ETV Bharat / bharat

100ಕ್ಕೂ ಹೆಚ್ಚು ಕೋಳಿಗಳ ದಿಢೀರ್ ಸಾವು: 25 ಸಾವಿರ ಕುಕ್ಕುಟಗಳ ಕೊಲ್ಲಲು ಆದೇಶ - 25 ಸಾವಿರ ಕೋಳಿಗಳ ಕೊಲ್ಲಲು ಆದೇಶ

ಥಾಣೆಯ ಶಹಾಪುರ ತಾಲೂಕಿನ ವೆಹ್ಲೊಲಿ ಗ್ರಾಮ ಪೌಲ್ಟ್ರಿ ಫಾರ್ಮ್​ನಲ್ಲಿ ಕೋಳಿಗಳು ದಿಢೀರ್‌ ಸಾವನ್ನಪ್ಪಿದ್ದು, ಸುಮಾರು 25 ಸಾವಿರ ಕೋಳಿಗಳನ್ನು ಕೊಲ್ಲಲು ಆದೇಶ ಹೊರಡಿಸಲಾಗಿದೆ.

Bird flu scare in Maharashtra, 100 chickens found dead in Thane's poultry farm
ನೂರಕ್ಕೂ ಹೆಚ್ಚು ಕೋಳಿಗಳ ದಿಢೀರ್ ಸಾವು: 25 ಸಾವಿರ ಕೋಳಿಗಳ ಕೊಲ್ಲಲು ಆದೇಶ..ಹಕ್ಕಿ ಜ್ವರ ಭೀತಿ
author img

By

Published : Feb 18, 2022, 11:34 AM IST

ಥಾಣೆ(ಮಹಾರಾಷ್ಟ್ರ): ಇದ್ದಕ್ಕಿದ್ದಂತೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕೋಳಿಗಳು ಪೌಲ್ಟ್ರಿ ಫಾರ್ಮ್​ನಲ್ಲಿ ಸಾವನ್ನಪ್ಪಿವೆ. ಅವುಗಳ ಮಾದರಿಯನ್ನು ಪುಣೆಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಥಾಣೆ ಜಿಲ್ಲಾಧಿಕಾರಿ ರಾಜೇಶ್ ಜೆ.ನಾರ್ವೆಕರ್ ಶುಕ್ರವಾರ ಮಾಹಿತಿ ನೀಡಿದ್ದಾರೆ.

ಥಾಣೆಯ ಶಹಾಪುರ ತಾಲೂಕಿನ ವೆಹ್ಲೊಲಿ ಗ್ರಾಮ ಪೌಲ್ಟ್ರಿ ಫಾರ್ಮ್​ನಲ್ಲಿ ಕೋಳಿಗಳು ಸಾವನ್ನಪ್ಪಿವೆ. ಈ ಘಟನೆ ನಡೆದ ಗ್ರಾಮದಿಂದ ಸುಮಾರು ಒಂದು ಕಿಲೋಮೀಟರ್​ ಸುತ್ತಲಿನ ಪ್ರದೇಶಗಳ ಪೌಲ್ಟ್ರಿಫಾರ್ಮ್​​ಗಳಲ್ಲಿರುವ ಸುಮಾರು 25 ಸಾವಿರ ಕೋಳಿಗಳನ್ನು ಕೊಲ್ಲಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಶುಸಂಗೋಪನಾ ಇಲಾಖೆಗೆ ಸೂಚಿಸಲಾಗಿದ್ದು, ಹಕ್ಕಿ ಜ್ವರದ ಭೀತಿ ಅಲ್ಲಿನ ಜನರನ್ನು ಕಾಡುತ್ತಿದೆ. ಏವಿಯನ್ಸ್ ಇನ್​ಫ್ಲುಯೆಂಜಾ ಅಥವಾ ಬರ್ಡ್​ಫ್ಲೂ ಎಂದು ಕರೆಯಲ್ಪಡುವ ಹಕ್ಕಿಜ್ವರ ಹರಡದಂತೆ ತಡೆಯಲು ಪುಣೆ ಆಡಳಿತ ಕ್ರಮ ಕೈಗೊಳ್ಳಲು ಮುಂದಾಗಿದೆ.

ಇದನ್ನೂ ಓದಿ: ದೇಶದಲ್ಲಿ ಹೊಸ ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆ, ಪಾಸಿಟಿವಿಟಿ ದರ ಶೇ. 2

ETV Bharat Logo

Copyright © 2025 Ushodaya Enterprises Pvt. Ltd., All Rights Reserved.