ETV Bharat / bharat

ಕೊರೊನಾ ಸಂಬಂಧ ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳ ಆಗುತ್ತಿರುವುದು ದುರದೃಷ್ಟಕರ: ಅಮೆರಿಕ - ಸ್ಯಾಮ್‌ ಬ್ರೌನ್‌ಬ್ಯಾಕ್

ಕೋವಿಡ್‌-19 ಹರಡುವಿಕೆ ಸಂಬಂಧ ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಕಿರುಕುಳ ಆಗುತ್ತಿರುವ ಬಗ್ಗೆ ವರದಿಗಳಾಗಿವೆ. ಇದು ದುರದೃಷ್ಟಕರ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

Unfortunate COVID-19 related 'rhetoric and harassment' against Muslims in India: US official
ಕೋವಿಡ್‌-19 ಸಂಬಂಧ ಭಾರತದಲ್ಲಿ ಮುಸ್ಲಿಂರ ಮೇಲಿನ ದೌರ್ಜನ್ಯ ದುರಾದುಷ್ಟಕರ; ಅಮೆರಿಕಾ
author img

By

Published : May 15, 2020, 1:05 PM IST

ವಾಷಿಂಗ್ಟನ್‌: ಕೊರೊನಾ ವೈರಸ್‌ ಹರಡುವಿಕೆ ಸಂಬಂಧ ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಕಿರುಕುಳ ಆಗುತ್ತಿರುವ ಬಗ್ಗೆ ವರದಿಗಳಾಗಿವೆ. ಸಾಮಾಜಿಕ ಜಾಲಾತಾಣಗಳಲ್ಲಿ ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿ ಹರಡಲಾಗುತ್ತಿದೆ. ಇದು ದುರದೃಷ್ಟಕರ ಎಂದು ಅಮೆರಿಕ ಬೇಸರ ವ್ಯಕ್ತಪಡಿಸಿದೆ.

ಜಗತ್ತಿನಾದ್ಯಂತ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಕೋವಿಡ್‌-19 ಪರಿಣಾಮಗಳ ಕುರಿತು ನಿನ್ನೆ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ರಾಯಭಾರಿ ಸ್ಯಾಮ್‌ ಬ್ರೌನ್‌ಬ್ಯಾಕ್‌ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕೋವಿಡ್‌-19 ಬಗ್ಗೆ ಭಾರತದ ಹಿರಿಯ ಅಧಿಕಾರಿಯೊಬ್ಬರು ಒಗ್ಗಟ್ಟಿನ ಹೇಳಿಕೆ ನೀಡಿದ್ದಾರೆ. ಇದನ್ನು ತಾವು ಬೆಂಬಲಿಸುವುದಾಗಿ ಸ್ಯಾಮ್‌ ತಿಳಿಸಿದ್ದಾರೆ.

ಕೋವಿಡ್‌-19 ಯಾವುದೇ ಧರ್ಮ, ಭಾಷೆ ಅಥವಾ ಗಡಿಯ ಆಧಾರದ ಮೇಲೆ ಹರಡುವುದಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು. ಇದು ಸತ್ಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸುಳ್ಳು ಸುದ್ದಿಗಳನ್ನು ಸರ್ಕಾರ ತಳ್ಳಿಹಾಕಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.