ETV Bharat / bharat

ಲಾಕ್‌ಡೌನ್‌ ಹೇಗೆ ಕೊನೆಗೊಳ್ಳಬಹುದು?: ಹೀಗಿದೆ ವಿಶ್ವ ಆರೋಗ್ಯ ಸಂಸ್ಥೆ ವಿವರಣೆ - ಕೊರೊನಾ ವೈರಸ್​ ಅಪ್​​ಡೇಟ್​​

ಕೊರೊನಾ ವೈರಸ್‌ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವದಲ್ಲಿ ಲಾಕ್‌ಡೌನ್‌ ಚಾಲ್ತಿಯಲ್ಲಿದೆ. ಶಾಲಾ - ಕಾಲೇಜು, ಖಾಸಗಿ-ಸರ್ಕಾರಿ ಕಚೇರಿಗಳು, ಹೋಟೆಲ್‌ಗಳು, ಪಬ್‌ಗಳು, ಧಾರ್ಮಿಕ ಸ್ಥಳಗಳು ಸೇರಿದಂತೆ ಸಾರ್ವಜನಿಕರು ಸಂಪರ್ಕಿಸುವ ಎಲ್ಲ ಸ್ಥಳಗಳನ್ನು ಮುಚ್ಚಲಾಗಿದೆ.

How can coronavirus lockdowns end safely and effectively?
ಲಾಕ್​​ಡೌನ್​​​
author img

By

Published : Apr 10, 2020, 7:17 PM IST

ಹೈದರಾಬಾದ್: ಕೊರೊನಾ ವೈರಸ್ ಸೋಂಕು ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಗತ್ತಿನಾದ್ಯಂತ ದಶಲಕ್ಷಕ್ಕೂ ಹೆಚ್ಚು ಜನರು ಇದರ ಸೋಂಕಿಗೆ ತುತ್ತಾಗಿದ್ದಾರೆ. ಸಾಂಕ್ರಾಮಿಕ ರೋಗದ ಪರಿಣಾಮವಾಗಿ ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಪ್ರಸ್ತುತ ಕೆಲವು ರೀತಿಯ ಲಾಕ್‌ಡೌನ್‌ನಲ್ಲಿ ಬಂಧಿತರಾಗಿದ್ದಾರೆ.

ಲಾಕ್​​ಡೌನ್​ನಿಂದಾಗಿ ವಿಶ್ವದಲ್ಲಿ ಶಾಲಾ-ಕಾಲೇಜು, ಖಾಸಗಿ - ಸರ್ಕಾರಿ ಕಚೇರಿಗಳು, ಹೋಟೆಲ್‌ಗಳು, ಪಬ್‌ಗಳು, ಧಾರ್ಮಿಕ ಸ್ಥಳಗಳು ಸೇರಿದಂತೆ ಸಾರ್ವಜನಿಕರು ಸಂಪರ್ಕಿಸುವ ಎಲ್ಲ ಸ್ಥಳಗಳನ್ನು ಮುಚ್ಚಲಾಗಿದೆ. ಸಾಮಾನ್ಯ ಜನರ ಜೀವನವು ಸಂಪೂರ್ಣವಾಗಿ ಕುಂಠಿತಗೊಂಡಿದೆ. ಸಾರ್ವಜನಿಕ ಸಂಪರ್ಕ ಕಡಿದು ಹೋಗಿದೆ.

ವೈರಸ್ ಹರಡುವುದನ್ನು ತಡೆಯಲು ಜಾರಿಗೆ ಲಾಕ್​ಡೌನ್​​​​​ ನಿರ್ಬಂಧವನ್ನು ಯಾವಾಗ ತೆಗೆದು ಹಾಕುತ್ತಾರೆ ಎಂದು ಅನೇಕರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಮಿತಿಗಳನ್ನು ಹಂತ ಹಂತವಾಗಿ ತೆಗೆದು ಹಾಕುವತ್ತ ಹೆಜ್ಜೆ ಇಡುವುದು, ಇಂತಹ ಆರೋಗ್ಯ ತುರ್ತು ಸಮಯದಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಕ್ರಮ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಆರೋಗ್ಯ ತುರ್ತು ಕಾರ್ಯಕ್ರಮದ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ಜೆ.ರಯಾನ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ನಿರ್ಬಂಧಗಳನ್ನು ತೆರವುಗೊಳಿಸುವ ಮೊದಲು, ಆಯಾ ದೇಶದಲ್ಲಿ ಸೋಂಕಿನ ಪ್ರಮಾಣ ಮತ್ತು ಆರೋಗ್ಯ ವ್ಯವಸ್ಥೆ ಸಾಮರ್ಥ್ಯದಂತಹ ಪ್ರಮುಖ ಅಂಕಿ - ಅಂಶಗಳನ್ನು ಮೊದಲು ಪರಿಶೀಲಿಸಬೇಕು. ಶೇ.100ರಷ್ಟು ಆಸ್ಪತ್ರೆ ಹಾಸಿಗೆ ಸಾಮರ್ಥ್ಯ ಹೊಂದಿರುವ ಪ್ರದೇಶಗಳು ಲಾಕ್‌ಡೌನ್ ನಿರ್ಬಂಧಗಳನ್ನು ಕಡಿಮೆ ಮಾಡಲು ಇನ್ನೂ ಸಿದ್ಧವಾಗಿಲ್ಲ ಎಂದು ಅವರು ಹೇಳಿದರು.

ನಿಮ್ಮ ವ್ಯವಸ್ಥೆಯಲ್ಲಿ ಕೊರೊನಾ ಸೋಂಕಿತರಿಗಿಂತ ಹೆಚ್ಚು ಹಾಸಿಗೆ ಹೊಂದಿರುವ ಸ್ಥಾನದಲ್ಲಿರಬೇಕು. ಆಗ ನೀವು ಕೊರೊನಾ ಸೋಂಕಿತರು ಮತ್ತು ಇತರರನ್ನು ನಿರ್ವಹಿಸುತ್ತೀರಿ ಹಾಗೂ ನಿಭಾಯಿಸುತ್ತೀರಿ. ಇದರರ್ಥ ಕೊರೊನಾ ವಿರುದ್ಧ ಯುದ್ಧದಲ್ಲಿ ಸಮರ್ಥ ದಾಳಿ ಎದುರಿಸುವ ಸಾಮರ್ಥ್ಯ ಹೊಂದುವಿರಿ ಎಂದರು.

ಲಾಕ್‌ಡೌನ್‌ ಸ್ಥಗಿತಗೊಳಿಸುವುದು ಹೆಚ್ಚು ಪರಿಣಾಮಕಾರಿ ಎಂಬ ಅಂಶವನ್ನು ದೇಶಗಳು ಪರಿಗಣಿಸಬೇಕು. ಆದರೆ, ಲಾಕ್​ಡೌನ್​ ನಿರ್ಬಂಧ ತೆರವುಗೊಳಿಸುವ ಪ್ರದೇಶದಲ್ಲಿ ನಾಯಕರು ರೋಗದ ಸಾಂಕ್ರಾಮಿಕ ಹರಡುವಿಕೆ ಕುರಿತು ಅರ್ಥೈಸಿಕೊಳ್ಳಬೇಕು. ಲಾಕ್‌ಡೌನ್‌ ತೆಗೆದ ನಂತರ ಮತ್ತೆ ರೋಗದ ಪರಿಣಾಮ ಹೆಚ್ಚುವಂತೆ ಆಗಬಾರದು. ಸದ್ಯದ ಮಟ್ಟಿಗೆ ರೋಗ ನಿಯಂತ್ರಣಕ್ಕೆ ಲಾಕ್‌ಡೌನ್‌ ಸುರಕ್ಷಿತ ಮಾರ್ಗವಾಗಿದೆ ಎನ್ನುತ್ತಾರೆ ರಿಯಾನ್.

ವರ್ಗಾವಣೆಗೆ ಸಿದ್ಧತೆ: ದೇಶಗಳು ಮುಂದಿನ ವರ್ಗಾವಣೆಗೆ ಸಂಬಂಧಿಸಿದಂತೆ ಮಹತ್ತರ ಅಂಶಗಳತ್ತ ಗಮನಹರಿಸಬೇಕು. ಉದಾ: ಲಾಕ್‌ಡೌನ್‌ನಿಂದ ಹೊರಬಂದ ನಂತರ ಬಲವಾದ ಸಾರ್ವಜನಿಕ ಆರೋಗ್ಯ ನಿರ್ವಹಣೆ ಸಾಮರ್ಥ್ಯವನ್ನು ನಿರ್ಮಿಸಬೇಕು. ರೋಗವು ಮರುಕಳಿಸಿದರೆ ಅದನ್ನು ನಿಭಾಯಿಸಬಲ್ಲ, ಬಲವಾದ ಆರೋಗ್ಯ ವ್ಯವಸ್ಥೆಯನ್ನು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಒಮ್ಮೆ ನೀವು ಲಾಕ್‌ಡೌನ್ ಅನ್ನು ತೆರವುಗೊಳಿಸಿದರೆ, ಸೋಂಕು ನಿಗ್ರಹಿಸಲು ಪರ್ಯಾಯ ವಿಧಾನ ಹೊಂದಿರಬೇಕು. ಅದನ್ನು ಮಾಡುವ ಮಾರ್ಗವೆಂದರೆ ಸಕ್ರಿಯ ಪ್ರಕರಣ ಪತ್ತೆ, ಪರೀಕ್ಷೆ, ಪ್ರಕರಣಗಳ ಪ್ರತ್ಯೇಕತೆ, ಸಂಪರ್ಕಗಳ ಟ್ರ್ಯಾಕಿಂಗ್, ಸಂಪರ್ಕಗಳ ನಿರ್ಬಂಧ ಇತ್ಯಾದಿ ಸುರಕ್ಷತಾ ಕ್ರಮ ತೆಗೆದುಕೊಳ್ಳುವುದು ಎಂದು ವಿವರಿಸಿದರು.

ಬಲವಾದ ಸಮುದಾಯ ಶಿಕ್ಷಣ ಈ ಪರಿವರ್ತನೆಯ ಹೆಚ್ಚುವರಿ ಅಗತ್ಯ ಅಂಶ. ನಿರ್ಬಂಧ ಹೆಚ್ಚಿಸಿದ ನಂತರ ಸಾರ್ವಜನಿಕರು ಅದರಲ್ಲಿ ತೊಡಗಿಸಿಕೊಳ್ಳುವ ಮತ್ತು ದೈಹಿಕವಾಗಿ ದೂರವಿರುವ ಕುರಿತು ವಿಷಯ ಜ್ಞಾನ ಹೊಂದಿರಬೇಕು. ಪ್ರಬಲವಾದ ಸಾರ್ವಜನಿಕ ಆರೋಗ್ಯ ಸಾಮರ್ಥ್ಯ, ಸುಶಿಕ್ಷಿತ ಮತ್ತು ಮೊಬಿಲೈಸ್ಡ್‌ ಆದ ಸಮುದಾಯ, ನಿಮ್ಮ ಅರೋಗ್ಯ ವ್ಯವಸ್ಥೆ ಬಲಗೊಳಿಸಿದ್ದರೆ ಆಗ ನೀವು ಲಾಕ್‌ಡೌನ್‌ ತೆಗೆದು ಹಾಕುವ ಸಾಮರ್ಥ್ಯ ಪಡೆಯುವಿರಿ ಎನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ.

ಪರೀಕ್ಷಿಸಿ ಮತ್ತು ಮೌಲ್ಯಮಾಪನ ಮಾಡಿ: ದೇಶದ ವಿಶಿಷ್ಟ ಪರಿಸ್ಥಿತಿಗೆ ಅನುಗುಣವಾಗಿ ಲಾಕ್‌ಡೌನ್ ಅನ್ನು ಸರಳಗೊಳಿಸುವ ತಂತ್ರಗಳು ಬದಲಾಗುತ್ತವೆ. ಇಲ್ಲಿ ಯಾವುದೇ ನಿರಪೇಕ್ಷತೆಗಳಿಲ್ಲ. ಉತ್ತರಗಳಿಲ್ಲ. ಲಾಕ್​ಡೌನ್​ ತೆಗೆದರೆ ಸಂಖ್ಯೆ ಹೆಚ್ಚಾಗಬಹುದು ಅಥವಾ ಇಳಿಕೆಯಾಗಬಹುದು ಎಂಬಂತಹ ಯಾವುದೇ ಸಿದ್ಧಸೂತ್ರಗಳಿಲ್ಲ ಎಂಬುದರತ್ತ ಅವರು ಬೆಳಕು ಚೆಲ್ಲಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.