ETV Bharat / bharat

ವರನ ಹಳ್ಳಿಗಿಲ್ಲ ಸೂಕ್ತ ರಸ್ತೆ- ಎತ್ತಿನ ಗಾಡಿಯಲ್ಲೇ ಮಂಟಪ ತಲುಪಿದ ವಧು - ಎತ್ತಿನ ಗಾಡಿಯಲ್ಲಿ ಬಂದ ವಧು

ವರನ ಹಳ್ಳಿಗೆ ಸೂಕ್ತ ರಸ್ತೆ ಇಲ್ಲದ ಹಿನ್ನೆಲೆ ವಿವಾಹ ಸಮಾರಂಭ ಸ್ಥಳಕ್ಕೆ ಎತ್ತಿನ ಗಾಡಿಯಲ್ಲಿ ವಧು ಬಂದಿದ್ದರೆ, ವಧುವಿನ ಸಂಬಂಧಿಕರು ಸುಡುಬಿಸಿಲಿನಲ್ಲಿ ಕಾಲ್ನಡಿಗೆ ಮೂಲಕ ಮದುವೆ ಮಂಟಪ ತಲುಪಿದ್ದಾರೆ.

bride came by Bullock cart
ತ್ತಿನ ಗಾಡಿಯಲ್ಲಿ ಮಂಟಪ ತಲುಪಿದ ವಧು
author img

By

Published : Apr 28, 2022, 1:38 PM IST

Updated : Apr 28, 2022, 2:15 PM IST

ಆದಿಲಾಬಾದ್(ತೆಲಂಗಾಣ): ವಿವಾಹ ಸಮಾರಂಭದಲ್ಲಿ ಸಾಮಾನ್ಯವಾಗಿ ವಧುವರರ ಆಗಮನ ವಿಶೇಷವಾಗಿರುತ್ತದೆ. ಆದರೆ ಇಲ್ಲೊಂದು ಮದುವೆಯಲ್ಲಿ ವರನ ಹಳ್ಳಿಗೆ ವಧು ಎತ್ತಿನ ಗಾಡಿಯಲ್ಲಿ ಬಂದಿದ್ದಾರೆ. ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣ. ವಧುವಿನ ಸಂಬಂಧಿಕರು ಸಹ ಈ ಸುಡುಬಿಸಿಲಿನಲ್ಲಿ ನಡೆದೇ ವಿವಾಹ ನಡೆದ ಸ್ಥಳಕ್ಕೆ ತಲುಪಿದ್ದಾರೆ.

ಎತ್ತಿನ ಗಾಡಿಯಲ್ಲೇ ಮಂಟಪ ತಲುಪಿದ ವಧು

ಅದಿಲಾಬಾದ್ ಜಿಲ್ಲೆಯ ವನವಾತ್ ಪಂಚಾಯತ್ ವ್ಯಾಪ್ತಿಯ ಮಾಂಗ್ಲಿಯ ಸೆಡ್ಮಕಿ ಸೀತಾಬಾಯಿ ಅವರ ಪುತ್ರ ಕೋಶ್ರಾವ್ ಅವರ ವಿವಾಹವು ಗುಡಿಹತ್ನೂರು ಮಂಡಲದ ಜೀಡಿಪಲ್ಲಿ ಗ್ರಾಮದ ಗಂಗಾದೇವಿ ಅವರೊಂದಿಗೆ ನಿಶ್ಚಯವಾಗಿತ್ತು. ಮದುವೆ ಚೆನ್ನಾಗಿಯೇ ನಡೆಯಿತು. ಸಮಾರಂಭವನ್ನು ವೀಕ್ಷಿಸಲು ಸಂಬಂಧಿಕರು ಸಹ ಬಂದಿದ್ದರು. ಆದರೆ, ವಧು ಮತ್ತು ಅವರ ಸಂಬಂಧಿಕರು ಮದುವೆ ಸ್ಥಳಕ್ಕೆ ಬರಲು ತೊಂದರೆ ಅನುಭವಿಸಿದ್ದಾರೆ. ವಧು ಎತ್ತಿನ ಬಂಡಿಯಲ್ಲಿ ಬಂದಿದ್ದರೆ, ಸಂಬಂಧಿಕರು ನಡೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಗ್ರಾಹಕನಿಗೆ ಬಂತು 1,41,770 ರೂಪಾಯಿ ಬಿಲ್: ಏರ್​​ಟೆಲ್​​ಗೆ ಗ್ರಾಹಕ ನ್ಯಾಯಾಲಯದಿಂದ ದಂಡ!

ಮಾಂಗ್ಲಿ ಗ್ರಾಮದಲ್ಲಿ 100 ಸದಸ್ಯರುಳ್ಳ 30 ಬುಡಕಟ್ಟು ಕುಟುಂಬಗಳು ವಾಸಿಸುತ್ತಿವೆ. ವನವಾತ್​ವರೆಗೆ ಟೆಂಪೋ ವಾಹನದಲ್ಲಿ ವಧುವಿನ ಕುಟುಂಬದವರು ಹಾಗೂ ಸಂಬಂಧಿಕರು ಬಂದಿದ್ದರು. ಮಾಂಗ್ಲಿ ಗ್ರಾಮವನ್ನು ತಲುಪಲು ಇನ್ನೂ 4 ಕಿ.ಮೀ. ದಾರಿ ಇದ್ದು, ಸೂಕ್ತ ರಸ್ತೆ ಇರಲಿಲ್ಲ. ಆ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. ನಂತರ ವರನ ಕಡೆಯವರು ವಧುವಿಗೆ ಎತ್ತಿನ ಬಂಡಿಯ ವ್ಯವಸ್ಥೆ ಮಾಡಿದ್ದಾರೆ. ಉಳಿದವರು ಕಾಲ್ನಡಿಗೆಯಲ್ಲಿ ತಲುಪಿದ್ದಾರೆ.

Last Updated : Apr 28, 2022, 2:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.