ETV Bharat / bharat

ನಟ ಮಿಥುನ್​ ಚಕ್ರವರ್ತಿ ಭೇಟಿಯಾದ ಬಿಜೆಪಿಯ ಕೈಲಾಶ್ ವಿಜಯವರ್ಗಿಯಾ - ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ

ಪಶ್ಚಿಮ ಬಂಗಾಳದ ಪ್ರಸಿದ್ಧ ನಟ ಮಿಥುನ್​ ಚಕ್ರವರ್ತಿ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಶನಿವಾರ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಕೋಲ್ಕತ್ತಾದ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

BJP's Kailash Vijayvargiya meets actor Mithun Chakraborty
ನಟ ಮಿಥುನ್​ ಚಕ್ರವರ್ತಿ ಭೇಟಿ ಮಾಡಿದ ಬಿಜೆಪಿಯ ಕೈಲಾಶ್ ವಿಜಯವರ್ಗಿಯಾ
author img

By

Published : Mar 7, 2021, 7:13 AM IST

ಕೋಲ್ಕತ್ತಾ/ಪಶ್ಚಿಮ ಬಂಗಾಳ: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಕೋಲ್ಕತ್ತಾದಲ್ಲಿ ನಟ ಮಿಥುನ್ ಚಕ್ರವರ್ತಿಯವರನ್ನು ಶನಿವಾರ ಭೇಟಿ ಮಾಡಿದ್ದಾರೆ.

ಬೆಲ್ಗಾಚಿಯಾದಲ್ಲಿರುವ ಮಿಥುನ್​ ನಿವಾಸಕ್ಕೆ ತೆರಳಿ ಕೈಲಾಶ್ ವಿಜಯವರ್ಗಿಯಾ ಮಾತುಕತೆ ನಡೆಸಿದ್ದಾರೆ. ನಟ ಮಿಥುನ್​ ಚಕ್ರವರ್ತಿ ಬಿಜೆಪಿಗೆ ಸೇರುವ ಕುರಿತ ಊಹಾಪೋಹಗಳ ಬಗ್ಗೆ ವಿಜಯವರ್ಗಿಯಾ ಈ ಹಿಂದೆ "ನಾನು ಅವರೊಂದಿಗೆ (ಮಿಥುನ್ ಚಕ್ರವರ್ತಿ) ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರೊಂದಿಗೆ ವಿವರವಾದ ಚರ್ಚೆಯ ನಂತರವೇ ನಾನು ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ" ಎಂದು ಹೇಳಿದ್ರು. 70ರ ಹರೆಯದ ಚಕ್ರವರ್ತಿ ಎರಡು ವರ್ಷಗಳ ಕಾಲ ಟಿಎಂಸಿಗೆ ರಾಜ್ಯಸಭಾ ಸಂಸದರಾಗಿದ್ದರು. ನಂತರ ರಾಜೀನಾಮೆ ನೀಡಿದ್ದರು.

ವಿಧಾನಸಭೆ ಚುನಾವಣಾ ವೇಳಾಪಟ್ಟಿ ಪ್ರಕಟವಾದ ನಂತರ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 7 ರಂದು ಪಶ್ಚಿಮ ಬಂಗಾಳದಲ್ಲಿ ಮೊದಲ ಱಲಿ ನಡೆಸುತ್ತಿದ್ದು, ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಈ ಱಲಿ ನಡೆಯಲಿದೆ. ಪಕ್ಷದ ಮೂಲಗಳ ಪ್ರಕಾರ, ಈ ಕಾರ್ಯಕ್ರಮಕ್ಕೆ ಅನೇಕ ಜಾನಪದ ಕಲಾವಿದರನ್ನು ಆಹ್ವಾನಿಸಲಾಗಿದ್ದು, ಅವರು ಪ್ರದರ್ಶನ ನೀಡಲಿದ್ದಾರೆ.

ಪಶ್ಚಿಮ ಬಂಗಾಳದ 294 ವಿಧಾನಸಭಾ ಸ್ಥಾನಗಳ ಚುನಾವಣೆ ಮಾರ್ಚ್ 27 ರಿಂದ ಪ್ರಾರಂಭವಾಗಲಿದೆ. ಈ ವರ್ಷ ಎಂಟು ಹಂತದಲ್ಲಿ ನಡೆಯಲಿರೋ ವಿಧಾನಸಭಾ ಚುನಾವಣೆಗೆ ರಾಜ್ಯ ಸಾಕ್ಷಿಯಾಗಲಿದೆ.

ಇದನ್ನೂ ಓದಿ:ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ: 40 ಮಂದಿ ಅಭ್ಯರ್ಥಿಗಳ ಘೋಷಿಸಿದ ಕಾಂಗ್ರೆಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.