ETV Bharat / bharat

ಸೇನಾ ಅಭ್ಯಾಸದ ವೇಳೆ ಸಿಡಿದ ಫಿರಂಗಿ, ಮನೆ ಮೇಲೆ ಬಿದ್ದ ಶೆಲ್​​ : ಮೂವರ ದುರ್ಮರಣ

author img

By

Published : Mar 8, 2023, 4:16 PM IST

ಬಿಹಾರದ ಗಯಾ ಜಿಲ್ಲೆಯಲ್ಲಿ ಸೇನಾ ಅಭ್ಯಾಸದ ಸಂದರ್ಭದಲ್ಲಿ ಫಿರಂಗಿ ಸಿಡಿದು ಅದರಲ್ಲಿದ್ದ ಬಾಂಬ್ ಶೆಲ್​ವೊಂದು ಮನೆ ಮೇಲೆ ಬಿದ್ದ ಕಾರಣ ಭಾರೀ ದುರಂತವೊಂದು ಸಂಭವಿಸಿದೆ.

cannon-bomb-from-military-training-explodes-in-bihar-gaya-village
ಮನೆ ಮೇಲೆ ಬಿದ್ದ ಸೇನಾ ಅಭ್ಯಾಸದ ವೇಳೆ ಸಿಡಿದ ಫಿರಂಗಿ ಬಾಂಬ್ ಶೆಲ್: ಮೂವರ ದುರ್ಮರಣ

ಗಯಾ (ಬಿಹಾರ): ಸೇನಾ ಅಭ್ಯಾಸದ ವೇಳೆ ಫಿರಂಗಿ ಸಿಡಿದು, ಅದರಲ್ಲಿನ ಬಾಂಬ್ ಶೆಲ್​ವೊಂದು ಮನೆ ಮೇಲೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿರುವ ದುರ್ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಒಂದೇ ಕುಟುಂಬದ ಸದಸ್ಯರೆಂದು ತಿಳಿದು ಬಂದಿದ್ದು, ಇತರ ಆರು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಲ್ಲಿನ ಗುಲಾರ್ ಬೆಡ್ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಈ ಅವಘಡ ಜರುಗಿದೆ. ಈ ವಿಷಯ ತಿಳಿದ ಪೊಲೀಸರು ಮತ್ತು ಆಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಗೋವಿಂದ್ ಮಾಂಝಿ, ಅವರ ಮಗಳು ಕಾಂಚನ್ ಮತ್ತು ಅಳಿಯ ಸೂರಜ್ ಕುಮಾರ್ ಎಂಬುವವರೇ ಮೃತರೆಂದು ಗುರುತಿಸಲಾಗಿದೆ. ಗೀತಾ ಕುಮಾರಿ, ಪಿಂಟು ಮಾಂಝಿ, ರಸೋ ದೇವಿ ಎಂಬ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಮಗಧ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಸ್ಪತ್ರೆಗೆ ರವಾನಿಸಲಾಗಿದೆ.

ಗಯಾದ ದೋಭಿ ಬ್ಲಾಕ್‌ನ ತ್ರಿಲೋಕಪುರದಲ್ಲಿ ಸೇನೆಯ ಅಭ್ಯಾಸ ಫೈರಿಂಗ್ ರೇಂಜ್ ನಡೆಯುತ್ತಿರುತ್ತದೆ. ಪಕ್ಕದ ಹಳ್ಳಿಗಳು ಈ ಗುಂಡಿನ ದಾಳಿಯಿಂದ ಪ್ರಭಾವಿತವಾಗಿವೆ. ಆಗಾಗ್ಗೆ ಫಿರಂಗಿ ಚೆಂಡುಗಳು ಗುಂಡಿನ ವ್ಯಾಪ್ತಿಯ ಪ್ರದೇಶದ ಹೊರಗೆ ಬೀಳುತ್ತವೆ. ಆದರೆ, ಈ ಬಾರಿ ಶೆಲ್​ವೊಂದು ಬಾರಾಚಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಗುಲಾರ್ ಬೆಡ್ ಗ್ರಾಮದ ಗೋವಿಂದ್ ಮಾಂಝಿ ಎಂಬುವವರ ಮನೆಯ ಮೇಲೆ ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇಡೀ ಕುಟುಂಬವು ಹೋಳಿ ಹಬ್ಬದ ಆಚರಣೆಯ ಸಂಭ್ರಮದಲ್ಲಿತ್ತು. ಇಂತಹ ಶೆಲ್ ಮನೆಯ ಮೇಲೆ ಬಿದ್ದು ದುರಂತ ಸಂಭವಿಸಿ, ದುಃಖದ ಛಾಯೆ ಆವರಿಸಿದೆ. ಮತ್ತೊಂದೆಡೆ, ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ ಎಸ್‌ಎಸ್‌ಪಿ ಆಶಿಶ್ ಭಾರ್ತಿ, ಬಾಂಬ್ ಶೆಲ್ ಬಿದ್ದ ಘಟನೆಯ ಮಾಹಿತಿ ಪಡೆದ ನಂತರ ಅಧಿಕಾರಿಗಳ ಸಮೇತವಾಗಿ ಗುಲಾರ್ ಬೆಡ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಪ್ರಾಥಮಿಕ ತನಿಖೆಯ ನಂತರವೇ ಈ ಘಟನೆಯ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮುಂಬೈ ಕರಾವಳಿಯಲ್ಲಿ ನೌಕಾಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ, ಮೂವರು ಸಿಬ್ಬಂದಿ ರಕ್ಷಣೆ

ಸೇನಾ ಹೆಲಿಕಾಪ್ಟರ್ ಭೂಸ್ಪರ್ಶ: ಮತ್ತೊಂದೆಡೆ, ಮಹಾರಾಷ್ಟ್ರದ ಮುಂಬೈ ಕರಾವಳಿಯಲ್ಲಿ ಇಂದು ಭಾರತೀಯ ನೌಕಾಪಡೆಯ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್​ಎಚ್​) ತುರ್ತು ಭೂಸ್ಪರ್ಶ ಕಂಡಿದೆ. ಅದೃಷ್ಟವಶಾತ್ ಹೆಲಿಕಾಪ್ಟರ್​ನಲ್ಲಿದ್ದ ಮೂವರು ಸಿಬ್ಬಂದಿ ಸುರಕ್ಷಿತವಾಗಿದ್ದು, ಕರಾವಳಿ ಗಸ್ತು ಪಡೆ ರಕ್ಷಣೆ ಮಾಡಿದೆ.

ಸೇನಾ ಹೆಲಿಕಾಪ್ಟರ್​ ಎಂದಿನಂತೆ ಇಂದು ಬೆಳಗ್ಗೆ ಗಸ್ತು ತಿರುಗುತ್ತಿದ್ದ ವೇಳೆ ಮುಂಬೈ ಪ್ರದೇಶದ ಕರಾವಳಿ ತೀರದಲ್ಲಿ ಅಪಘಾತಕ್ಕೀಡಾಗಿ ತುರ್ತು ಭೂಸ್ಪರ್ಶ ಕಂಡಿದೆ. ಈ ಬಗ್ಗೆ ಭಾರತೀಯ ನೌಕಾಪಡೆಯ ವಕ್ತಾರರು ಟ್ವೀಟ್​ ಮಾಡಿ, ಭಾರತೀಯ ನೌಕಾಪಡೆಯ ಲಘು ವಿಮಾನ ಮುಂಬೈನಿಂದ ತೀರದ ಸಮೀಪದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿದೆ. ವಿಮಾನ ತುರ್ತು ಭೂಸ್ಪರ್ಶ ಕಂಡಿದ್ದು, ಅದರಲ್ಲಿದ್ದ ಮೂವರು ಸಿಬ್ಬಂದಿಯನ್ನು ನೌಕಾ ದಳದ ಗಸ್ತು ಪಡೆ ಸುರಕ್ಷಿತವಾಗಿ ಕಾಪಾಡಿದೆ. ಹೆಲಿಕಾಪ್ಟರ್​ನಲ್ಲಿ ಉಂಟಾದ​ ದೋಷದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.