ETV Bharat / bharat

AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಬಾರಾಬಂಕಿಯಲ್ಲಿ ದೂರು

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಅಸಾದುದ್ದೀನ್ ಸಾರ್ವಜನಿಕ ಭಾಷಣವೊಂದನ್ನು ಮಾಡಿದ್ದು, ಅದು ಪ್ರಚೋದನಕಾರಿ ಎಂಬ ಆರೋಪದ ಮೇಲೆ ದೂರು ದಾಖಲಾಗಿದೆ.

AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಬಾರಾಬಂಕಿಯಲ್ಲಿ ದೂರು
AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಬಾರಾಬಂಕಿಯಲ್ಲಿ ದೂರು
author img

By

Published : Sep 10, 2021, 7:22 AM IST

ಬಾರಾಬಂಕಿ(ಉತ್ತರಪ್ರದೇಶ): 2022ಕ್ಕೆ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಹಲವು ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ. ಈ ಬಾರಿ ಎಐಎಂಐಎಂ ( AIMIM- All India Majli-e-Ittehadul Muslimeen) ಪಕ್ಷವು ಯೋಗಿ ನಾಡಲ್ಲಿ ಸ್ಪರ್ಧೆಗೆ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಬಾರಾಬಂಕಿಯಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಗುರುವಾರ ಬಾರಾಬಂಕಿಯಲ್ಲಿ ಅಸಾದುದ್ದೀನ್ ಸಾರ್ವಜನಿಕ ಭಾಷಣವೊಂದನ್ನು ಮಾಡಿದ್ದು, ಅದು ಪ್ರಚೋದನಕಾರಿ ಎಂಬ ಆರೋಪದ ಮೇಲೆ ದೂರು ದಾಖಲಾಗಿದೆ.

ಕತ್ರಾ ಬರಾದರಿ ಎಂಬಲ್ಲಿ ಮೆರವಣಿಗೆ ವೇಳೆ ಮಾತನಾಡಿದ ಅವರು, ಮೇ ತಿಂಗಳಲ್ಲಿ ರಾಮ್​ಸ್ನೇಹಿ ತೆಹಸಿಲ್ ಸಮೀಪದಲ್ಲಿ ಬರುವ ಮಸೀದಿಯೊಂದರ ಧ್ವಂಸದ ಕುರಿತ ಉಲ್ಲೇಖಿಸಿದ್ದರು. ಅಕ್ರಮ ಕಟ್ಟಡ ಎಂದು ಸರ್ಕಾರ ಸ್ಪಷ್ಟನೆ ನೀಡಿ ಮಸೀದಿಯನ್ನು ಧ್ವಂಸ ಮಾಡಿದೆ. ಆದರೆ, ಅದು ಒಂದು ಶತಮಾನದ ಹಿಂದಿನ ಮಸೀದಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಬದಲಾಯಿಸುವ ಚರ್ಚೆಗಳು ಬಿಜೆಪಿ ಪಕ್ಷದಲ್ಲಿ ನಡೆದಾಗ ಯೋಗಿ ಆದಿತ್ಯನಾಥ್ ಮಸೀದಿಯನ್ನು 'ತ್ಯಾಗ' ಮಾಡಿದ್ದಾರೆ ಎಂದು ಅಸಾದುದ್ದೀನ್ ಓವೈಸಿ ಮಾರ್ಮಿಕವಾಗಿ ಯೋಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ರಾಷ್ಟ್ರವನ್ನಾಗಿ ಪರಿವರ್ತನೆ ಮಾಡಲು ಮತ್ತು ಜಾತ್ಯತೀತತೆಯನ್ನು ದುರ್ಬಲಗೊಳಿಸುವ ಸಲುವಾಗಿ ಉತ್ತರ ಪ್ರದೇಶದಲ್ಲಿ ಸತತ ಪ್ರಯತ್ನಗಳು ನಡೆಯುತ್ತಿವೆ ಎಂದು ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ. ಇದರ ಜೊತೆಗೆ 2014ರ ದೊಂಬಿಯಲ್ಲಿ ದಲಿತ ಮತ್ತು ಮುಸ್ಲೀಮರನ್ನು ಗುರಿಯಾಗಿಸಲಾಗಿದೆ ಎಂದಿದ್ದಾರೆ.

ಮತ್ತೊಂದು ಕೇಸ್​..

ಸಾರ್ವಜನಿಕ ಭಾಷಣವೊಂದರಲ್ಲಿ ಪ್ರಚೋದನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತ್ರವಲ್ಲದೇ, ಸಾರ್ವಜನಿಕ ಸಭೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದಲ್ಲಿಯೂ ಬಾರಾಬಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: 4 ರಾಜ್ಯಕ್ಕೆ ರಾಜ್ಯಪಾಲರ ನೇಮಕ ಮಾಡಿ ಆದೇಶ ಹೊರಡಿಸಿದ ರಾಮನಾಥ್ ಕೋವಿಂದ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.