ಹೈದರಾಬಾದ್ : ಆಲ್‌ಝೈಮರ್ ಮತ್ತು ಬುದ್ಧಿಮಾಂದ್ಯತೆಯ ಬಗ್ಗೆ ಜಾಗೃತಿ ಮೂಡಿಸಲು 2012ರಿಂದ ಸೆಪ್ಟೆಂಬರ್ 21ರಂದು ಪ್ರತಿ ವರ್ಷ ಆಲ್‌ಝೈಮರ್ ದಿನ ಆಚರಿಸಲಾಗುತ್ತದೆ. ಸೆಪ್ಟೆಂಬರ್ 2020ನ್ನು ಒಂಬತ್ತನೇ ವಿಶ್ವ ಆಲ್‌ಝೈಮರ್ ತಿಂಗಳಾಗಿ ಗುರುತಿಸಲಾಗುತ್ತದೆ. ಇದರ ಉದ್ದೇಶವೆಂದ್ರೆ, ಬುದ್ಧಿಮಾಂದ್ಯತೆಯ ಕುರಿತು ಅರಿವು ಮೂಡಿಸುವ ಮತ್ತು ಇದಕ್ಕಿರುವ ಸವಾಲುಗಳನ್ನು ಎದುರಿಸುವ ಗುರಿ ಹೊಂದಲಾಗಿದೆ. ಪ್ರತಿವರ್ಷವೂ ಈ ದಿನವನ್ನು ವಿಶ್ವ ಆಲ್‌ಝೈಮರ್ ಡಿಸೀಸ್ ಇಂಟರ್ನ್ಯಾಷನಲ್(ಎಡಿಐ) ಸಂಯೋಜಿಸುತ್ತ ಬರುತ್ತಿದೆ.
2020ರ ವಿಷಯವು ‘ಬುದ್ಧಿಮಾಂದ್ಯತೆಯ ಬಗ್ಗೆ : ಆಲ್‌ಝೈಮರ್ ಕಾಯಿಲೆಯೆಂಬುದು ಒಂದು ಬುದ್ಧಿಮಾಂದ್ಯತೆಯ ಸಾಮಾನ್ಯ ರೂಪ. ಇದು ಪ್ರಗತಿಶೀಲ ಮಿದುಳಿನ ಕಾಯಿಲೆಯಾಗಿದೆ. ಅದು ಮೆಮೊರಿ ಮತ್ತು ಆಲೋಚನಾ ಕೌಶಲ್ಯ ಕಳೆದುಕೊಳ್ಳುವ ಗುಣಲಕ್ಷಣವನ್ನು ಹೊಂದಿದೆ. ಮುಖ್ಯವಾಗಿ ಇದು ಮೆದುಳಿನ ಕೋಶಗಳನ್ನು ನಾಶಪಡಿಸುತ್ತದೆ. ಆ ಮೂಲಕ ಅದು ನೆನಪಿನ ಶಕ್ತಿ ಕುಂಠಿತ, ವಿಪರೀತ ಮರೆವು, ಅನಿಯಮಿತ ನಡವಳಿಕೆ ಮತ್ತು ದೇಹದ ಕಾರ್ಯಗಳ ಮೇಲೆ ಅನಿಯಂತ್ರಣಕ್ಕೆ ಕಾರಣವಾಗುತ್ತದೆ. ಆಲ್‌ಝೈಮರ್ ಕಾಯಿಲೆ ಹೆಚ್ಚಾಗಿ ವಯಸ್ಸಾದ ಜನರ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ವೃದ್ಧರ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇದು ಎಚ್ಚರಿಕೆಗೆ ಕಾರಣವಾಗಿದೆ.
ಬುದ್ಧಿಮಾಂದ್ಯತೆ ಮತ್ತು ಆಲ್‌ಝೈಮರ್ ನಡುವಿನ ವ್ಯತ್ಯಾಸ:
ಆಲ್‌ಝೈಮರ್ ಹೆಸರಿನ ಇತಿಹಾಸ : 1906ರಲ್ಲಿ, ಜರ್ಮನ್ ವೈದ್ಯ ಡಾ. ಅಲೋಯಿಸ್ ಆಲ್‌ಝೈಮರ್ ಮೊದಲ ಬಾರಿಗೆ "ಪೆಸಿಲಿಯರ್ ಕಾಯಿಲೆ"ಯನ್ನು ನೆನೆಪಿನ ಶಕ್ತಿಯಲ್ಲಿ ಕುಂಠಿತತೆ ಹಾಗೂ ಸೂಕ್ಷ್ಮ ಮೆದುಳಿನಲ್ಲಾಗುವ ಬದಲಾವಣೆಯೆಂದು ವಿವರಿಸಿದ್ದರು. ಈಗ ಈ ರೋಗವನ್ನು ಆಲ್‌ಝೈಮರ್ ಎಂದು ಕರೆಯಲಾಗುತ್ತಿದೆ.
ಉದ್ದೇಶ : ವಿಶ್ವ ಆಲ್‌ಝೈಮರ್ ದಿನದ ಮುಖ್ಯ ಉದ್ದೇಶವೆಂದ್ರೆ, ಸಾಧ್ಯವಾದಷ್ಟು ದೇಶಗಳನ್ನು ಈ ಕಾಯಿಲೆಯ ಕುರಿತು ತಲುಪುವುದು. ಬುದ್ಧಿಮಾಂದ್ಯತೆಯ ಜಾಗತಿಕ ಪ್ರಭಾವವನ್ನು ತೋರಿಸುವುದು ಮತ್ತು ಬುದ್ಧಿಮಾಂದ್ಯತೆ ಅರಿವನ್ನು ಉತ್ತೇಜಿಸುವುದು ಮತ್ತು ರೋಗದಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ನಾವು ಏನು ಮಾಡಬಹುದು ಎಂಬುದನ್ನು ತಿಳಿಸುವ ಗುರಿ ಹೊಂದಿದೆ.
ಬುದ್ಧಿಮಾಂದ್ಯತೆಯ ಜಾಗತಿಕ ಕ್ರಿಯಾ ಯೋಜನೆ: ಮೇ 2017ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು 2017-2025ರ ಕಾಲಮಿತಿಗೆ ಅನುಗುಣವಾಗಿ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯ ಕುರಿತು ಜಾಗತಿಕ ಯೋಜನೆ ರೂಪಿಸಿತು. ಈ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆಯ ಎಲ್ಲಾ 194 ಸದಸ್ಯ ರಾಷ್ಟ್ರಗಳು ಬದ್ಧವಾಗಿವೆ.
7 ಮಖ್ಯ ಕ್ರಿಯಾ-ಯೋಜನೆಗಳು:
- ಸಾರ್ವಜನಿಕ ಆರೋಗ್ಯದ ಆದ್ಯತೆಯಾಗಿ ಬುದ್ಧಿಮಾಂದ್ಯತೆ
- ಬುದ್ಧಿಮಾಂದ್ಯತೆಯ ಅರಿವು
- ಅಪಾಯವನ್ನು ಕಡಿತಗೊಳಿಸುವುದು
- ರೋಗನಿರ್ಣಯ
- ಚಿಕಿತ್ಸೆ ಮತ್ತು ಆರೈಕೆ
- ಆರೈಕೆದಾರರಿಗೆ ಬೆಂಬಲ
- ಡೇಟಾ ಮತ್ತು ಸಂಶೋಧನೆ
ಇದು 2025ರ ವೇಳೆಗೆ ಪ್ರತಿ ಪ್ರತ್ಯೇಕ ಸರ್ಕಾರಗಳು ಪೂರೈಸಬೇಕಾದ ಗುರಿಗಳಾಗಿವೆ.
ಆಲ್‌ಝೈಮರ್ ಕಾಯಿಲೆಯ ಬಗೆಗಿನ ಸಂಗತಿಗಳು :
- ಆಲ್‌ಝೈಮರ್ ಕಾಯಿಲೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೆದುಳಿನಲ್ಲಿ ಸಂಭವಿಸುವ ಕೆಲ ಸಂಕೀರ್ಣ ಘಟನೆಗಳು ಈ ರೋಗಕ್ಕೆ ಕಾರಣವಾಗುತ್ತವೆ.
- ಜಾಗತಿಕವಾಗಿ ಪ್ರತಿ 3 ಜನರಲ್ಲಿ 2 ಜನರು ತಮ್ಮ ದೇಶಗಳಲ್ಲಿ ಬುದ್ಧಿಮಾಂದ್ಯತೆಯ ಬಗ್ಗೆ ಕಡಿಮೆ ಅಥವಾ ತಿಳುವಳಿಕೆ ಇಲ್ಲ ಎಂದು ನಂಬಿದ್ದಾರೆ.
- ಆಲ್‌ಝೈಮರ್ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲ. ಆರಂಭಿಕ ಹಂತದಲ್ಲಿ ಕಾಯಿಲೆಯ ಪತ್ತೆ ರೋಗಿಗೆ ಪರಿಣಾಮಕಾರಿ ಪ್ರಯೋಜನವನ್ನು ನೀಡುತ್ತದೆ.
- ಚಿಕಿತ್ಸೆಯ ವಿಧಾನಗಳಲ್ಲಿ ಔಷಧೀಯ, ಮಾನಸಿಕ ಮತ್ತು ಆರೈಕೆ ನೀಡುವ ಅಂಶಗಳು ಸೇರಿವೆ.
- ಕುಟುಂಬ ಮತ್ತು ಸಾಮಾಜಿಕ ಬೆಂಬಲ ಪ್ರಮುಖ ಪಾತ್ರ ವಹಿಸುತ್ತದೆ.
ಲಕ್ಷಣಗಳು :
- ಮನಸ್ಥಿತಿಯಲ್ಲಿನ ಬದಲಾವಣೆಗಳು, ಇತ್ತೀಚಿನ ಮಾಹಿತಿ ಮರೆತು ವಿಷಯಗಳನ್ನು ತಪ್ಪಾಗಿ ಗ್ರಹಿಸುವುದು.
- ಸಮಸ್ಯೆಗಳನ್ನು ಪರಿಹರಿಸುವಲ್ಲಿನ ಸವಾಲುಗಳು ಮತ್ತು ಮನೆಯಲ್ಲಿ ಅಥವಾ ಕೆಲಸದಲ್ಲಿ ಪರಿಚಿತ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿನ ತೊಂದರೆ.
- ಸಮಯ ಅಥವಾ ಸ್ಥಳದೊಂದಿಗೆ ಗೊಂದಲ ಮತ್ತು ದಿನಾಂಕ ಮತ್ತು ಸಮಯ ಗುರ್ತಿಸುವಲ್ಲಿ ವಿಫಲರಾಗುವುದು.
- ಓದುವಲ್ಲಿ ತೊಂದರೆ, ದೂರವನ್ನು ನಿರ್ಣಯಿಸುವುದು ಮತ್ತು ಬಣ್ಣವನ್ನು ಗುರುತಿಸುವುದು ಅಸಾಧ್ಯ.
- ಸಾಮಾಜಿಕ ಮತ್ತು ವಿರಾಮ ಚಟುವಟಿಕೆಗಳಿಂದ ಹಿಂದೆ ಸರಿಯುವುದು.
ತಡೆಗಟ್ಟುವ ಸಲಹೆಗಳು :
- ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು.
- ಓದುವುದು, ಆನಂದಕ್ಕಾಗಿ ಬರೆಯುವುದು ಮತ್ತು ಸಂಗೀತ ವಾದ್ಯಗಳನ್ನು ನುಡಿಸುವುದು.
- ವಯಸ್ಕರ ಶಿಕ್ಷಣ ಕೋರ್ಸ್‌ಗಳಲ್ಲಿ ಭಾಗವಹಿಸುವುದು.
- ಕ್ರಾಸ್‌ವರ್ಡ್‌ಗಳು, ಒಗಟುಗಳು, ಸ್ಕ್ರ್ಯಾಬಲ್ ಮತ್ತು ಚೆಸ್‌ನಂತಹ ಒಳಾಂಗಣ ಆಟಗಳನ್ನು ಆಡುವುದು.
- ಈಜು, ಗುಂಪು ಕ್ರೀಡೆಗಳಾದ ಬೌಲಿಂಗ್, ವಾಕಿಂಗ್, ಯೋಗ ಮತ್ತು ಧ್ಯಾನದಂತಹ ಚಟುವಟಿಕೆಗಳು.
ಅಂಕಿ-ಅಂಶಗಳು:
- ಪ್ರಪಂಚದಾದ್ಯಂತ 50 ದಶಲಕ್ಷಕ್ಕೂ ಹೆಚ್ಚು ಜನರು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾರೆ.
- ವಿಶ್ವದ ಯಾರಾದ್ರೂ ಒಬ್ಬರು ಪ್ರತಿ 3 ಸೆಕೆಂಡಿಗೆ ಬುದ್ಧಿಮಾಂದ್ಯತೆಗೆ ಒಳಗಾಗುತ್ತಾರೆ.
- ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ಜನರ ಸಂಖ್ಯೆ ಮೂರು ಪಟ್ಟು ಹೆಚ್ಚಾಗುತ್ತದೆ, 2050ರ ವೇಳೆಗೆ ಇದು 152 ದಶಲಕ್ಷಕ್ಕೆ ಏರುತ್ತದೆ.
- ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ 68% ಏರಿಕೆಯಾಗಲಿದೆ.
- ಬುದ್ಧಿಮಾಂದ್ಯತೆಯ ಆರ್ಥಿಕ ಹೊರೆ ಪ್ರತಿವರ್ಷ US $ 1 ಟ್ರಿಲಿಯನ್ ಡಾಲರ್ ಆಗಿದೆ, ಇದು 2050 ರ ವೇಳೆಗೆ ದ್ವಿಗುಣಗೊಳ್ಳುತ್ತದೆ.
- ಸುಮಾರು 80% ಜನಸಾಮಾನ್ಯರು ಒಂದು ಹಂತದಲ್ಲಿ ಬುದ್ಧಿಮಾಂದ್ಯತೆಯ ತಡೆಗಟ್ಟಲು ಕಾಳಜಿ ವಹಿಸುತ್ತಾರೆ ಮತ್ತು 4 ರಲ್ಲಿ ಒಬ್ಬರು ಬುದ್ಧಿಮಾಂದ್ಯತೆಯನ್ನು ತಡೆಗಟ್ಟಲು, ನಾವು ಏನೂ ಮಾಡಲಾಗುವುದಿಲ್ಲ ಎಂದು ಭಾವಿಸುತ್ತಾರೆ.
- ಪ್ರಪಂಚದಾದ್ಯಂತ 35% ಆರೈಕೆದಾರರು ಕುಟುಂಬದ ಸದಸ್ಯರ ಬುದ್ಧಿಮಾಂದ್ಯತೆಯ ರೋಗನಿರ್ಣಯವನ್ನು ಮರೆಮಾಡಿದ್ದಾರೆ.
- ಜಾಗತಿಕವಾಗಿ 50% ಕ್ಕೂ ಹೆಚ್ಚು ಆರೈಕೆದಾರರು ತಮ್ಮ ಕಾಳಜಿಯ ಜವಾಬ್ದಾರಿಗಳ ಪರಿಣಾಮವಾಗಿ ರೋಗಿಗಳ ಆರೋಗ್ಯವು ಸುಧಾರಿಸಿದೆ ಎಂದು ಹೇಳುತ್ತಾರೆ. ಅವರ ಪಾತ್ರದ ಬಗ್ಗೆ ಸಕಾರಾತ್ಮಕ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.
- ವಿಶ್ವಾದ್ಯಂತ ಸುಮಾರು 62% ಜನರು, ಬುದ್ಧಿಮಾಂದ್ಯತೆಯು ವಯಸ್ಸಾದ ನಂತರ ಸಾಮಾನ್ಯವೆಂದು ಭಾವಿಸುತ್ತಾರೆ.
ಕೋವಿಡ್-19 ಮತ್ತು ಬುದ್ಧಿಮಾಂದ್ಯತೆ:
- ಕೋವಿಡ್-19, ಏಕಾಏಕಿ ಬುದ್ಧಿಮಾಂದ್ಯತೆಯಂತಹ ದೀರ್ಘಕಾಲದ ಕಾಯಿಲೆಗಳೊಂದಿಗೆ ವಾಸಿಸುವ ಜನರಿಗೆ ದಿನನಿತ್ಯದ ಸೇವೆಗಳನ್ನು ಮತ್ತು ಬೆಂಬಲವನ್ನು ಒದಗಿಸಲು ಜಾಗತಿಕವಾಗಿ ಆರೋಗ್ಯ ವ್ಯವಸ್ಥೆಗಳ ಸಿದ್ಧತೆಯ ಕೊರತೆಯನ್ನು ಎತ್ತಿ ತೋರಿಸಿದೆ.
- ಲಾಕ್‌ಡೌನ್ ಮತ್ತು ನಿರ್ಬಂಧಗಳ ಸಮಯದಲ್ಲಿ, ವಯಸ್ಸಾದ ಜನರು, ವಿಶೇಷವಾಗಿ ವಾಸಿಸುವವರು ಅತ್ಯಗತ್ಯ ಎಂಬುದನ್ನು ತೋರಿಸಿಕೊಟ್ಟಿದೆ.
- ಬುದ್ಧಿಮಾಂದ್ಯತೆಯನ್ನು ಸಾಮಾಜಿಕವಾಗಿ ಹೊರಗಿಡಲಾಗುವುದಿಲ್ಲ. ಜನರು ಬುದ್ಧಿಮಾಂದ್ಯತೆಯ ಬಗ್ಗೆ ಮಾತನಾಡುವುದು, ಮಾಹಿತಿ, ಸಲಹೆ ಮತ್ತು ಬೆಂಬಲವನ್ನು ಪಡೆಯುವುದು ಕಡ್ಡಾಯವಾಗಿದೆ.