ಮುಂಬೈ, ಮಹಾರಾಷ್ಟ್ರ : ಬುಲ್ಲಿ ಬಾಯ್ ಆ್ಯಪ್ ಪ್ರಕರಣದ ಪ್ರಮುಖ ಆರೋಪಿ ಉತ್ತರಾಖಂಡದ ಶ್ವೇತಾ ಸಿಂಗ್ ಅವರನ್ನು ಮುಂಬೈ ಪೊಲೀಸರು ಮಂಗಳವಾರ ಉತ್ತರಾಖಂಡ್ನಲ್ಲಿ ಬಂಧಿಸಿದ್ದಾರೆ. ಇಂದು ಆಕೆಯನ್ನು ಮುಂಬೈಗೆ ಕರೆತರಲಾಗಿದೆ.
ಇದಕ್ಕೂ ಮುನ್ನ ಜನವರಿ 2ರಂದು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಬಿಹಾರ ಮೂಲದ ವಿದ್ಯಾರ್ಥಿಯಾದ 22 ವರ್ಷದ ವಿಶಾಲ್ ಕುಮಾರ್ ಝಾ ಎಂಬಾತನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದರು.
ವಿಶಾಲ್ ಕುಮಾರ್ ಝಾ ನೀಡಿದ ಮಾಹಿತಿಯಂತೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಮಾಸ್ಟರ್ ಮೈಂಡ್ ಆದ ಶ್ವೇತಾ ಸಿಂಗ್ ಅವರನ್ನು ಉತ್ತರಾಖಂಡ್ನಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದು, ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಬುಲ್ಲಿ ಬಾಯಿ ಅಪ್ಲಿಕೇಷನ್ನಲ್ಲಿ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ತೆಗೆದು, ಅಶ್ಲೀಲವಾಗಿ ಎಡಿಟ್ ಮಾಡಿ, ಬುಲ್ಲಿ ಬಾಯ್ ಅಪ್ಲಿಕೇಷನ್ನಲ್ಲಿ ಅಪ್ಲೋಡ್ ಮಾಡಲಾಗುತ್ತಿತ್ತು ಎಂಬ ಆರೋಪವಿದೆ. ಇನ್ನು ವಿಶಾಲ್ ಕುಮಾರ್ ಮತ್ತು ಶ್ವೇತಾ ಸಿಂಗ್ ಇಬ್ಬರಿಗೂ ಪರಸ್ಪರ ಪರಿಚಯ ಇತ್ತೆಂದು ತಿಳಿದು ಬಂದಿದೆ.
ಮತ್ತೊಬ್ಬ ವಿದ್ಯಾರ್ಥಿ ಬಂಧನ : ಬುಲ್ಲಿ ಬಾಯಿ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದ ಮತ್ತೊಬ್ಬ ವಿದ್ಯಾರ್ಥಿಯನ್ನು ಮುಂಬೈ ಸೈಬರ್ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ವಿದ್ಯಾರ್ಥಿಯನ್ನು 21 ವರ್ಷದ ಶುಭಂ ರಾವತ್ ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ ಕೋಟ್‌ದ್ವಾರ್‌ನ ನಿಮುಚೌಡ್ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇನ್ನು ಆರೋಪಿಯಾದ ವಿಶಾಲ್ ಕುಮಾರ್ನನ್ನು ಮುಂಬೈನ ಬಾಂದ್ರಾ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅರ್ಧ ಗಂಟೆಗಳ ವಿಚಾರಣೆಯ ನಂತರ ಜನವರಿ 10ರವರೆಗೆ ಪೊಲೀಸ್ ಕಸ್ಟಡಿಗೆ ವಿಶಾಲ್ಕುಮಾರ್ನನ್ನು ನೀಡಲಾಗಿದೆ.
ಇದನ್ನೂ ಓದಿ: 'ಬುಲ್ಲಿ ಬಾಯಿ' ಆ್ಯಪ್: ಆರೋಪಿ ವಿಶಾಲ್ ಕುಮಾರ್‌ಗೆ ಜ.10 ರವರೆಗೆ ಪೊಲೀಸ್ ಕಸ್ಟಡಿ