ಚಿತ್ತೂರು(ಆಂಧ್ರಪ್ರದೇಶ): 21 ವರ್ಷದ ಯುವತಿ ಮೇಲೆ ಆಕೆಯ ಗೆಳೆಯ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪೆನುಮೂರು ಮಂಡಲದ ಕೊಟ್ಟೂರಿನಲ್ಲಿ ನಡೆದಿದೆ.
ದ್ವಿಚಕ್ರ ವಾಹನದಲ್ಲಿ 21 ವರ್ಷದ ಗಾಯತ್ರಿ ತೆರಳುತ್ತಿದ್ದ ವೇಳೆ ಆಕೆಯ ಮೇಲೆ ಹಲ್ಲೆ ನಡೆಸಲಾಗಿದ್ದು, ಯುವಕ ಎರಡು ಚಾಕುಗಳಿಂದ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಆಕೆಯ ಹೊಟ್ಟೆಯ ತುಂಬ ಚಾಕುವಿನಿಂದ ಇರಿದಿರುವ ಪರಿಣಾಮ ರಕ್ತಸ್ರಾವವಾಗಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ತಕ್ಷಣವೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಚಿಕಿತ್ಸೆಗಾಗಿ ಆಕೆಯನ್ನ ತಕ್ಷಣವೇ ಪೆನುಮೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ವೆಲ್ಲೂರು ಸಿಎಂಸಿ ಆಸ್ಪತ್ರೆಗೆ ದಾಖಲು ಮಾಡುವಂತೆ ತಿಳಿಸಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ಸಾವನ್ನಪ್ಪಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. 19 ವರ್ಷದ ಯುವಕ ಬಾಬು ಈ ಕೃತ್ಯವೆಸಗಿದ್ದಾನೆ. ಪ್ರಾಥಮಿಕ ತನಿಖೆ ಪ್ರಕಾರ ಇಬ್ಬರು ಕಾಲೇಜು ದಿನಗಳಲ್ಲಿ ಪ್ರೀತಿಸುತ್ತಿದ್ದರು. ಆದರೆ ಕೆಲ ವರ್ಷಗಳಿಂದ ಬೇರೆಯಾಗಿದ್ದರು. ಬಾಲಕಿಯ ತಂದೆ ಇದೇ ವಿಷಯಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ವೇಳೆ ಎರಡು ಗ್ರಾಮದ ಮುಖ್ಯಸ್ಥರು ರಾಜಿ ಮಾಡಿಸಿದ್ದರು. ಆದರೆ ಮೇಲಿಂದ ಮೇಲೆ ಗಾಯತ್ರಿ ಜತೆ ಈತ ವಾದ ನಡೆಸುತ್ತಿದ್ದನು. ಇದರ ಬೆನ್ನಲ್ಲೇ ಆಕೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಓದಿ: ತಂದೆಯಿಂದಲೇ ಅವಳಿ ಹೆಣ್ಣು ಮಕ್ಕಳ ಮೇಲೆ ರೇಪ್: ಹೈದರಾಬಾದ್ನಲ್ಲಿ ಘಟನೆ
ಗಾಯತ್ರಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಆರೋಪಿ ಮನೆಯವರ ಮೇಲೆ ಹಲ್ಲೆ ನಡೆಸಿರುವ ಘಟನೆ ಸಹ ನಡೆದಿದೆ.