ಕೇರಳ : ಇಡುಕ್ಕಿಯ ವಲಿಯಥೋವಾಲಾದಲ್ಲಿ ಇಬ್ಬರು ಅತಿಥಿ ಕಾರ್ಮಿಕರನ್ನು ಹತ್ಯೆ ಮಾಡಲಾಗಿದೆ. ಮೃತರನ್ನು ಜಾರ್ಖಂಡ್ ಮೂಲದ ಜಾಮ್ಸ್ ಮತ್ತು ಶುಕ್ಲಾಲ್ ಎಂದು ಗುರುತಿಸಲಾಗಿದೆ.
![Two guest workers hacked to death in Idukki](https://etvbharatimages.akamaized.net/etvbharat/prod-images/kl-idy-02-murder-flows-dry-kl-10007_07122020073137_0712f_1607306497_208.jpg)
ಆರೋಪಿ ಸಂಜಯ್ ಬಾಸ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ಈ ನಾಲ್ಕು ಜನ ತೋಟದ ಕಾರ್ಮಿಕರು ಒಂದೇ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಹಣದ ವಿಚಾರಕ್ಕೆ ಘರ್ಷಣೆ ನಡೆದು ಕೊಲೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಗಲಾಟೆಯಲ್ಲಿ ಓರ್ವ ಮಹಿಳೆ ಕೂಡ ಗಾಯಗೊಂಡಿದ್ದಾರೆ.