ETV Bharat / bharat

ಯುಪಿಯಲ್ಲಿ ಬಿಜೆಪಿ ಸರಣಿ ಸಭೆಗಳ ತಂತ್ರ: ಏನಿದರ ಗುಟ್ಟು! - ಉತ್ತರ ಪ್ರದೇಶ ರೈತ ಸಭೆ ಸುದ್ದಿ

ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ರೈತ ಪರ ಸಭೆಗಳ ಸರಣಿ ಯೋಜಿಸುವ ಮೂಲಕ ಬಿಜೆಪಿ ವಿರೋಧಿ ಮನಸ್ಥಿತಿಯನ್ನು ಅಳಿಸಿ ಹಾಕಲು ಮುಂದಾಗಿದೆ.

BJP
ಯುಪಿಯಲ್ಲಿ ಬಿಜೆಪಿ ಸರಣಿ ಸಭೆ
author img

By

Published : Feb 18, 2021, 2:10 PM IST

ಲಖನೌ: ರೈತರಲ್ಲಿ ಕೃಷಿ ಕಾನೂನುಗಳಿಗೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ತೆರವುಗೊಳಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ರೈತ ಪರ ಸಭೆಗಳ ಸರಣಿಯನ್ನು ಯೋಜಿಸುತ್ತಿದೆ.

ಪೂರ್ವ ಉತ್ತರ ಪ್ರದೇಶದಲ್ಲೂ ನಡೆಯಲಿರುವ ಈ ಸಭೆಗಳ ಜವಾಬ್ದಾರಿಯನ್ನು ರೈತರೊಂದಿಗೆ ಸಂಪರ್ಕ ಹೊಂದಿರುವ ನಾಯಕರಿಗೆ ವಹಿಸಲಾಗುವುದು ಎಂದು ಮೂಲಗಳು ತಿಳಿಸಿದೆ.

ಇನ್ನು ಪಶ್ಚಿಮ ಉತ್ತರ ಪ್ರದೇಶದ ಕಿಸಾನ್ ಪಂಚಾಯತ್‌ಗಳ ಮೂಲಕ ರೈತರ ಆಂದೋಲನಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕರೆ ನೀಡಿದ್ದು, ಈ ಪ್ರಯತ್ನ ಎದುರಿಸಲು ಇದು ಬಿಜೆಪಿಯ ಮಾರ್ಗವಾಗಿದೆ.

ಕಳೆದ ಎರಡು ವಾರಗಳಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೂರು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದರು. ಇನ್ನು ಇತ್ತೀಚಿಗೆ ಬಿಜ್ನೋರ್​ನಲ್ಲಿ ಮತ್ತೊಂದು ಕಿಸಾನ್ ಪಂಚಾಯತ್ ಅನ್ನು ಉದ್ದೇಶಿಸಿ ಮಾತನಾಡಿದ್ದರು.

"ಪ್ರತಿಪಕ್ಷಗಳು ಉದ್ದೇಶಪೂರ್ವಕವಾಗಿ ರೈತರಲ್ಲಿ ನಿರ್ಮಿಸುತ್ತಿರುವ ಬಿಜೆಪಿ ವಿರೋಧಿ ಮನಸ್ಥಿತಿಯನ್ನು ನಾವು ಎದುರಿಸಬೇಕಾಗಿದೆ. 2017ರ ಯುಪಿ ಚುನಾವಣೆಯಲ್ಲಿ ಬಿಜೆಪಿ ಕಳೆದುಕೊಂಡ 84 ಸ್ಥಾನಗಳು ಸೇರಿದಂತೆ ಎಲ್ಲ ವಿಧಾನಸಭಾ ಸ್ಥಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ನಾವು ನಮ್ಮ ಕಾರ್ಯಕರ್ತರನ್ನು ಕೇಳುತ್ತಿದ್ದೇವೆ. ದೀರ್ಘ ಅಂತರದ ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಮರಳಿದ್ದೇವೆ "ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಅಷ್ಟೇ ಅಲ್ಲದೆ, ರೈತರ ಮೇಲೆ ಏನಾದರೂ ಹಾನಿಯಾಗಿದೆ ಎಂದು ಕಂಡುಹಿಡಿಯಲು ಸಹ ಕಾರ್ಯಕರ್ತರಿಗೆ ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.