ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ದ್ವಿತೀಯಾರ್ಧ ಅಧಿವೇಶನವು ಇಂದಿನಿಂದ ಆರಂಭವಾಗಲಿದ್ದು, ಆರೋಗ್ಯಕರ ಮತ್ತು ಫಲಿತಾಂಶ ಆಧಾರಿತ ಚರ್ಚೆ ಬಗ್ಗೆ ಲೋಕಸಭೆಯ ಸ್ಪೀಕರ್ ಓಂಬಿರ್ಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಜೆಟ್ ಅಧಿವೇಶನದ ಸಂಬಂಧ ಟ್ವೀಟ್ ಮಾಡಿರುವ ಅವರು, ಸಂಸತ್ತಿನ ಬಜೆಟ್ ಅಧಿವೇಶನದ ದ್ವಿತೀಯಾರ್ಧವು ಇಂದಿನಿಂದ ಪ್ರಾರಂಭವಾಗುತ್ತಿದೆ. ಆರೋಗ್ಯಕರ ಮತ್ತು ಫಲಿತಾಂಶ-ಆಧಾರಿತ ಚರ್ಚೆಯೊಂದಿಗೆ ಸದನದ ಸದಸ್ಯರು ಸಕ್ರಿಯ ಪಾಲುದಾರಿಕೆ ಮತ್ತು ಸಕಾರಾತ್ಮಕ ಬೆಂಬಲ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
-
Delhi | Lok Sabha Speaker Om Birla arrives at the Parliament. The second part of the Budget Session commences today. pic.twitter.com/6qzNtTPd4s
— ANI (@ANI) March 14, 2022 " class="align-text-top noRightClick twitterSection" data="
">Delhi | Lok Sabha Speaker Om Birla arrives at the Parliament. The second part of the Budget Session commences today. pic.twitter.com/6qzNtTPd4s
— ANI (@ANI) March 14, 2022Delhi | Lok Sabha Speaker Om Birla arrives at the Parliament. The second part of the Budget Session commences today. pic.twitter.com/6qzNtTPd4s
— ANI (@ANI) March 14, 2022
ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಕಾರಣ ರಾಜ್ಯಸಭೆ ಮತ್ತು ಲೋಕಸಭೆಯ ಬಜೆಟ್ ಅಧಿವೇಶನದ ಎರಡನೇ ಭಾಗ ಇದಾಗಿದೆ. ಆದಾಗ್ಯೂ, ಕೋವಿಡ್ ನಿಯಮಗಳು ಮತ್ತು ನಿರ್ಬಂಧಗಳ ಪಾಲನೆ ಮೂಲಕ ಅಧಿವೇಶನ ನಡೆಸಲಾಗುತ್ತಿದೆ. ಬಜೆಟ್ ಅಧಿವೇಶನದ ಮೊದಲಾರ್ಧವು ಜ.31ರಂದು ಪ್ರಾರಂಭವಾಗಿ ಫೆಬ್ರವರಿ 11 ರಂದು ಮುಕ್ತಾಯವಾಗಿತ್ತು. ಈಗ ದ್ವಿತೀಯಾರ್ಧ ಅಧಿವೇಶನವು ಇಂದಿನಿಂದ ಅರಂಭವಾಗಿ ಏ.8 ರಂದು ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: ಮದ್ಯ ನಿಷೇಧಕ್ಕೆ ಒತ್ತಾಯ: ಮದ್ಯದಂಗಡಿ ಧ್ವಂಸಗೊಳಿಸಿದ ಉಮಾಭಾರತಿ!