ETV Bharat / bharat

ಕರ್ನಾಟಕಕ್ಕೆ ವಿದ್ಯುತ್​ ನೀಡದ ಕಾಂಗ್ರೆಸ್​ನಿಂದ ತೆಲಂಗಾಣದ ಅಭಿವೃದ್ಧಿ ಅಸಾಧ್ಯ: ಕೆ.ಟಿ.ರಾಮರಾವ್ - ತೆಲಂಗಾಣ ವಿಧಾನಸಭೆ ಚುನಾವಣೆ

ಆಡಳಿತಾರೂಢ ಬಿಆರ್​ಎಸ್​ ತೆಲಂಗಾಣದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೇರಲು 'ಕೆಸಿಆರ್​ ಭರವಸೆ' ಪ್ರಣಾಳಿಕೆಯ ಪ್ರಚಾರ ಕಾರ್ಯ ನಡೆಸುತ್ತಿದೆ.

ಕೆಟಿ ರಾಮರಾವ್
ಕೆಟಿ ರಾಮರಾವ್
author img

By PTI

Published : Oct 25, 2023, 10:12 PM IST

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣಾ ಕಣದಲ್ಲಿ ಆರೋಪ-ಪ್ರತ್ಯಾರೋಪಗಳ ಭರಾಟೆ ಜೋರಾಗಿದೆ. ಕಾಂಗ್ರೆಸ್​ ವಿರುದ್ಧ ಆಡಳಿತಾರೂಢ ಭಾರತ್​ ರಾಷ್ಟ್ರ ಸಮಿತಿ (ಬಿಆರ್​ಎಸ್​) ತೀವ್ರ ವಾಗ್ದಾಳಿ ನಡೆಸುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರ ತವರಾದ ಕರ್ನಾಟಕದಲ್ಲಿ ಜನರಿಗೆ ವಿದ್ಯುತ್​ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ತೆಲಂಗಾಣಕ್ಕೆ ನೀಡಿದ ಭರವಸೆಗಳನ್ನು ಈಡೇರಿಸುತ್ತಾರಾ ಎಂದು ಸಿಎಂ ಕೆ.ಚಂದ್ರಶೇಖರ್​ರಾವ್ ಅವರ ಪುತ್ರ, ಸಚಿವ ಕೆ.ಟಿ.ರಾಮರಾವ್​ ಪ್ರಶ್ನಿಸಿದರು.

ನೆರೆ ರಾಜ್ಯ ಕರ್ನಾಟಕದ ಜನರು ಕಾಂಗ್ರೆಸ್‌ಗೆ ಮತ ನೀಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ. ನಿರಂತರ ಲೋಡ್​ ಶೆಡ್ಡಿಂಗ್​ನಿಂದಾಗಿ ರಾಜ್ಯ ಕತ್ತಲೆಯಲ್ಲಿ ಮುಳುಗಿದೆ. ವಿದ್ಯುತ್ ಕಡಿತವನ್ನು ವಿರೋಧಿಸಿ ರೈತರು ವಿದ್ಯುತ್ ಸರಬರಾಜು ಕಚೇರಿಗೆ ಮೊಸಳೆ ತಂದುಬಿಟ್ಟಿದ್ದಾರೆ. ಇಂತಹ ಪಕ್ಷದ ಅಧ್ಯಕ್ಷರು ತೆಲಂಗಾಣದಲ್ಲಿ ಪ್ರಗತಿಯ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್​ನಿಂದ ಅಭಿವೃದ್ಧಿ ಹಳಿ ತಪ್ಪಲಿದೆ: ಇತರ ಪಕ್ಷಗಳ ನಾಯಕರು ಬಿಆರ್​ಎಸ್​ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತೆಲಂಗಾಣದಲ್ಲಿ ಪ್ರಗತಿಯ ಹಾದಿ ಹಳಿ ತಪ್ಪಲಿದೆ. ಇದಕ್ಕೆ ನೆರೆ ರಾಜ್ಯ ಕರ್ನಾಟಕವೇ ಸಾಕ್ಷಿ. ಇದೀಗ ಕಾಂಗ್ರೆಸ್ ನಮ್ಮ ರಾಜ್ಯದ ರೈತರನ್ನೂ ಒಕ್ಕಲೆಬ್ಬಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಕೈ ಪಕ್ಷಕ್ಕೆ ಮತ ನೀಡಬಾರದು ಎಂದು ಹೇಳಿದರು.

ಬಿಆರ್​ಎಸ್​ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಲ್ಲಿ ರೈತರಿಗೆ 24x7 ಉಚಿತ ವಿದ್ಯುತ್​ ಪೂರೈಕೆಯ ವಾಗ್ದಾನ ನೀಡಿದೆ. ಆದರೆ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಎ ರೇವಂತ್ ರೆಡ್ಡಿ ಇದರ ವಿರುದ್ಧವಾಗಿದ್ದಾರೆ. ಅವರು 3 ಗಂಟೆ ಮಾತ್ರ ವಿದ್ಯುತ್​ ಪೂರೈಕೆಗೆ ಬಗ್ಗೆ ಒಲುವು ವ್ಯಕ್ತಪಡಿಸಿದ್ದಾರೆ. ತೆಲಂಗಾಣದಲ್ಲಿ ಅಧಿಕಾರಕ್ಕಾಗಿ ಒಂದು ಅವಕಾಶವನ್ನು ನೀಡಿ ಎಂದು ಕಾಂಗ್ರೆಸ್ ಕೇಳುತ್ತಿದೆ. ಈ ಹಿಂದೆ 11 ಅವಕಾಶಗಳನ್ನು ನೀಡಲಾಗಿತ್ತು. ಆಗ್ಯಾಕೆ ಅಭಿವೃದ್ಧಿ ಮಾಡಲಿಲ್ಲ ಎಂದು ಸಿಎಂ ಪುತ್ರ ಪ್ರಶ್ನಿಸಿದರು.

ಅವಿಭಜಿತ ಆಂಧ್ರಪ್ರದೇಶ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಸುದೀರ್ಘ ಆಡಳಿತದಲ್ಲಿ ವಿದ್ಯುತ್, ನೀರು ಮತ್ತು ಇತರ ಪೂರೈಕೆಯನ್ನು ಜನರಿಗೆ ಅಗತ್ಯದಷ್ಟು ನೀಡಲಿಲ್ಲ ಎಂದು ಆರೋಪಿಸಿದ ಅವರು, ಬಿಆರ್‌ಎಸ್ ಸರ್ಕಾರ ವಿದ್ಯುತ್, ನೀರಾವರಿ, ಕುಡಿಯುವ ನೀರು ಪೂರೈಕೆ ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಂದ ರಾಜ್ಯವ ಸುಧಾರಣೆ ಕಂಡಿದೆ. ಕಾಂಗ್ರೆಸ್‌ಗೆ ಅಧಿಕಾರ ನೀಡಿದಲ್ಲಿ ಹದಗೆಡುತ್ತದೆ ಎಂದು ಹೇಳಿದರು.

ಕೆಸಿಆರ್​ ಭರೋಸಾ ಕಾರ್ಯಕ್ರಮ: ಬಿಆರ್‌ಎಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಜನರ ಬಳಿಗೆ ಕೊಂಡೊಯ್ಯಲು 'ಕೆಸಿಆರ್ ಭರೋಸಾ' (ಭರವಸೆ) ಪ್ರಚಾರ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಸಾಮಾಜಿಕ ಭದ್ರತಾ ಪಿಂಚಣಿಗಳ ಹೆಚ್ಚಳ ಮತ್ತು ರೈತರಿಗೆ 'ರೈತು ಬಂಧು' ಯೋಜನೆ ಸೇರಿದಂತೆ ಚುನಾವಣಾ ಭರವಸೆಗಳನ್ನು ಈಡೇರಿಸುವುದಾಗಿ ರಾಮರಾವ್​ ಹೇಳಿದರು. ಇದೇ ವೇಳೆ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ವಾರ್ಷಿಕ ಉದ್ಯೋಗ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು. ತೆಲಂಗಾಣದಲ್ಲಿ ನವೆಂಬರ್ 30 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಡಿಸೆಂಬರ್​ 3 ರಂದು ಫಲಿತಾಂಶ ಹೊರಬರಲಿದೆ.

ಇದನ್ನೂ ಓದಿ: ಹಿಂಗಾರು ಹಂಗಾಮಿಗೆ ರಸಗೊಬ್ಬರಗಳ ಮೇಲೆ ₹22,303 ಕೋಟಿ ಸಬ್ಸಿಡಿ ನೀಡಲು ಕೇಂದ್ರ ಸಂಪುಟ ಒಪ್ಪಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.