ಚಂಡೀಗಢ : ಪಂಜಾಬ್ ಕಾಂಗ್ರೆಸ್ನಲ್ಲಿ ರಾಜಕೀಯ ವೈರತ್ವ ಮುಂದುವರೆದಿದೆ. ಮಾಜಿ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷರಾಗಿರುವ ನವಜೋತ್ ಸಿಂಗ್ ನಡುವಿನ ಮುಸುಕಿನ ಗುದ್ದಾಟ ಮುಗಿಯುವ ಯಾವುದೇ ಲಕ್ಷಣ ಗೋಚರವಾಗುತ್ತಿಲ್ಲ.
ಪಂಜಾಬ್ ಕಾಂಗ್ರೆಸ್ ರಾಜಕೀಯ ಕಚ್ಚಾಟಕ್ಕೆ ಈಗಾಗಲೇ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತಲೆದಂಡವಾಗಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು, ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
-
'Ready to make any sacrifice to stop @sherryontopp becoming Punjab CM. Will pit a strong person against him to ensure his defeat in 2022 Assembly polls. If Navjot Sidhu is CM face, then big thing if @INCPunjab touches double digits': @capt_amarinder @INCIndia pic.twitter.com/1ANcEJy04I
— Raveen Thukral (@RT_Media_Capt) September 22, 2021 " class="align-text-top noRightClick twitterSection" data="
">'Ready to make any sacrifice to stop @sherryontopp becoming Punjab CM. Will pit a strong person against him to ensure his defeat in 2022 Assembly polls. If Navjot Sidhu is CM face, then big thing if @INCPunjab touches double digits': @capt_amarinder @INCIndia pic.twitter.com/1ANcEJy04I
— Raveen Thukral (@RT_Media_Capt) September 22, 2021'Ready to make any sacrifice to stop @sherryontopp becoming Punjab CM. Will pit a strong person against him to ensure his defeat in 2022 Assembly polls. If Navjot Sidhu is CM face, then big thing if @INCPunjab touches double digits': @capt_amarinder @INCIndia pic.twitter.com/1ANcEJy04I
— Raveen Thukral (@RT_Media_Capt) September 22, 2021
ಸರಣಿ ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿರುವ ಅವರು, ಸಿಧು ಓರ್ವ 'ಡ್ರಾಮಾ ಮಾಸ್ಟರ್'. ಮುಂದಿನ ಚುನಾವಣೆಯಲ್ಲಿ ಅವರ ಸೋಲಿಗಾಗಿ ಬಲಿಷ್ಠ ಅಭ್ಯರ್ಥಿಯನ್ನ ಕಣಕ್ಕಿಳಿಸಲಾಗುವುದು ಎಂದು ಪ್ರತಿಜ್ಞೆ ಮಾಡಿದ್ದಾರೆ. 2022ರಲ್ಲಿ ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಸಿಧು ಅವರ ಸೋಲು ಖಚಿತಪಡಿಸುವ ಉದ್ದೇಶದಿಂದ ಪಿಪಿಸಿಸಿ ಅಧ್ಯಕ್ಷರ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುತ್ತೇನೆ ಎಂದಿದ್ದಾರೆ. ಡ್ರಾಮಾ ಮಾಸ್ಟರ್ ಆಗಿರುವ ಸಿಧು ನಾಯಕತ್ವದಲ್ಲಿ ಕಾಂಗ್ರೆಸ್ ಎರಡು ಅಂಕಿ ಗೆಲುವು ಸಾಧಿಸಲು ಹೆಣಗಾಡಲಿದೆ ಎಂದಿದ್ದಾರೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿಧು ವಿರುದ್ಧ ವಾಗ್ದಾಳಿ ನಡೆಸಿದ್ದ ಅಮರೀಂದರ್ ಸಿಂಗ್, ಅವರಿಗೆ ಪಾಕ್ ಪ್ರಧಾನಿ ಜೊತೆ ನಂಟಿದೆ. ಸಿಎಂ ಆಗುವುದಕ್ಕೆ ನನ್ನ ವಿರೋಧವಿದೆ ಎಂದಿದ್ದರು.
ಇದನ್ನೂ ಓದಿರಿ: ದೇಶದ ಭದ್ರತೆ ದೃಷ್ಟಿಯಿಂದ ಸಿಧು ಪಂಜಾಬ್ ಸಿಎಂ ಆಗೋಕೆ ನನ್ನ ವಿರೋಧವಿದೆ.. ಕ್ಯಾ. ಅಮರೀಂದರ್ ಸಿಂಗ್
ಈ ಹಿಂದಿನಿಂದಲೂ ಅಮರೀಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ನಡುವೆ ಮುಸುಕಿನ ಗುದ್ದಾಟ ಮುಂದುವರೆದಿತ್ತು. ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗುವುದಕ್ಕೂ ಅವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದೀಗ ಖುದ್ದಾಗಿ ಅಮರೀಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೊಸದಾಗಿ ಚರಣ್ಜಿತ್ ಸಿಂಗ್ ಚನ್ನಿ ಸಿಎಂ ಆಗಿದ್ದಾರೆ.