ಸಿಕ್ಕಿಂ: ಪೂರ್ವ ಸಿಕ್ಕಿಂ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದು, ಇಲ್ಲಿನ ನಾಥು ಲಾ ಪ್ರದೇಶದ ಬಳಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ್ಧ 1,500 ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಲಾಗಿದೆ.
-
East Sikkim: More than 1500 tourists who were stranded due to heavy snowfall near Nathu La, rescued by Army personnel pic.twitter.com/Kh0b2TJ9z6
— ANI (@ANI) December 28, 2019 " class="align-text-top noRightClick twitterSection" data="
">East Sikkim: More than 1500 tourists who were stranded due to heavy snowfall near Nathu La, rescued by Army personnel pic.twitter.com/Kh0b2TJ9z6
— ANI (@ANI) December 28, 2019East Sikkim: More than 1500 tourists who were stranded due to heavy snowfall near Nathu La, rescued by Army personnel pic.twitter.com/Kh0b2TJ9z6
— ANI (@ANI) December 28, 2019
ಚೀನಾ ಗಡಿ ಬಳಿ ಇರುವ ನಾಥು ಲಾ, ಒಂದು ಪರ್ವತ ಮಾರ್ಗವಾಗಿದ್ದು, ಸಮುದ್ರ ಮಟ್ಟಕ್ಕಿಂತ ಸರಾಸರಿ 14,140 ಅಡಿ ಎತ್ತರದಲ್ಲಿದೆ. ಈ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಯಾವಾಗಲೂ ಅಧಿಕವಾಗಿರುತ್ತದೆ. ಈ ಬಾರಿ ಇಲ್ಲಿ ಹಿಮಪಾತದ ಪ್ರಮಾಣ ಕೂಡ ಅಧಿಕವಾಗಿದ್ದು, ಇಲ್ಲಿ ಸಿಲುಕಿಕೊಂಡಿದ್ದ 1500 ಕ್ಕೂ ಹೆಚ್ಚು ಪ್ರವಾಸಿಗರನ್ನು ಸೇನಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.