ETV Bharat / bharat

ನಿತೀಶ್​ ಕುಮಾರ್​ಗೆ ವರವಾಯ್ತಾ ಆ ಮಾತು..?: ಬಿಹಾರದಲ್ಲಿ ಎನ್​ಡಿಎ ಪುಟಿದೇಳಲು ಕಾರಣ ಇದು! - ಬಿಹಾರ ಚುನಾವಣೆ ವೇಳೆ ನಿತೀಶ್ ಕುಮಾರ್​ ಹೇಳಿಕೆ

ಬಿಹಾರ ಚುನಾವಣೆಯಲ್ಲಿ ಮತ್ತೊಮ್ಮೆ ಎನ್​ಡಿಎ ಪುಟಿದೆಳುವ ಎಲ್ಲ ಲಕ್ಷಣ ಗೋಚರವಾಗ್ತಿದ್ದು, ಇದಕ್ಕೆ ಕಾರಣವಾಗಿದ್ದು ನಿತೀಶ್ ಕುಮಾರ್ ಹೇಳಿರುವ ಆ ಮಾತು ಕಾರಣ ಎಂದು ಹೇಳಲಾಗುತ್ತಿದೆ.

Nitish kumar
Nitish kumar
author img

By

Published : Nov 10, 2020, 11:47 AM IST

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್​ ಕುಮಾರ್ ನೇತೃತ್ವದಲ್ಲಿ ಕಣಕ್ಕಿಳಿದಿರುವ ಎನ್​ಡಿಎ ಈಗಾಗಲೇ ಆರಂಭಿಕ ಮುನ್ನಡೆ ಪಡೆದುಕೊಂಡಿದ್ದು, ಈ ಮೂಲಕ ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡುವುದು ಖಚಿತ ಎಂಬ ಮಾತು ಕೇಳಿ ಬರಲು ಶುರುವಾಗಿದೆ.

129 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಪುಟಿದೆದ್ದ ಎನ್​ಡಿಎ... ಮಹಾಘಟಬಂಧನ್​ಗೆ ಹಿನ್ನಡೆ

243 ಕ್ಷೇತ್ರಗಳ ಪೈಕಿ 122ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಎನ್​ಡಿಎ ಮುನ್ನಡೆಯಲ್ಲಿದ್ದರೆ, ಮಹಾಘಟಬಂಧನ್​ 108 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಆದರೆ, ಆರ್​ಜೆಡಿ ಕೆಲವೊಂದು ಪ್ರಮುಖ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದು, ಬಿಜೆಪಿ ಭರ್ಜರಿ ಕಮ್​ಬ್ಯಾಕ್ ಮಾಡಿದೆ.

ಎನ್​ಡಿಎ ಮುನ್ನಡೆಗೆ ಕಾರಣವಾಯಿತ್ತಾ ಈ ಮಾತು!?

ಮೂರನೇ ಹಂತದ ಚುನಾವಣೆಗೂ ಎರಡು ದಿನಗಳ ಮುನ್ನ ಪ್ರಚಾರ ಸಭೆ ನಡೆಸುತ್ತಿದ್ದ ನಿತೀಶ್​ ಕುಮಾರ್​ ನೀಡಿರುವ ಹೇಳಿಕೆ ಎನ್​ಡಿಎ ಪಕ್ಷಕ್ಕೆ ಇಷ್ಟೊಂದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲು ಕಾರಣವಾಗಿದೆ ಎಂಬ ಮಾತು ಗಂಭೀರವಾಗಿ ಕೇಳಿ ಬರಲು ಶುರುವಾಗಿದೆ.

ಇದು ನನ್ನ ಕೊನೆ ಚುನಾವಣೆ: ಪ್ರಚಾರದ ವೇಳೆ ಘೋಷಣೆ ಮಾಡಿದ ಬಿಹಾರ ಸಿಎಂ!

ಬಿಹಾರದ ಪೂರ್ಣಿಯಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ನಿತೀಶ್​ ಕುಮಾರ್​ ಇದು ತಮ್ಮ ಕೊನೆಯ ಚುನಾವಣೆ ಎಂದು ಘೋಷಣೆ ಮಾಡಿದ್ದರು. ಮುಂದಿನ ಸಾರ್ವಜನಿಕ ಚುನಾವಣೆ ಹಾಗೂ ಬೇರೆ ಯಾವುದೇ ಚುನಾವಣೆಯಲ್ಲಿ ತಾವೂ ಸ್ಪರ್ಧೆ ಮಾಡಲ್ಲ ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದರು. ಈ ಮೂಲಕ ತಮ್ಮ ರಾಜಕೀಯ ಜೀವನಕ್ಕೆ ವಿರಾಮ ಇಡುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಇದೇ ಮಾತು ಇದೀಗ ಮತದಾರ ಪ್ರಭುಗಳ ಒಲೈಕೆಗೆ ಕಾರಣವಾಗಿದೆ ಎಂಬ ಮಾತು ಕೇಳಿ ಬಂದಿದೆ.

ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿ(ಯು) ಮುಖ್ಯಸ್ಥರಾಗಿರುವ ನಿತೀಶ್ ಕುಮಾರ್​ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಕಣಕ್ಕಿಳಿದಿದ್ದು, ಎರಡನೇ ಅವಧಿಗೆ ಮೈತ್ರಿ ಸರ್ಕಾರದೊಂದಿಗೆ ಅಧಿಕಾರ ರಚನೆ ಮಾಡುವ ಇರಾದೆ ಹೊಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.