ETV Bharat / bharat

ತಿರುವಿನಲ್ಲಿ ಅಪಾಯಕಾರಿ ಓವರ್‌ಟೇಕ್‌: ಬಸ್‌ನಡಿ ಬಿದ್ದೆದ್ದು, ಬದುಕಿಬಂದ ಬೈಕ್ ಸವಾರ! ವಿಡಿಯೋ

ಅಪಘಾತವೊಂದರಲ್ಲಿ ಬೈಕ್​ ಸವಾರ ಅಚ್ಚರಿ ರೀತಿಯಲ್ಲಿ​​ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗುಜರಾತ್​ನ ದಾಹೋದ್​ನಲ್ಲಿ ನಡೆದಿದೆ.

Biker miraculously escape
Biker miraculously escape
author img

By

Published : Sep 16, 2021, 9:27 PM IST

ದಾಹೋದ್​​(ಗುಜರಾತ್​): ಇಂದೋರ್​​-ಅಹಮದಾಬಾದ್​ ರಾಷ್ಟ್ರೀಯ ಹೆದ್ದಾರಿ ಬಾಗೋದ್ರದಿಂದ ದಾಹೋದ್​ ನಗರಕ್ಕೆ ಬರುವ ರಸ್ತೆ ಮಾರ್ಗದಲ್ಲಿ ಬೈಕ್​ ಸವಾರನ ಮೇಲೆ ಬಸ್ ಹರಿದಿದ್ದು, ಅದೃಷ್ಟವಶಾತ್​​ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಪಘಾತದ ಸಿಸಿಟಿವಿ ವಿಡಿಯೋ

ತಿರುವಿನಲ್ಲಿ ಬಸ್​​ ಓವರ್​ಟೇಕ್​ ಮಾಡಲು ಹೋದಾಗ ಏಕಾಏಕಿ ಅದರ ಮುಂಭಾಗಕ್ಕೆ ಡಿಕ್ಕಿ ಹೊಡೆದು ಬೈಕ್​ ಸವಾರ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬಸ್​​ ಚಾಲಕ ಬ್ರೇಕ್ ಹಾಕಿದ್ದು, ಬೈಕ್ ಸವಾರ ಬಸ್‌ನಡಿ ಸಿಲುಕಿಕೊಂಡಿದ್ದ. ಆದರೆ ಈ ವೇಳೆ ಯಾವುದೇ ರೀತಿಯ ಪ್ರಾಣಹಾನಿ ಅಥವಾ ಗಾಯ ಆಗದೇ ಆತ ಹೊರಗಡೆ ಬಂದಿದ್ದಾನೆ.

ಇದನ್ನೂ ಓದಿ: ರಸ್ತೆಯಲ್ಲಿ ಅಡ್ಡಬಂದ ಬೀದಿನಾಯಿ ರಕ್ಷಿಸಲು ಹೋಗಿ ಆಟೋ ಪಲ್ಟಿ: ಐವರ ದುರ್ಮರಣ, ಇಬ್ಬರಿಗೆ ಗಾಯ

ಬಸ್​ಗೆ ಬೈಕ್​ ಡಿಕ್ಕಿ ಹೊಡೆದಿರುವುದನ್ನು ನೋಡಿರುವ ಬಸ್​​ ಡ್ರೈವರ್​ ದಿಢೀರ್​ ಆಗಿ ಬ್ರೇಕ್​ ಹೊಡೆದಿರುವ ಪರಿಣಾಮ ಆತನ ಪ್ರಾಣಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ. ಘಟನೆಯ ಭೀಕರತೆ ನೋಡಿದರೆ ಬೈಕ್​ ಸವಾರನ ಪ್ರಾಣಪಕ್ಷಿ ಸ್ಥಳದಲ್ಲೇ ಹಾರಿಹೋಗುವ ಸನ್ನಿವೇಶ ಅದಾಗಿತ್ತು. ಆದರೆ ಅದೃಷ್ಟವಶಾತ್​ ಆತ ಬದುಕುಳಿದಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.