ETV Bharat / bharat

ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ... ಅಪ್ರಾಪ್ತರಿಗೆ ಪಂಚರ ಏಟು... ವಿಡಿಯೋ ವೈರಲ್​

author img

By

Published : Aug 17, 2019, 6:51 PM IST

ಅವರಿಬ್ಬರಿಗೆ ಇನ್ನು ಚಿಕ್ಕ ವಯಸ್ಸು. ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೇಮದ ಮಾಯಗೆ ಒಳಗಾಗಿದ್ದಾರೆ. ಊರು ಬಿಟ್ಟು ಹೋದ ಇವರನ್ನು ಆ ಗ್ರಾಮಸ್ಥರು ಮತ್ತೆ ಕರೆತಂದು ಪಂಚಾಯ್ತಿಯಲ್ಲಿ ಮನಬಂದಂತೆ ಥಳಿಸಿ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ನಡೆದಿದೆ.

ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ

ಅನಂತಪುರ ಜಿಲ್ಲೆಯ ಕೆಪಿದೊಡ್ಡಿ ಗ್ರಾಮದ ಬಾಲಕ, ಬಾಲಕಿ ಇಬ್ಬರು ಪ್ರೇಮದ ಜಾಲಕ್ಕೆ ಬಿದ್ದಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ಇವರು ಹತ್ತು ದಿನದ ಕೆಳಗೆ ಗ್ರಾಮವನ್ನು ಬಿಟ್ಟು ಓಡಿ ಹೋಗಿದ್ದಾರೆ. ಆದ್ರೆ ಗ್ರಾಮಸ್ಥರು ಓಡಿ ಹೋದ ಜೋಡಿಯನ್ನು ಪತ್ತೆ ಹಚ್ಚಿ ಮತ್ತೆ ಗ್ರಾಮಕ್ಕೆ ಕರೆತಂದಿದ್ದಾರೆ.

ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ... ಅಪ್ರಾಪ್ತರಿಗೆ ಪಂಚರ ಏಟು... ವಿಡಿಯೋ ವೈರಲ್​

ಈ ಜೋಡಿಯನ್ನು ಪಂಚಾಯ್ತಿ ಕಟ್ಟೆಯಲ್ಲಿ ನಿಲ್ಲಿಸಿದ್ದಾರೆ. ನ್ಯಾಯ ಹೇಳಲು ಬಂದ ಪಂಚರು ಆ ಜೋಡಿ ಮೇಲೆ ಸಿಟ್ಟಿಗೆದ್ದು, ಮನಬಂದಂತೆ ಥಳಿಸಿದ್ದಾರೆ. ಚಿಕ್ಕ ವಯಸ್ಸಿನ ಬಾಲಕಿ ಎಂಬುದನ್ನೂ ನೋಡದ ಪಂಚಾಯ್ತಿ ಹಿರಿಯರೊಬ್ಬರು ಕಟ್ಟಿಗೆಯಿಂದ ಹೊಡೆದು, ಕಾಲಿಂದ ಒದ್ದು ಅಮಾನವೀಯವಾಗಿ ವರ್ತಿಸಿದ್ದಾರೆ. ಬಾಲಕಿಯನ್ನು ಪಂಚಾಯ್ತಿ ಅವರು ಮನಬಂದಂತೆ ಥಳಿಸುತ್ತಿದ್ದರೂ ಪೋಷಕರು ಏನೊಂದೂ ಮಾತನಾಡದೇ ಮೌನಕ್ಕೆ ಶರಣಾಗಿದ್ದರೆ, ಸೇರಿದವರೂ ಹೊಡೆಯುವುದನ್ನ ನೋಡುತ್ತಾ ಕುಳಿತುಕೊಂಡಿದ್ದರು.

ಈ ಘಟನೆ ಗುರುವಾರ ನಡೆದಿದ್ದು, ಶುಕ್ರವಾರದಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಯ್ಯೋ ಬಾಲಕಿಯೇ ಎಂದು ಮರುಗಿದ್ದಾರೆ. ಆದ್ರೆ ಇಲ್ಲಿಯವರೆಗೆ ಪೊಲೀಸರು ಮಾತ್ರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ಆಕ್ರೋಶಕ್ಕೂ ಕಾರಣವಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.