ETV Bharat / bharat

ಇಂಡಿಯಾ ಸಲ್ಯೂಟ್ಸ್​​ ಕೊರೊನಾ ವಾರಿಯರ್ಸ್​... ನೌಕಾದಳದಿಂದ ವಿಶೇಷ ಗೌರವ! - ಕೋವಿಡ್​​-19

ಕೊರೊನಾ ವಾರಿಯರ್ಸ್​ಗೆ ಸೇನೆಯ ಮೂರು ಪಡೆಗಳು ಇಂದು ಗೌರವ ಸಲ್ಲಿಸಿದ್ದು, ಮುಂಬೈನ ಐಎನ್​ಎಸ್​ ಹನ್ಸಾದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ.

INS hansa
ಐಎಸ್ಎಸ್​​ ಹನ್ಸಾ
author img

By

Published : May 3, 2020, 11:19 PM IST

ಮುಂಬೈ: ಭಾರತೀಯ ನೌಕಾಪಡೆ ಕೊರೊನಾ ವಾರಿಯರ್ಸ್​ಗೆ ವಿಶೇಷ ಗೌರವ ಸಲ್ಲಿಸಿದೆ. ಇದಕ್ಕೆ ಐಎನ್​ಎಸ್​ ಹನ್ಸಾ ನೌಕೆಯನ್ನು ಬಳಸಿಕೊಂಡಿದ್ದು, ನೌಕೆಯ ಡೆಕ್​ ಮೇಲೆ ಇಂಡಿಯಾ ಸಲ್ಯೂಟ್ಸ್​ ಕೊರೊನಾ ವಾರಿಯರ್ಸ್ ಎಂದು ಇಂಗ್ಲಿಷ್ ಅಕ್ಷರಗಳಲ್ಲಿ ಮಾನವ ಸರಪಳಿ ರಚಿಸಿ ಗೌರವ ಸೂಚಿಸಲಾಗಿದೆ.

ಟ್ವಿಟರ್ ಖಾತೆಯಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಪ್ರೋ ಡಿಫೆನ್ಸ್​ ಮುಂಬೈ ಖಾತೆ ಹರ್ ಕಾಮ್​ ದೇಶ್ ಕೆ ನಾಮ್​ ಹೆಸರಿನ ಮುಖ್ಯ ಹ್ಯಾಷ್​ಟ್ಯಾಗ್​ ಹಾಕಿ ನೌಕಾಪಡೆ 41 ಸೆಕೆಂಡ್​ಗಳ ವಿಡಿಯೋವನ್ನು ಹಂಚಿಕೊಂಡಿದೆ.

ಕೊರೊನಾ ವಾರಿಯರ್ಸ್​ಗೆ ಗೌರವ ಸಲ್ಲಿಸುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ. ಐಎನ್​ಎಸ್ ಹನ್ಸಾ ನೌಕೆಯ ಮೇಲ್ಭಾಗದಿಂದ ಈ ದೃಶ್ಯ ಸೆರೆ ಹಿಡಿದಿದ್ದು, ಇಂಡಿಯಾ ಸಲ್ಯೂಟ್ಸ್​ ಕೊರೊನಾ ವಾರಿಯರ್ಸ್​ ಎಂಬ ಅಕ್ಷರಗಳು ಸ್ಪಷ್ಟವಾಗಿ ಕಾಣುತ್ತವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.