ETV Bharat / bharat

ನರ್ಮದಾ ನದಿಯಲ್ಲಿ ಮಗುಚಿದ ದೋಣಿ: 7 ಜನರು ಪತ್ತೆ, ಹಲವರು ನಾಪತ್ತೆ - ನರ್ಮದಾ ನದಿಯಲ್ಲಿ ದೋಣಿ ಮಗುಚಿ 20 ಜನರು ನಾಪತ್ತೆ

ಮಧ್ಯಪ್ರದೇಶದ ಖಂಡ್ವಾ ವ್ಯಾಪ್ತಿಯ ನರ್ಮದಾ ನದಿಯಲ್ಲಿ ದೋಣಿ ಮಗುಚಿ 20 ಕ್ಕೂ ಹೆಚ್ಚು ಜನರು ನೀರು ಪಾಲಾಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ನಾವಿಕರು 7 ಜನರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೋಧ ಕಾರ್ಯ ಮುಂದುವರಿದಿದೆ.

drowned
drowned
author img

By

Published : Jan 8, 2021, 4:35 PM IST

ಖಂಡ್ವಾ (ಮಧ್ಯಪ್ರದೇಶ): ನರ್ಮದಾ ನದಿಯಲ್ಲಿ ದೋಣಿ ಮಗುಚಿ 20 ಕ್ಕೂ ಹೆಚ್ಚು ಜನರು ನೀರು ಪಾಲಾಗಿರುವ ಘಟನೆ ಇಲ್ಲಿನ ಖಂಡ್ವಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಹಿತಿ ಪ್ರಕಾರ, ದೋಣಿಯಲ್ಲಿದ್ದವರೆಲ್ಲ ಮೆಹೋ ನಿವಾಸಿಗಳು ಎನ್ನಲಾಗ್ತಿದೆ. ನದಿಯ ಮೂಲಕ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಮತದ ಹಕ್ಕು ಚಲಾಯಿಸಲು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಇತರ ನಾವಿಕರು 7 ಜನರನ್ನು ರಕ್ಷಿಸಿ ಬಾರ್ವಾದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ದೋಣಿಯಲ್ಲಿ ಎಷ್ಟು ಜನರಿದ್ದರು ಎಂಬ ನಿಖರ ಮಾಹಿತಿ ಇಲ್ಲ. ಅಂದಾಜು 20 ಜನರಿದ್ದರು ಎಂದು ಅಂದಾಜಿಸಲಾಗಿದೆ.

drowned
ಅಸ್ವಸ್ಥರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಘಟನೆ ನಡೆದಿದ್ದು ಹೇಗೆ?

ನದಿಯಲ್ಲಿ ಜೋರಾಗಿ ಗಾಳಿ ಬೀಸಿದ್ದರಿಂದ ಖೇಡಿ ಘಾಟ್​ನಲ್ಲಿರುವ ಮೊರ್ತಕ್ಕಾ ಸೇತುವೆ ಕೆಳಗೆ ದೋಣಿ ಪಲ್ಟಿಯಾಗಿದೆ. ಈ ವೇಳೆ ಎಲ್ಲರೂ ನೀರು ಪಾಲಾಗಿದ್ದು, ಹಲವರನ್ನು ರಕ್ಷಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.