ಹೈದರಾಬಾದ್: ಚೆಸ್ನ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ಕುರಿತ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಬಾಲಿವುಡ್ ನಿರ್ದೇಶಕ ಆನಂದ್ ಎಲ್ ರೈ ವಿಶ್ವನಾಥನ್ ಆನಂದ್ ಅವರ ಬಯೋಪಿಕ್ ನಿರ್ದೇಶಿಸಲಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಆನಂದ್ ಎಲ್ ರೈ ಈ ಮೊದಲು 'ತನು ವೆಡ್ಸ್ ಮನು' ಮತ್ತು 'ರಂಝಾನಾ' ಚಿತ್ರವನ್ನು ನಿರ್ದೇಶಿಸಿ, ಸಹ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದರು. ವರದಿಗಳ ಪ್ರಕಾರ ಈ ಮೊದಲೇ ಹಲವಾರು ಮಂದಿ ನಿರ್ಮಾಪಕರು ವಿಶ್ವನಾಥನ್ ಆನಂದ್ ಅವರಿಗೆ ಬಯೋಪಿಕ್ಗೆ ಅನುಮತಿಗಾಗಿ ಕೋರಿದ್ದರು. ಆದರೆ ಈಗ ವಿಶ್ವನಾಥನ್ ಆನಂದ್ ಅನುಮತಿ ನೀಡಿದ್ದಾರೆ ಎನ್ನಲಾಗ್ತಿದೆ.
-
24 years ago, our honeymoon was at a tournament. Now, after all these years, I think the time is right for Aruna to actually learn Chess. Watch me live: 7 PM on 7th Dec as I kick-off of my Graphy “Teaching your Spouse how to play Chess”
— Viswanathan Anand (@vishy64theking) December 4, 2020 " class="align-text-top noRightClick twitterSection" data="
Join here: https://t.co/uPFLkkS86x pic.twitter.com/vt1mcELbxN
">24 years ago, our honeymoon was at a tournament. Now, after all these years, I think the time is right for Aruna to actually learn Chess. Watch me live: 7 PM on 7th Dec as I kick-off of my Graphy “Teaching your Spouse how to play Chess”
— Viswanathan Anand (@vishy64theking) December 4, 2020
Join here: https://t.co/uPFLkkS86x pic.twitter.com/vt1mcELbxN24 years ago, our honeymoon was at a tournament. Now, after all these years, I think the time is right for Aruna to actually learn Chess. Watch me live: 7 PM on 7th Dec as I kick-off of my Graphy “Teaching your Spouse how to play Chess”
— Viswanathan Anand (@vishy64theking) December 4, 2020
Join here: https://t.co/uPFLkkS86x pic.twitter.com/vt1mcELbxN
ವಿಶ್ವನಾಥನ್ ಆನಂದ್ ಅವರು ತಮ್ಮ ಆರನೇ ವಯಸ್ಸಿನಲ್ಲಿ ಚೆಸ್ ಆಡುವುದನ್ನು ಪ್ರಾರಂಭಿಸಿದ್ದರು. ತನ್ನ ತಾಯಿಯಿಂದ ಚೆಸ್ ಆಡುವುದನ್ನು ಕಲಿತ ವಿಶ್ವನಾಥನ್ ಆನಂದ್ ತನ್ನ ಸಹೋದರಿ ಮತ್ತು ಸಹೋದರನೊಂದಿಗೆ ಆಟವನ್ನು ಆಡುತ್ತಿದ್ದರು. ಇದರೊಂದಿಗೆ ಅವರಿಗೆ ಬಾಲ್ಯದಲ್ಲಿಯೇ ಚೆಸ್ ಆಟದಲ್ಲಿ ಹಿಡಿತ ಸಿಕ್ಕಿತ್ತು. ಇದಾದ ನಂತರ ಐದು ವಿಶ್ವಚಾಂಪಿಯನ್ಶಿಪ್ಗಳಲ್ಲಿ ಗೆದ್ದಿದ್ದು ಇತಿಹಾಸ.
ಇದನ್ನೂ ಓದಿ: AK v/s Ak.. ವಾಯುಸೇನೆಗೆ ಅಗೌರವ.. ಕ್ಷಮೆ ಕೇಳಿದ ಅನಿಲ್ ಕಪೂರ್
2019ರಲ್ಲಿ 'ಮೈಂಡ್ ಮಾಸ್ಟರ್: ವಿನ್ನಿಂಗ್ ಲೆಸನ್ಸ್ ಫ್ರಮ್ ಎ ಚಾಂಪಿಯನ್ಸ್ ಲೈಫ್' ಎಂಬ ಪುಸ್ತಕ ಬಿಡುಗಡೆಯಾಗಿದ್ದು, ಈಗ ಕ್ರೀಡಾ ಬಯೋಪಿಕ್ಗಳ ಸಾಲಿಗೆ ವಿಶ್ವನಾಥನ್ ಆನಂದ್ ಅವರ ಜೀವನವೂ ಕೂಡಾ ಸೇರ್ಪಡೆಯಾಗಲಿದೆ.
-
My favourite picture from Mexico pic.twitter.com/VP1EEOtKjt
— Viswanathan Anand (@vishy64theking) September 30, 2020 " class="align-text-top noRightClick twitterSection" data="
">My favourite picture from Mexico pic.twitter.com/VP1EEOtKjt
— Viswanathan Anand (@vishy64theking) September 30, 2020My favourite picture from Mexico pic.twitter.com/VP1EEOtKjt
— Viswanathan Anand (@vishy64theking) September 30, 2020
ಈಗಷ್ಟೇ ಚಿತ್ರದ ಸಿದ್ಧತೆ ನಡೆಯುತ್ತಿದ್ದು, ಇನ್ನೂ ಯಾವುದೇ ಹೆಸರಿಟ್ಟಿಲ್ಲ. ಸದ್ಯಕ್ಕೆ ಆನಂದ್ ಎಲ್ ರೈ 'ಆತ್ರಂಗಿ ರೇ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಧನುಷ್ ಹಾಗೂ ಸಾರಾ ಅಲಿಖಾನ್ ಕಾಣಿಸಿಕೊಳ್ಳುತ್ತಿದ್ದಾರೆ.