ಜಗಿತ್ಯಾಲ: ಮದುವೆ ಮನೆಯೊಂದರಲ್ಲಿ ದಾರುಣ ಘಟನೆಯೊಂದು ನಡೆದಿದೆ. ಬಾವನೇ ಬಾಮೈದುನನ್ನು ಕೊಲೆ ಮಾಡಿರುವ ಘಟನೆ ಅಂಬಾರಿಪೇಟೆ ಗ್ರಾಮದಲ್ಲಿ ನಡೆದಿದೆ.
ಪೊಲಾಸ ಗ್ರಾಮಕ್ಕೆ ಸೇರಿದ ಪೌಲಸ್ತೇಶ್ವರಸ್ವಾಮಿ ದೇವಸ್ಥಾನದ ಅಧ್ಯಕ್ಷ, ವೀರ್ಲ ಶಂಕರ್ರ (48) ಸಹೋದರಿಯಾದ ಜಮುನಾಳನ್ನು ಅಂಬಾರಿಪೇಟೆ ನಿವಾಸಿ ಆದಿ ವೆಂಕಟೇಶ್ ಜೊತೆ ಮದುವೆ ಮಾಡಲಾಗಿತ್ತು. ವೆಂಕಟೇಶ್ ಮತ್ತು ಜಮುನಾ ದಂಪತಿಗೆ ಪ್ರವಳಿಕಾ ಮತ್ತು ಪೂಜಿತಾ ಎಂಬ ಇಬ್ಬರು ಹೆಣ್ಮಕ್ಕಳು.
ಕೆಲವು ವರ್ಷಗಳ ಬಳಿಕ ವೆಂಕಟೇಶ್ ಮತ್ತೊಂದು ಮದುವೆ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ಸಂಸಾರ ನಡೆಸುತ್ತಿದ್ದಾನೆ. ಆದರೆ ವೆಂಕಟೇಶ್ ವ್ಯವಸಾಯ ಭೂಮಿ ಮೊದಲ ಹೆಂಡ್ತಿ ಹೆಸರಲ್ಲಿದೆ. ಅದರಲ್ಲಿ ಸ್ವಲ್ಪ ಭೂಮಿಯನ್ನು ವೆಂಕಟೇಶ್ ಬಾಮೈದುನ ವೀರ್ಲ ಶಂಕರ್ ಮಾರಿದ್ದಾರೆ. ಬಂದ ಹಣದಲ್ಲಿ ವೆಂಕಟೇಶ್ನ ಮೊದಲ ಮಗಳ ಮದುವೆ ಮಾಡಲು ಜಮುನಾ ನಿರ್ಧರಿಸಿದ್ದಾರೆ.
ಓದಿ: ಚೂಪಾದ ಕೊಕ್ಕೆಯಿಂದ ಚುಚ್ಚಿ ಮೀನುಗಾರನ ಬಲಿ ಪಡೆದ Black Marlin ಮೀನು!
ಬಾಮೈದ ಶಂಕರ್ ನನ್ನ ಭೂಮಿಯನ್ನು ಮಾರಾಟ ಮಾಡಿದ್ದಾನೆ ಎಂಬ ಕೋಪ ವೆಂಕಟೇಶ್ಗೆ ಕಾಡುತ್ತಿತ್ತು. ಗುರುವಾರದಂದು ಜಮುನಾ ಮೊದಲ ಮಗಳು ಪ್ರವಳಿಕ ಮದುವೆ ನಿಶ್ಚಿಯವಾಗಿತ್ತು. ಮದುವೆ ಮಂಟಪಕ್ಕೆ ಅಗತ್ಯವಾದ ವಸ್ತುಗಳನ್ನು ತರುತ್ತಿರುವಾಗ ವೆಂಕಟೇಶ್ ತನ್ನ ಬಾವಮೈದ ಶಂಕರ್‌ನೊಂದಿಗೆ ಕಲಹಕ್ಕೆ ಮುಂದಾಗಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಶಂಕರ್ ಮೇಲೆ ವೆಂಕಟೇಶ್ ಕೊಡಲಿಯಿಂದ ದಾಳಿ ನಡೆಸಿದ್ದಾನೆ. ರಕ್ತಸ್ರಾವ ಕಂಡ ಸಂಬಂಧಿಕರು ಕೂಡಲೇ ಶಂಕರ್ನನ್ನು ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯುತ್ತಿರುವಾಗ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಜಗಳದ ವೇಳೆ ಶಂಕರ್ ತಾಯಿ ಗಂಗಮ್ಮಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.