ETV Bharat / bharat

ದೇವರನಾಡಲ್ಲಿ ಕೊರೊನಾಗೆ ಮಹಿಳೆ ಬಲಿ: 61 ಹೊಸ ಪ್ರಕರಣಗಳು ದಾಖಲು - ಕೇರಳ

ರಿಯಾದ್‌ನಿಂದ ಮರಳಿದ 53 ವರ್ಷದ ಮಹಿಳೆ ಕೋವಿಡ್​ಗೆ ಬಲಿಯಾಗಿದ್ದು, ರಾಜ್ಯದಲ್ಲಿ ಕೊರೊನಾ ಗೆ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿದೆ.

COVID-19
ಕೊರೊನಾ
author img

By

Published : Jun 1, 2020, 9:49 AM IST

ಕೊಯಿಕ್ಕೊಡ್​(ಕೇರಳ): ರಿಯಾದ್‌ನಿಂದ ಮರಳಿದ 53 ವರ್ಷದ ಮಹಿಳೆ ಕೋಯಿಕ್ಕೋಡ್​ನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಭಾನುವಾರ ಕೋವಿಡ್​ಗೆ ಬಲಿಯಾಗಿದ್ದು, ರಾಜ್ಯದಲ್ಲಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿದೆ.

ಮೃತ ಮಹಿಳೆಗೆ ಹೃದಯ ಸಂಬಂಧಿತ ಕಾಯಿಲೆಗಳಿತ್ತು ಹಾಗೂ ವಿದೇಶದಿಂದ ಆಗಮಿಸಿದ ಬಳಿಕ ಆಕೆಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿತ್ತು ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ರಾಜನ್ ಖೋಬ್ರಗಡೆ ಹೇಳಿದ್ದಾರೆ.

ಕೇರಳದಲ್ಲಿ ಇದು 10ನೇ ಕೋವಿಡ್​ 19 ಸಂಬಂಧಿತ ಸಾವಾಗಿದೆ. ರಾಜ್ಯದಲ್ಲಿ 61 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು1,269 ಪ್ರಕರಣಗಳು ದಾಖಲಾಗಿವೆ. ಹೊಸದಾಗಿ ಪತ್ತೆಯಾದ 61 ಪ್ರಕರಣಗಳಲ್ಲಿ 57 ಮಂದಿ ವಿದೇಶದಿಂದ ಮರಳಿದವರು ಮತ್ತು ಉಳಿದವರು ಇತರೆ ರಾಜ್ಯಗಳಿಂದ ಬಂದವರಾಗಿದ್ದಾರೆ. ಇನ್ನು 1.34 ಲಕ್ಷಕ್ಕೂ ಹೆಚ್ಚು ಜನರ ಮೇಲೆ ನಿಗಾ ವಹಿಸಲಾಗಿದೆ.

ಪಾಲಕ್ಕಾಡ್‌ನಲ್ಲಿ 12 ಪ್ರಕರಣಗಳು ವರದಿಯಾಗಿದ್ದು, ನಂತರದ ಸ್ಥಾನದಲ್ಲಿರುವ ಕಾಸರಗೋಡಿನಲ್ಲಿ 10, ಕಣ್ಣೂರು 7, ಕೊಲ್ಲಂ, ಆಲಪ್ಪುಳದಲ್ಲಿ 6, ತಿರುವನಂತಪುರಂ, ಪಟ್ಟನಂತ್ತಿಟ್ಟದಲ್ಲಿ 4, ತ್ರಿಸ್ಸೂರ್​, ಮಲಪ್ಪುರಂ, ವಯನಾಡ್​ನಲ್ಲಿ 3, ಕೊಯಿಕ್ಕೋಡ್​ನಲ್ಲಿ 2, ಹಾಗೂ ಎರ್ನಾಕುಲಂನಲ್ಲಿ 1 ಪ್ರಕರಣ ಪತ್ತೆಯಾಗಿದೆ.

ಇನ್ನು ವಿಮಾನ ನಿಲ್ದಾಣಗಳ ಮೂಲಕ 19,662 ಜನರು, ಚೆಕ್‌ಪೋಸ್ಟ್‌ಗಳ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿದಂತೆ ಒಟ್ಟಾರೆ 1,31,651 ಜನರು ರಾಜ್ಯಕ್ಕೆ ಪ್ರವೇಶಿಸಿದ್ದಾರೆ. ಅಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1,34,654 ಜನರು ನಿಗಾದಲ್ಲಿದ್ದಾರೆ. ಅವರಲ್ಲಿ 1,33,413 ಜನರು ಮನೆ / ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದಾರೆ. 1,241 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ ಭಾನುವಾರದಂದು 208 ಮಂದಿ ದಾಖಲಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 3,099 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇಲ್ಲಿಯವರೆಗೆ, 67,371 ಜನರ ಮಾದರಿಗಳನ್ನು ಲ್ಯಾಬ್​ಗೆ ಕಳುಹಿಸಲಾಗಿದೆ. 64,093 ಕೇಸ್​ನ ಫಲಿತಾಂಶಗಳು ನೆಗೆಟಿವ್​ ಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪಾಲಕ್ಕಾಡ್‌ನ ಪುತ್ತುನಾಗರಂ, ಕಣ್ಣೂರಿನ ತಲಚೆರಿ ಪುರಸಭೆ ಮತ್ತು ಕೊಲ್ಲಂನ ಪುನಲೂರು ಸೇರಿದಂತೆ ಇನ್ನೂ 10 ಪ್ರದೇಶಗಳನ್ನು ಸೇರ್ಪಡೆಗೊಳಿಸುವುದರೊಂದಿಗೆ ರಾಜ್ಯದ ಒಟ್ಟು ಹಾಟ್‌ಸ್ಪಾಟ್‌ಗಳ ಸಂಖ್ಯೆ 116 ಕ್ಕೆ ಏರಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.