ETV Bharat / bharat

ಪೊಲೀಸ್ ಅಧಿಕಾರಿಯ ವಾಹನದ ಕೆಳಗೆ ಬಾಂಬ್: ತಪ್ಪಿದ ಅನಾಹುತ

author img

By

Published : Aug 17, 2022, 8:48 PM IST

ಪೊಲೀಸ್ ಅಧಿಕಾರಿಯ ವಾಹನದ ಕೆಳಗೆ ಬಾಂಬ್ ಇಡಲಾಗಿತ್ತು. ಬೆಳಿಗ್ಗೆ ಕಾರು ತೊಳೆಯಲು ಪ್ರಾರಂಭಿಸಿದಾಗ ಸ್ಫೋಟಕ ವಸ್ತು ಕಂಡುಬಂದಿದೆ.

A bomb in a police vehicle
A bomb in a police vehicle

ಅಮೃತಸರ(ಪಂಜಾಬ್​): ಸೋಮವಾರ ರಾತ್ರಿ ಅಮೃತಸರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ವಾಹನದ ಕೆಳಗೆ ಬಾಂಬ್ ಇಡಲಾಗಿತ್ತು. ಬೈಕ್‌ನಲ್ಲಿ ಬಂದ ಕಿಡಿಗೇಡಿಗಳು ಸಬ್ ಇನ್ಸ್‌ಪೆಕ್ಟರ್ ದಿಲ್‌ಬಾಗ್ ಸಿಂಗ್ ಅವರ ವಾಹನದ ಕೆಳಗೆ ಸ್ಫೋಟಕ ಇಟ್ಟಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೂಲಗಳ ಪ್ರಕಾರ, ಅಧಿಕಾರಿಯ ಕುಟುಂಬ ಸದಸ್ಯರಲ್ಲಿ ಒಬ್ಬರು ಬೆಳಿಗ್ಗೆ ಕಾರು ತೊಳೆಯಲು ಪ್ರಾರಂಭಿಸಿದಾಗ ಸ್ಫೋಟಕ ವಸ್ತು ನೋಡಿ ದಿಲ್ಬಾಗ್ ಸಿಂಗ್ ಅವರಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಸಿಂಗ್ ಅವರು ಹತ್ತಿರದ ರಂಜಿತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸ್ ಅಧಿಕಾರಿಯ ವಾಹನದ ಕೆಳಗೆ ಬಾಂಬ್

ಈ ಕುರಿತು ಮಾತನಾಡಿದ ದಿಲ್‌ಬಾಗ್, ಇಬ್ಬರು ಬೈಕ್‌ನಲ್ಲಿ ಬಂದ ವ್ಯಕ್ತಿಗಳು ರಾತ್ರಿ ತನ್ನ ಮನೆಯ ಹೊರಗೆ ನಿಲ್ಲಿಸಿದ್ದ ವಾಹನದ ಟೈರ್ ಬಳಿ ಸ್ಫೋಟಕ ವಸ್ತುಗಳನ್ನು ಇರಿಸಿದ್ದಾರೆ. ಸಿಸಿಟಿವಿ ಫೂಟೇಜ್ ಪ್ರಕಾರ 2 ಗಂಟೆ ಸುಮಾರಿಗೆ ಕೃತ್ಯ ಎಸಗಲಾಗಿದೆ. ನಾನು ಉಗ್ರಗಾಮಿಗಳ ವಿರುದ್ಧ ಕೆಲಸ ಮಾಡಿದ್ದೇನೆ. ಈ ಕಾರಣಕ್ಕೆ ಅವರು ಅವರು ಕೃತ್ಯ ಎಸಗಿರಬಹುದು ಎಂದು ಶಂಕಿಸಿದ್ದಾರೆ.

ಇದನ್ನೂ ಓದಿ: ಮದ್ಯ ಸೇವಿಸಿ ಶಾಲೆಗೆ ಬಂದು ಪ್ಯಾಂಟ್ ಕಳಚಿ ನೆಲದ ಮೇಲೆ ಮಲಗಿದ ಶಿಕ್ಷಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.