ETV Bharat / bharat

ಜಾರ್ಖಂಡ್​ನಲ್ಲಿ ಬಾಂಬ್​ ಬ್ಲಾಸ್ಟ್​.. ಹಣ್ಣು ಕೀಳಲು ಕಲ್ಲು ಎಸೆದ ಮಕ್ಕಳಿಗೆ ಗಂಭೀರ ಗಾಯ

ಜಾರ್ಖಂಡ್​ ಧನಬಾದ್​ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಇದರಲ್ಲಿ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ಜೋಗಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ.

bomb blast in dhanbad  bomb blast news in dhanbad  Jharkhand bomb blast news  ಜಾರ್ಖಂಡ್​ನಲ್ಲಿ ಬಾಂಬ್​ ಬ್ಲಾಸ್ಟ್  ಹಣ್ಣು ಕೀಳುಲು ಕಲ್ಲು ಎಸೆದ ಮಕ್ಕಳಿಗೆ ಗಂಭೀರ ಗಾಯ  ಧನಬಾದ್​ನಲ್ಲಿ ಬಾಂಬ್ ಸ್ಫೋಟ  ನಾಲ್ವರು ಮಕ್ಕಳು ಗಾಯ  ಜೋಗಟಾ ಪೊಲೀಸ್ ಠಾಣೆ ವ್ಯಾಪ್ತಿ  ಪೊಲೀಸರು ಪ್ರಕರಣದ ತನಿಖೆ  ಧನ್‌ಬಾದ್‌ನಲ್ಲಿ ಮತ್ತೆ ಸ್ಫೋಟ  ಗಾಯಗೊಂಡ ಮಕ್ಕಳಿಗೆ ಮುಂದುವರಿದ ಚಿಕಿತ್ಸೆ  ಮಾಜಿ ಮೇಯರ್ ಖಂಡನೆ  ತನಿಖೆಯಲ್ಲಿ ನಿರತ ಪೊಲೀಸರು
ಜಾರ್ಖಂಡ್​ನಲ್ಲಿ ಬಾಂಬ್​ ಬ್ಲಾಸ್ಟ್
author img

By

Published : Feb 6, 2023, 10:51 AM IST

ಧನಬಾದ್(ಜಾರ್ಖಂಡ್​): ಜಿಲ್ಲೆಯಲ್ಲಿ ಬಾಂಬ್ ಸ್ಫೋಟಗೊಂಡಿರುವ ಸುದ್ದಿ ಕೇಳಿ ಬಂದಿದೆ. ಜೋಗಟಾ ಪೊಲೀಸ್ ಠಾಣೆ ವ್ಯಾಪ್ತಿಯ ರೂಸ್ಸಿ ಮಾರ್ಗದಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಪೊದೆಗಳಲ್ಲಿ ಭಾರೀ ಸ್ಫೋಟಕ ವಸ್ತುಗಳ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಜೋಗಟಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಅದೇ ವೇಳೆ ಸ್ಫೋಟದಿಂದಾಗಿ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ಇದರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಗಾಯಗೊಂಡಿರುವ ಎಲ್ಲಾ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಧನ್‌ಬಾದ್‌ನಲ್ಲಿ ಮತ್ತೆ ಸ್ಫೋಟ: ಸಿಕ್ಕಿರುವ ಮಾಹಿತಿ ಪ್ರಕಾರ ಸಿಜುವಾ ಬೀಸ್‌ನ ಮಕ್ಕಳು ಜೋಗಾಟಾದಿಂದ ರೂಸ್ಸಿಗೆ ತೆರಳುವ ಮಾರ್ಗದಲ್ಲಿ ಮೋರಿಯ ಬಳಿಯ ಪೊದೆಗಳಲ್ಲಿ ಹಣ್ಣುಗಳನ್ನು ಕೀಳುತ್ತಿದ್ದರು. ಮಕ್ಕಳು ಹಣ್ಣುಗಳನ್ನು ಕೀಳಲು ಮರಕ್ಕೆ ಕಲ್ಲು ಎಸೆದಿದ್ದಾರೆ. ಈ ವೇಳೆ ಕಲ್ಲೊಂದು ಸ್ಫೋಟದ ವಸ್ತುಗಳ ಮೇಲೆ ಬಿದ್ದು ಸ್ಫೋಟಗೊಂಡಿದೆ. ಬಳಿಕ ಮಕ್ಕಳು ಸ್ಫೊಟದ ವಸ್ತುಗಳ ಬಳಿ ತೆರಳಿದ್ದಾರೆ. ಅಲ್ಲಿದ್ದ ಬಾಕ್ಸ್‌ವೊಂದು ತೆರೆದಿದ್ದಾರೆ. ನಂತರ ಬಾಕ್ಸ್ ಸ್ಫೋಟಗೊಂಡಿದೆ ಎಂದು ಕೆಲವರ ಮಾತಾಗಿದೆ. ಸ್ಫೋಟದಲ್ಲಿ ಗಾಯಗೊಂಡ ಬಾಲಕ ಸೊಹ್ರಾಬ್ ಹೇಳುವ ಪ್ರಕಾರ, ನಾವು ಹಣ್ಣು ಕೀಳಲು ಮರಕ್ಕೆ ಕಲ್ಲು ಎಸೆದೆವು. ಈ ವೇಳೆ ಕಲ್ಲು ಮರದಿಂದ ಸ್ವಲ್ಪ ದೂರದಲ್ಲಿ ಬಿದ್ದಿದೆ. ಕಲ್ಲು ಬಿದ್ದ ನಂತರ ಇದ್ದಕ್ಕಿದ್ದಂತೆ ಆ ಸ್ಥಳದಲ್ಲಿ ಸ್ಫೋಟ ಸಂಭವಿಸಿತು ಎಂದು ಹೇಳಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಟ್ಟೆಚ್ಚರ ವಹಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗಾಯಗೊಂಡ ಮಕ್ಕಳಿಗೆ ಮುಂದುವರಿದ ಚಿಕಿತ್ಸೆ: ಸ್ಫೋಟದಲ್ಲಿ ಗಾಯಗೊಂಡ ನಾಲ್ವರು ಮಕ್ಕಳನ್ನು ಚಿಕಿತ್ಸೆಗಾಗಿ ಬರ್ತಂಡ್‌ನ ದ್ವಾರಿಕಾ ದಾಸ್ ಸ್ಮಾರಕ ಆಸ್ಪತ್ರೆಗೆ ಕರೆತರಲಾಯಿತು. ಈ ನಾಲ್ವರಲ್ಲಿ ಶಶಾಂಕ್ ಎಂಬ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ. ಈತನನ್ನು ದುರ್ಗಾಪುರ ಮಿಷನ್ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ಚಿಕಿತ್ಸೆಗೆ ದಾಖಲಾಗಿದ್ದ ಸೊಹ್ರಾಬ್ ಎಂಬ ಬಾಲಕನ ಎರಡೂ ಕಾಲುಗಳಿಗೆ ಗಾಯವಾಗಿದ್ದು, ಬ್ಯಾಂಡೇಜ್ ಹಾಕಲಾಗಿದೆ. ಚಿಕಿತ್ಸೆ ನಂತರ ಸೊಹ್ರಾಬ್ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಹಾಗೂ ದ್ವಾರಕಾ ದಾಸ್ ಸ್ಮಾರಕ ಆಸ್ಪತ್ರೆಯಲ್ಲಿ ಸಮರ್ ಎಂಬ ಮಗುವಿನ ಚಿಕಿತ್ಸೆ ನಡೆಯುತ್ತಿದೆ. ಅಪಘಾತದಲ್ಲಿ ಗಾಯಗೊಂಡಿರುವ ಇನ್ನೋರ್ವ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಾಜಿ ಮೇಯರ್ ಖಂಡನೆ: ಆಸ್ಪತ್ರೆಯಲ್ಲಿ ಮಕ್ಕಳನ್ನು ನೋಡಲು ಬಂದಿದ್ದ ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ಚಂದ್ರಶೇಖರ ಅಗರ್ವಾಲ್ ಮಾತನಾಡಿ, ಅಕ್ರಮ ಕಲ್ಲಿದ್ದಲು ದಂಧೆಯಿಂದ ನಿರಂತರವಾಗಿ ಬಾಂಬ್ ಸ್ಫೋಟದ ಘಟನೆಗಳು ಹೆಚ್ಚಾಗಿವೆ. ಇಂದಿನ ಅವಘಡಕ್ಕೆ ಅವರೇ ಕಾರಣ. ಪ್ರಾಬಲ್ಯದಲ್ಲಿ ತೊಡಗಿರುವ ಜನ ಅಪರಾಧ ಪ್ರವೃತ್ತಿಯ ಜನರಿಗೆ ಆಶ್ರಯ ನೀಡುತ್ತಾರೆ. ಅವರು ತಮ್ಮ ಅಸ್ತಿತ್ವ ಸ್ಥಾಪಿಸಲು ಬಾಂಬ್‌ಗಳನ್ನು ಬಳಸುತ್ತಾರೆ. ಇಂದು ಜನರು ತಪ್ಪು ದಾರಿಯಲ್ಲಿ ಹಣ ಗಳಿಸುವುದರಲ್ಲಿ ತೊಡಗಿದ್ದಾರೆ. ಆದರೆ ಅದರ ದೀರ್ಘಾವಧಿಯ ಫಲಿತಾಂಶಗಳು ಕೆಟ್ಟದಾಗಿರುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ತನಿಖೆಯಲ್ಲಿ ನಿರತ ಪೊಲೀಸರು: ಸ್ಫೋಟದ ಬಗ್ಗೆ ಮಾಹಿತಿ ಪಡೆದ ಜೋಗಟಾ ಠಾಣೆ ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿದ್ದರು. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳವನ್ನು ಸೀಲ್ ಮಾಡಿದ್ದಾರೆ. ಪೊದೆಗಳಲ್ಲಿ ಸ್ಫೋಟಕಗಳು ಎಲ್ಲಿಂದ ಬಂದವು ಮತ್ತು ಯಾರಿಂದ ಬಂದವು ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಓದಿ: ಬಾಂಬ್ ಸ್ಫೋಟದಲ್ಲಿ ಟಿಎಂಸಿ ಪಕ್ಷದ ಇಬ್ಬರು ಕಾರ್ಯಕರ್ತರ ಸಾವು: ಕಾಂಗ್ರೆಸ್ ಕೈವಾಡ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.