ETV Bharat / bharat

ವಿ'ಶಾಕ್'‌ಪಟ್ಟಣಂ​ ಅನಿಲ ದುರಂತ: ಸಾವಿನ ಸಂಖ್ಯೆ 12ಕ್ಕೇರಿಕೆ, ಸ್ಥಳದಲ್ಲಿ ಪರಿಸ್ಥಿತಿ ಹೇಗಿದೆ?

author img

By

Published : May 8, 2020, 10:17 AM IST

Updated : May 8, 2020, 10:30 AM IST

ಭೋಪಾಲ್​ ಅನಿಲ ದುರಂತವನ್ನು ನೆನಪಿಸಿದ ವಿಶಾಖಪಟ್ಟಣ ಅನಿಲ ದುರಂತದಲ್ಲಿ ಸಾವಿನ ಸಂಖ್ಯೆ 12ಕ್ಕೇರಿದೆ. ನೂರಾರು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲವು ಸಂತ್ರಸ್ತರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ದಳ, ಸ್ಟೈರೀನ್ ಅನಿಲ ತಜ್ಞರು ಸೇರಿದಂತೆ ರಕ್ಷಣಾ ತಂಡ ಬೀಡುಬಿಟ್ಟಿದ್ದು, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

visakha gas tragedy
ವೈಝಾಗ್​ ಅನಿಲ ದುರಂತ

ವಿಶಾಖಪಟ್ಟಣ (ಆಂಧ್ರಪ್ರದೇಶ): ಇಲ್ಲಿನ ಎಲ್​ಜಿ ಪಾಲಿಮರ್ಸ್‌ನಿಂದ ರಾಸಾಯನಿಕ ಅನಿಲ ಸೋರಿಕೆಯಿಂದಾಗಿ ಸಂಭವಿಸಿದ ಭಾರಿ ದುರಂತದಿಂದ ಸಾವಿನ ಸಂಖ್ಯೆ ಇಂದು 12 ಕ್ಕೆ ತಲುಪಿದೆ. ಇದರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ.

ಘಟನೆಯಲ್ಲಿ ಅಸ್ವಸ್ಥಗೊಂಡವರಿಗೆ ಇಲ್ಲಿನ ಕೆ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಆಸ್ಪತ್ರೆ ಸೇರಿರುವವರಲ್ಲಿ 193 ಸಂತ್ರಸ್ತರ ಆರೋಗ್ಯ ಸ್ಥಿರವಾಗಿದ್ದು, ಇದರಲ್ಲಿ 40 ಮಕ್ಕಳು ಸೇರಿದ್ದಾರೆ. ಇವರೆಲ್ಲರಿಗೂ ಮತ್ತೆ ಆರೋಗ್ಯ ಪರೀಕ್ಷೆ ನಡೆಸುತ್ತೇವೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಈವರೆಗೆ ಅನಿಲ ಸೋರಿಕೆಯಾದ ಆರ್. ಆರ್. ವೆಂಕಟಪುರಂ ಮತ್ತು ಇತರ ನಾಲ್ಕು ಗ್ರಾಮಗಳಿಂದ 12,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಸ್ಥಾವರದ ಬಳಿ 10 ಅಗ್ನಿಶಾಮಕ ಯಂತ್ರಗಳು ಮತ್ತು ಎರಡು ಫೋಮ್ ಫೈಟರ್‌ಗಳನ್ನು ಸಿದ್ಧಪಡಿಸಿ ಇರಿಸಲಾಗಿದೆ ಎಂದು ವಿಶಾಖಪಟ್ಟಣ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸಂದೀಪ್ ಆನಂದ್ ಹೇಳಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಆ್ಯಂಬುಲೆನ್ಸ್‌ಗಳು ಸಹ ಸಿದ್ಧವಾಗಿವೆ ಎಂದು ಅವರು ಹೇಳಿದರು.

ಅನಿಲ ಸೋರಿಕೆಯಾದ ಆರ್. ಆರ್. ವೆಂಕಟಪುರಂ ಪ್ರದೇಶ ನಿಧಾನವಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಕೊರೊನಾ ಭೀತಿ ನಡುವೆ ಅನಿಲ​ ಸೋರಿಕೆ​ ದುರಂತ ಇಲ್ಲಿನ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆರ್. ಆರ್. ವೆಂಕಟಪುರಂನಲ್ಲಿ ಜನರು ಎಂದಿನಂತೆ ರಸ್ತೆಗಳಲ್ಲಿ ಸಂಚರಿಸುತ್ತಿದ್ದುದು ಕಂಡು ಬಂತು.

ಆರ್. ಆರ್. ವೆಂಕಟಪುರಂ ಸದ್ಯದ ಪರಿಸ್ಥಿತಿ

'ಯಾರೂ ಭಯಭೀತರಾಗಬೇಡಿ...'

ವಿಶಾಖಪಟ್ಟಣ ಪೊಲೀಸ್ ಆಯುಕ್ತ ಆರ್. ಕೆ. ಮೀನಾ, ಜನರು ಭಯಭೀತರಾಗದಂತೆ ವಿನಂತಿಸಿದ್ದಾರೆ. ಈಗಾಗಲೇ ಅನಿಲ ಸೋರಿಕೆ ಪ್ರದೇಶದ ಸುತ್ತಮುತ್ತಲಿನ 2 ಕಿ.ಮೀ ವ್ಯಾಪ್ತಿಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾದೆ. ಅನಿಲ ಸೋರಿಕೆಯ ಬಗ್ಗೆ ಹರಡುತ್ತಿರುವ ಸುಳ್ಳು ಸುದ್ದಿಯನ್ನು ಯಾರೂ ನಂಬಬೇಡಿ ಎಂದು ಕಮೀಷನರ್​ ಹೇಳಿದ್ದಾರೆ.

Last Updated : May 8, 2020, 10:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.