ಅಷ್ಟೇ ಸಂಕೀರ್ಣವಾಗಿದೆ. ಏಕೆಂದರೆ ತನ್ನ ಕಾರಿನಲ್ಲಿ ಸುಟ್ಟು ಕರಕಲಾದ ಅಮಿತ್ ರಾಣಾ ಜೀವಂತವಾಗಿದ್ದಾನೆ. ಪೊಲೀಸರು ತನಿಖೆ ನಡೆಸಿದ ನಂತರ ಪ್ರಕರಣದಲ್ಲಿ ಹಲವು ಅನುಮಾನಾಸ್ಪದ ಮತ್ತು ಆಘಾತಕಾರಿ ಸಂಗತಿಗಳು ಬಯಲಾಗಿವೆ. ಅದರ ನಂತರ ಈ ಪಿತೂರಿಯ ಪ್ರತಿಯೊಂದು ಪದರವು ಮುನ್ನೆಲೆಗೆ ಬಂದಿದೆ.

ಕೊಲೆ, ದರೋಡೆ ಮತ್ತು ಅಪರಾಧದ ಅನೇಕ ಕಥೆಗಳನ್ನು ನೀವು ಕೇಳಿರಬಹುದು ಮತ್ತು ನೋಡಿರಬಹುದು. ಆದರೆ ಒಬ್ಬ ವ್ಯಕ್ತಿ ಕಾರಿಗೆ ಬೆಂಕಿ ಹಚ್ಚಿ ಮತ್ತು ಬೇರೆಯವರ ಮೃತ ದೇಹವನ್ನು ಸುಟ್ಟು ತನ್ನ ಸಾವಿಗೆ ತಾನೇ ಸಂಚು ರೂಪಿಸಿದ ಬಗ್ಗೆ ಕೇಳಿರುವುದು ಅಪರೂಪ. ಈ ಪ್ರಕರಣವು ಚಬಾನ್ ಜಿಲ್ಲೆಯಲ್ಲಿ ನಡೆದಿದೆ. ಅಲ್ಲಿ ಬಿಎಸ್‌ಎಫ್ ಯೋಧ ಅಮಿತ್ ರಾಣಾ ಅವರನ್ನು ಕಾರಿನಲ್ಲಿ ಸುಟ್ಟು ಹಾಕಲಾಯಿತು. ಜೂನ್ 28-29 ರಂದು, ಚಂಬಾ ಪೊಲೀಸರು ಜೋಟ್ ಮಾರ್ಗ್‌ನಲ್ಲಿ ಸುಟ್ಟ ಕಾರನ್ನು ಕಂಡಿದ್ದಾರೆ . ಆಗ ಕಾರಿನೊಳಗೆ ಸುಟ್ಟ ದೇಹವೂ ಪತ್ತೆಯಾಗಿದೆ. ಮೊದಮೊದಲು ಪೊಲೀಸರೂ ಕೂಡ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿ ಬೆಂಕಿಗೆ ಆಹುತಿಯಾಗಿ ಸಾವನ್ನಪ್ಪಿದ್ದಾರೆ ಎಂದು ಭಾವಿಸಿದ್ದರು. ಆದರೆ, ಪೊಲೀಸರು ತನಿಖೆ ಮಾಡಲು ಪ್ರಾರಂಭಿಸಿದಾಗ ವಿಷಯ ಬೇರೆಯೇ ಆಗಿತ್ತು ಎಂಬುದು ತಿಳಿದು ಬಂದಿದೆ.

ಘಟನಾ ಸ್ಥಳದಲ್ಲಿ ಪೊಲೀಸರು ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿದ್ದ ಕಾರನ್ನು ಕಂಡಿದ್ದಾರೆ. ಆದರೆ, ಕಾರಿನ ನಂಬರ್ ಪ್ಲೇಟ್ ಸುರಕ್ಷಿತವಾಗಿ ರಸ್ತೆಯಲ್ಲಿ ಬಿದ್ದಿತ್ತು. ನಂತರ ಸುಟ್ಟ ಕಾರಿನ ಬಳಿಗೆ ಹೋಗಿ ಪರಿಶೀಲಿಸಿದಾಗ ಕಾರಿನೊಳಗೆ ದೇಹದ ಅವಶೇಷಗಳು ಸಹ ಪೂರ್ತಿಯಾಗಿ ಸಿಕ್ಕಿಲ್ಲ. ಇದರಿಂದಾಗಿ ಯಾರೋ ಈ ಘಟನೆಯನ್ನು ಚೆನ್ನಾಗಿ ಯೋಚಿಸಿ ಸಂಚು ರೂಪಿಸಿದ್ದಾರೆ ಎಂಬ ಅನುಮಾನ ಪೊಲೀಸರನ್ನು ಕಾಡಲು ಶುರುವಾಗಿತ್ತು.

ಪೊಲೀಸರಿಗೆ ಸವಾಲಾಗಿದ್ದ ಪ್ರಕರಣ : ಈ ಪ್ರಕರಣವನ್ನು ಭೇದಿಸುವುದು ಹೇಗೆ ಮತ್ತು ಈ ಘಟನೆಯನ್ನು ನಡೆಸಿದ ವ್ಯಕ್ತಿಯನ್ನು ಹಿಡಿಯುವುದಾದರೂ ಹೇಗೆ ಎಂಬುದು ಪೊಲೀಸರಿಗೆ ಸವಾಲಾಗಿತ್ತು. ಪೊಲೀಸರು ಅಮಿತ್ ರಾಣಾ ಅವರ ಕುಟುಂಬ ಸದಸ್ಯರನ್ನು ಪ್ರಶ್ನಿಸಿದಾಗ, ಬಿಎಸ್‌ಎಫ್ ಜವಾನನು ನೂರ್‌ಪುರದಿಂದ ಚಂಬಾ ಕಡೆಗೆ ಹೋಗುವುದಾಗಿ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾನೆ ಎಂದು ಹೇಳಿದರು. ನಂತರ ಅಪಘಾತ ನಡೆದ ಜೋಟ್ ರಸ್ತೆಗೆ ಸಿಬ್ಬಂದಿ ತಲುಪಿದಾಗ ಅಲ್ಲಿ ಅವರಿಗೆ ಸುಟ್ಟು ಕರಕಲಾದ ವಾಹನದ ನಂಬರ್ ಪ್ಲೇಟ್ ಸುರಕ್ಷಿತವಾಗಿ ಸಿಕ್ಕಿದೆ. ಆಗ ಘಟನೆ ಬಗ್ಗೆ ಮತ್ತಷ್ಟು ಅನುಮಾನ ಮೂಡಿದೆ. ತದನಂತರ ಪೊಲೀಸರು ಮೊದಲ ರಾತ್ರಿ ಜೋಟ್‌ನಿಂದ ಚಂಬಾಗೆ ತೆರಳುತ್ತಿದ್ದ ಬಸ್‌ನ ಚಾಲಕರೊಂದಿಗೆ ಮಾತುಕತೆ ನಡೆಸಿದ್ದು, ಘಟನೆಯ ರಾತ್ರಿ 2 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ಚಂಬಾಗೆ ಹೋಗುತ್ತಿದ್ದ ಸಂಗತಿ ತಿಳಿದು ಬಂದಿದೆ.

ನಂತರ ಪೊಲೀಸರು ಚಂಬಾ ಬಸ್ ನಿಲ್ದಾಣವನ್ನು ತಲುಪಿ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಜೂನ್ 29 ರಂದು ಸಾವನ್ನಪ್ಪಿದ ವ್ಯಕ್ತಿ ಜೀವಂತವಾಗಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಅದರ ನಂತರ ಪೊಲೀಸರು ಅಮಿತ್ ಅವರ ಆಪ್ತ ಸ್ನೇಹಿತರ ಬಗ್ಗೆ ಕಂಡು ಹಿಡಿಯಲು ಪ್ರಯತ್ನಿಸಿದ್ದಾರೆ. ಅದರಲ್ಲಿ ಅವರ ಸ್ನೇಹಿತರೊಬ್ಬರು ವೃತ್ತಿಯಲ್ಲಿ ಚಾಲಕರಾಗಿದ್ದಾರೆ ಮತ್ತು ದಕ್ಷಿಣ ಭಾರತದಲ್ಲಿ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ತನಿಖೆಯ ವೇಳೆ, ಮೃತ ಅಮಿತ್ ತನ್ನ ಸ್ನೇಹಿತನೊಂದಿಗೆ ಇದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಬಳಿಕ ಪೊಲೀಸರು ತಂಡ ರಚಿಸಿ ಬೆಂಗಳೂರಿಗೆ ಕಳುಹಿಸಿದ್ದಾರೆ. ಅಲ್ಲಿ ಅಮಿತ್ ರಾಣಾ ಬೆಂಗಳೂರಿನಿಂದ ಚೆನ್ನೈಗೆ ಟ್ರಕ್​ನಲ್ಲಿ ತನ್ನ ಸ್ನೇಹಿತನೊಂದಿಗೆ ಹೋಗುತ್ತಿರುವುದು ತಂಡಕ್ಕೆ ಗೊತ್ತಾಗಿದೆ. ನಂತರ ಪೊಲೀಸರು ಅಮಿತ್ ರಾಣಾನನ್ನು ದಾರಿಯಲ್ಲಿ ಹಿಡಿದಿದ್ದಾರೆ. ಇದೀಗ ಪೊಲೀಸರು ಅಮಿತ್ ರಾಣಾ ಜೊತೆ ಚಂಬಾ ತಲುಪಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮೂಳೆಗಳ ಅವಶೇಷ ರವಾನೆ: ಈ ಬಗ್ಗೆ ಪೊಲೀಸರು ಆರೋಪಿಯನ್ನು ಪ್ರಶ್ನಿಸಿದಾಗ, ತನ್ನ ಮೇಲೆ ಸುಮಾರು 40 ಲಕ್ಷ ಸಾಲವಿದ್ದು, ಅದನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ತನ್ನ ಸಾವಿಗೆ ತಾನೇ ಸಂಚು ರೂಪಿಸಿದ್ದಾಗಿ ತಿಳಿಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ಪೊಲೀಸರು ಕಾರಿನಲ್ಲಿ ಪತ್ತೆಯಾದ ಮೂಳೆಗಳ ಅವಶೇಷಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಇದೀಗ ಆರೋಪಿ ಕಾರಿನಲ್ಲಿ ಸುಟ್ಟು ಹಾಕಿದ್ದು ಯಾರನ್ನು? ಎಂದು ಪತ್ತೆ ಹಚ್ಚಲು ಪೊಲೀಸರು ಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ನಕಲಿ ಉದ್ಯೋಗ ದಂಧೆ ಭೇದಿಸಿದ ಕ್ರೈಂ ಬ್ರಾಂಚ್‌ ಕಾಶ್ಮೀರ.. 9 ಮಂದಿ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.