ETV Bharat / bharat

'ಪೆಗಾಸಸ್'​ ದಾಳಿ ಬಗ್ಗೆ ವಾಟ್ಸ್​​ಆ್ಯಪ್​​  ಹೇಳಿಲ್ಲ: ಸರ್ಕಾರಿ ಮೂಲಗಳಿಂದ ಸ್ಪಷ್ಟನೆ

ಪೆಗಾಸಸ್​ ಬಗ್ಗೆ ವಾಟ್ಸ್​​ಆ್ಯಪ್​ ಅಧಿಕಾರಿಗಳು ಯಾವುದೇ ವಿಚಾರಗಳನ್ನು ಪ್ರಸ್ತಾಪಿಸಿಲ್ಲ. ಕೇವಲ ತಾಂತ್ರಿಕ ಅಡಚಣೆಯ ಬಗ್ಗೆ ಅಷ್ಟೇ ನಮ್ಮ ಗಮನಕ್ಕೆ ತಂದಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿದೆ.

ವಾಟ್ಸಾಪ್
author img

By

Published : Nov 2, 2019, 3:21 PM IST

ನವದೆಹಲಿ: 'ಪೆಗಾಸಸ್'​ ಅನ್ನೋ ಒಂದು ತಂತ್ರಾಂಶದ ಮೂಲಕ ಇಸ್ರೇಲಿ ಹ್ಯಾಕರ್​ ವಾಟ್ಸ್​​ಆ್ಯಪ್​​ಗೆ ಎಂಟ್ರಿ ಕೊಟ್ಟಿರೋ ಬಗ್ಗೆ ವಾಟ್ಸ್​ಆ್ಯಪ್​​ ಅಧಿಕಾರಿಗಳು ಯಾವುದೇ ವಿಚಾರಗಳನ್ನು ಹೇಳಿಲ್ಲ. ಕೇವಲ ತಾಂತ್ರಿಕ ದೌರ್ಬಲ್ಯ ಎಂಬುದನ್ನು ಮಾತ್ರ ವಾಟ್ಸ್​ಆ್ಯಪ್​ ಹೇಳಿತ್ತು ಎಂದು ಸರ್ಕಾರದ ಮೂಲಗಳು ತಿಳಿಸಿದೆ.

ಹಲವು ಭಾರತೀಯ ಬಳಕೆದಾರರ ಮೊಬೈಲ್​ಗೆ 'ಪೆಗಾಸಸ್'​ ಅನ್ನೋ ಹ್ಯಾಕರ್​ ಎಂಟ್ರಿ ಕೊಟ್ಟು, ಮೊಬೈಲ್​ನಲ್ಲಿರೋ ಗೌಪ್ಯ ಮಾಹಿತಿ ಸೇರಿ, ಎಲ್ಲ ದಾಖಲೆಗಳನ್ನು ಹ್ಯಾಕ್​ ಮಾಡಿರೋ ಬಗ್ಗೆ ಭಾರತೀಯ ಬಳಕೆದಾರರಿಂದ ದೂರು ಸಲ್ಲಿಕೆಯಾಗಿತ್ತು. ಈ ವಿಚಾರವನ್ನು ಭಾರತದ ಸರ್ಕಾರಿ ಸಂಸ್ಥೆಯಾದ CERT-IN(ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ)ಗೆ ಮಾಹಿತಿ ನೀಡಲಾಗಿದೆ ಎಂದು ವಾಟ್ಸ್​​ಆ್ಯಪ್​​ ಮೂಲಗಳು ಹೇಳಿದ್ದವು

ಆದರೆ, ಇದನ್ನು ತಳ್ಳಿಹಾಕಿರುವ ಭಾರತೀಯ ಸರ್ಕಾರಿ ಮೂಲಗಳು, ಈ ಪೆಗಾಸಸ್​ ಬಗ್ಗೆ ವಾಟ್ಸ್​ಆ್ಯಪ್​​ ಅಧಿಕಾರಿಗಳು ಯಾವುದೇ ವಿಚಾರಗಳನ್ನು ಪ್ರಸ್ತಾಪಿಸಿಲ್ಲ. ಕೇವಲ ತಾಂತ್ರಿಕ ಅಡಚಣೆಯ ಬಗ್ಗೆ ಅಷ್ಟೇ ನಮ್ಮ ಗಮನಕ್ಕೆ ತಂದಿತ್ತು ಎಂದು ತಿಳಿಸಿದೆ.

ಇನ್ನೊಂದೆಡೆ, ಈ ವಿಚಾರವಾಗಿ ಎಚ್ಚೆತ್ತಿರುವ ಅಮೆರಿಕ, ಇಂಗ್ಲೆಂಡ್​, ಆಸ್ಟ್ರೇಲಿಯಾ ಸೇರಿದಂತೆ ಇತರ ದೇಶಗಳು ಕೂಡಾ ತಮ್ಮ ದೇಶದ ನಾಗರಿಕರ ಖಾಸಗಿತನದ ಗೌಪ್ಯತೆಯ ಬಗ್ಗೆ ಹೆಚ್ಚು ಗಮನ ಕೊಡಲು ಮುಂದಾಗಿದೆ.

ಪೆಗಾಸಸ್ ಹೆಸರಿನ ಹ್ಯಾಕರ್,​ ಬಳಕೆದಾರರ ಮೊಬೈಲ್​ಗೆ ವಿಡಿಯೋ ಕಾಲ್​ ಬರುವ ಮೂಲಕ ಎಂಟ್ರಿ ಕೊಡುತ್ತದೆ. ಈ ಕರೆಯನ್ನು ರಿಸೀವ್​ ಮಾಡದಿದ್ದರೂ, ಮೊಬೈಲ್​ನಲ್ಲಿರೋ ಎಲ್ಲ ಮಾಹಿತಿಯೂ ಈ ಇಸ್ರೇಲಿ ಹ್ಯಾಕರ್​ಗಳ ಮೊಬೈಲ್​ನಲ್ಲಿ ಸೇವ್​ ಆಗುತ್ತೆ ಎನ್ನುವುದರ ಬಗ್ಗೆ ಭಾರತೀಯ ಬಳಕೆದಾರರು ವಾಟ್ಸ್​​ಆ್ಯಪ್​​ ಗಮನಕ್ಕೆ ತಂದಿದ್ದರು.

Intro:Body:

whatsapp

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.