ಅಮ್ಮಾ ಎದ್ದೇಳು.. ನನಗೆ ಈ ಕಾಡಲ್ಲಿ ಒಬ್ಬಂಟಿ ಮಾಡಿ ಹೋಗಬೇಡ... ಅಮ್ಮಾ.. ಪ್ಲೀಸ್ ಏಳು.. ಹೀಗೆ ಪುಟ್ಟ ಕಂದಮ್ಮವೊಂದು ತಾಯಿಯ ಶವದ ಬಳಿ ಆರ್ತನಾದ ಹಾಕುತ್ತಿದ್ರೆ ಎಂಥವರ ಕರಳು ಕೂಡಾ ಚುರಕ್ ಎನ್ನದೇ ಇರದು. ತಾಯಿ ಎಂದರೆ ಅದು ತಾಯಿಯೇ. ಅದು ಮನುಷ್ಯರಿಗಾಗಲಿ, ಪ್ರಾಣಿಗಳಿಗಾಗಲಿ, ಪಕ್ಷಿಗಳಗಾಗಲಿ. ಅಮ್ಮನಿಲ್ಲದ ತಬ್ಬಲಿಯ ಕೂಗಿಗೆ ಈ ವಿಡಿಯೋ ಕೈಗನ್ನಡಿಯಂತಿದೆ.
ಹೌದು, ಅದ್ಯಾರೋ ಪಾಪಿಗಳು ದುರಾಸೆಗೆ ತಾಯಿ ಘೇಂಡಾಮೃಗವನ್ನು ಬಲಿ ಪಡೆದಿದ್ದಾರೆ. ಆದರೆ ಮರಿ ಘೇಂಡಾಮೃಗ ತನ್ನ ಅಮ್ಮನನ್ನು ಎದ್ದೇಳಿಸಲು ಪರಿತಪಿಸುತ್ತಿರುವ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
-
The picture of poaching !!
— Parveen Kaswan, IFS (@ParveenKaswan) July 2, 2019 " class="align-text-top noRightClick twitterSection" data="
A baby #rhino tries to wake #mother, who is killed by poachers for the #horn. Devastating & eye opening. pic.twitter.com/EnAS2PAHiD
">The picture of poaching !!
— Parveen Kaswan, IFS (@ParveenKaswan) July 2, 2019
A baby #rhino tries to wake #mother, who is killed by poachers for the #horn. Devastating & eye opening. pic.twitter.com/EnAS2PAHiDThe picture of poaching !!
— Parveen Kaswan, IFS (@ParveenKaswan) July 2, 2019
A baby #rhino tries to wake #mother, who is killed by poachers for the #horn. Devastating & eye opening. pic.twitter.com/EnAS2PAHiD
ಕೊಂಬಿಗಾಗಿ ಬೇಟೆಗಾರರು ಘೇಂಡಾಮೃಗವನ್ನು ಕೊಂದಿದ್ದಾರೆ. ಮರಿ ತನ್ನ ತಾಯಿ ಇಲ್ಲದೇ ಆರ್ತನಾದವಿಡುತ್ತಿದೆ. ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಪರ್ವೀನ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಹಸಿವಿನಿಂದ ಪುಟ್ಟ ಮರಿ ತನ್ನ ತಾಯಿ ಅಸುನೀಗಿದ್ದಾಳೆ ಎಂಬುದನ್ನೂ ಅರಿಯದೇ ಹಾಲು ಕುಡಿಯಲು ಹವಣಿಸುತ್ತಿರುವುದಂತೂ ಕಣ್ಣಲ್ಲಿ ನೀರು ತರಿಸುತ್ತದೆ.