ಅಮೃತಸರ: ಭಾರತದ ಭೂ ಪ್ರದೇಶ ಪ್ರವೇಶ ಮಾಡಿದ್ದ ಪಾಕಿಸ್ತಾನದ ಡ್ರೋನ್ ಮೇಲೆ ಶನಿವಾರ ಬೆಳಗ್ಗೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುಂಡಿನ ದಾಳಿ ನಡೆಸಿದೆ. ಆದರೂ ಪಾಕಿಸ್ತಾನ ಡ್ರೋನ್ ಮೂರು ಕೆಜಿ ಹೆರಾಯಿನ್ ಅನ್ನು ಭಾರತದ ಭೂ ಪ್ರದೇಶದಲ್ಲಿ ಬಿಟ್ಟು ವಾಪಸ್ ಹೋಗಿರುವ ಘಟನೆ ಪಂಜಾಬ್ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ.
-
During night intervening 10/11 March 2023, alert #SeemaPraharis of @BSF_Punjab detected a drone intrusion in Amritsar Sec. Counter-drone measures were initiated & drone was fired upon.
— BSF (@BSF_India) March 11, 2023 " class="align-text-top noRightClick twitterSection" data="
On search 3 packets (Gross wt- 3.055 kg) of suspected #heroin dropped by drone were recovered pic.twitter.com/WpfY2ZNy8D
">During night intervening 10/11 March 2023, alert #SeemaPraharis of @BSF_Punjab detected a drone intrusion in Amritsar Sec. Counter-drone measures were initiated & drone was fired upon.
— BSF (@BSF_India) March 11, 2023
On search 3 packets (Gross wt- 3.055 kg) of suspected #heroin dropped by drone were recovered pic.twitter.com/WpfY2ZNy8DDuring night intervening 10/11 March 2023, alert #SeemaPraharis of @BSF_Punjab detected a drone intrusion in Amritsar Sec. Counter-drone measures were initiated & drone was fired upon.
— BSF (@BSF_India) March 11, 2023
On search 3 packets (Gross wt- 3.055 kg) of suspected #heroin dropped by drone were recovered pic.twitter.com/WpfY2ZNy8D
ಬಿಎಸ್‌ಎಫ್ ಭದ್ರತಾ ಪಡೆ ಯೋಧರು ಡ್ರೋನ್ ಮೇಲೆ ತೀವ್ರ ಗುಂಡಿನ ದಾಳಿ ನಡೆಸಿದರೂ ಪಾಕಿಸ್ತಾನದ ಕಡೆಗೆ ಡ್ರೋನ್ ವಾಪಸ್ ಅಗುವಲ್ಲಿ ಯಶಸ್ವಿಯಾಗಿದೆ. ದೇಶದ ಗಡಿ ಉಲ್ಲಂಘಿಸಿ ಭಾರತದ ಭೂಪ್ರದೇಶಕ್ಕೆ ಡ್ರೋನ್ ಒಳನುಗ್ಗಿರುವುದನ್ನು ಅಮೃತಸರ ಸೆಕ್ಟರ್ನ ಬಿಎಸ್ಎಫ್ ಯೋಧರು ಶನಿವಾರ ಬೆಳಗ್ಗೆ ಪತ್ತೆ ಹಚ್ಚಿದ್ದರು ಎಂದು ಬಿಎಸ್ಎಫ್ವೂ ತನ್ನ ಟ್ವೀಟರ್ನಲ್ಲಿ ಬರೆದುಕೊಂಡಿದೆ.
ಬಿಎಸ್ಎಫ್ವೂ ಕ್ಷಣ ಕ್ಷಣಕ್ಕೂ ಪಾಕಿಸ್ಥಾನದಿಂದ ಬರುವ ಡ್ರೋನ್ ಮೇಲೆ ನಿಗಾ ಇಟ್ಟಿದೆ. ಆದರೆ ಶನಿವಾರ ಭಾರತ ಭೂ ಪ್ರದೇಶ ಪ್ರವೇಶಿಸಿದ ಪಾಕಿಸ್ತಾನದ ಡ್ರೋನ್ ಮೇಲೆ ಬಿಎಸ್ಎಫ್ ತೀವ್ರ ಗುಂಡಿನ ಮಳೆಗೆರದಿದೆ, ಆದರೂ ಕ್ಷಣದಲ್ಲಿ ಪಾಕಿಸ್ತಾನದ ಡ್ರೋನ್ ಬಚಾವ್ ಆಗಿದೆ. ಇಂಡೋ ಪಾಕ್ ಗಡಿ ಉಲ್ಲಂಘಿಸಿ ಭಾರತ ಭೂ ಪ್ರದೇಶ ಪ್ರವೇಶಿಸಿದ ಡ್ರೋನ್ ಕ್ಷಣ ಮಾತ್ರದಲ್ಲೇ ಪಾಕಿಸ್ತಾನಕ್ಕೆ ವಾಪಸ್ ಆಗುತ್ತಿದ್ದ ವೇಳೆ, 3 ಕೆಜಿ ತೂಕದ ಹೆರಾಯಿನ್‌ನ ಮೂರು ಪ್ಯಾಕೆಟ್‌ಗಳನ್ನು ಕೈಬಿಟ್ಟು ಹಿಂದಿರುಗಿದೆ.
ಕೆಲ ತಿಂಗಳಿಂದ ಪಾಕಿಸ್ತಾನ ಡ್ರೋನ್‌ಗಳು ಭಾರತ ಭೂ ಪ್ರವೇಶ: ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದ ಡ್ರೋನ್‌ಗಳು ಭಾರತದ ಭೂಪ್ರದೇಶಕ್ಕೆ ನುಗ್ಗುತ್ತಿರುವುದು ಹೆಚ್ಚಾಗಿದೆ. ಡ್ರಗ್ಸ್, ಶಸ್ತ್ರಾಸ್ತ್ರಗಳನ್ನು ಭಾರತದ ಭೂ ಪ್ರದೇಶಕ್ಕೆ ಪಾಕಿಸ್ತಾನ ಡ್ರೋನ್‌ಗಳು ತಂದು ಬಿಡುತ್ತಿರುವುದು ಪಂಜಾಬ್ ಗಡಿ ಜಿಲ್ಲೆಗಳಲ್ಲಿ ಆತಂಕ ಕಾಡುತ್ತಿದೆ.
ಒಂದು ದಿನದ ಹಿಂದೆ ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಪಾಕಿಸ್ತಾನದಿಂದ ಬಂದೂಕುಗಳನ್ನು ಸಾಗಣೆ ಮಾಡುತ್ತಿದ್ದ ಡ್ರೋನ್ ಅನ್ನು ಬಿಎಸ್‌ಎಫ್ ಸಿಬ್ಬಂದಿ ಹೊಡೆದುರುಳಿಸಿದ್ದರು. ಆ ವೇಳೆ ಡ್ರೋನ್‌ನಿಂದ ಎ ಕೆ ಸರಣಿ ರೈಫಲ್‌ಗಳು, 40 ಸುತ್ತಿನ ಬುಲೆಟ್‌ಗಳು ಮತ್ತು ಎರಡು ಮ್ಯಾಗಜೀನ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಬಿಎಸ್‌ಎಫ್ ಯೋಧರು ಯಶಸ್ವಿಯಾಗಿದ್ದರು.
ಗಡಿ ರಾಜ್ಯ ಪಂಜಾಬ್ ಅಸ್ಥಿರಗೊಳಿಸುವ ಕುತಂತ್ರ: ಗಡಿ ರಾಜ್ಯ ಪಂಜಾಬ್ ಅನ್ನು ಅಸ್ಥಿರಗೊಳಿಸಲು ಉದ್ದೇಶಪೂರ್ವಕ ಬಂದೂಕುಗಳನ್ನು ತಂದು ಡ್ರೋನ್ಗಳಿಂದ ಬಿಡಲಾಗುತ್ತಿದೆ ಎಂದು ಮಾಹಿತಿ ಬಿಎಸ್ಎಫ್ ಪಡೆಗೆ ಲಭ್ಯವಾಗಿದೆ. ಫೆಬ್ರವರಿ 26 ರಂದು ಅಮೃತಸರ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಮತ್ತೊಂದು ಡ್ರೋನ್ ಅನ್ನು ಪಾಕಿಸ್ತಾನದ ಕಡೆಯಿಂದ ಭಾರತೀಯ ಭೂಪ್ರದೇಶಕ್ಕೆ ನುಗ್ಗುತ್ತಿರುವುದನ್ನು ನೋಡಿದ್ದ ಬಿಎಸ್‌ಎಫ್ ಯೋಧರು ಕ್ಷಣಾರ್ಧದಲ್ಲಿ ಹೊಡೆದು ಉರುಳಿಸಿದ್ದಾರೆ.
ಅಕ್ರಮ ವಸ್ತು ಸಾಗಣೆ ಡ್ರೋನ್ ಹೊಡೆದ ಉರುಳಿಸಿದ ಬಿಎಸ್ಎಫ್: ಇದಕ್ಕೂ ಮುನ್ನ ಜನವರಿಯಲ್ಲಿ ಐದು ಕೆಜಿ ಅಕ್ರಮ ವಸ್ತುಗಳನ್ನು ಸಾಗಣೆ ಮಾಡುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್‌ಎಫ್ ಹೊಡೆದು ಛಿದ್ರಗೊಳಿಸಿದ್ದರು. ಬಿಎಸ್ಎಫ್ ಯೋಧರು ಆ ಡ್ರೋನ್ದಿಂದ ಅಕ್ರಮ ವಸ್ತುಗಳನ್ನು ವಶಕ್ಕೆ ಪಡೆದಿದ್ದರು.