ನವದೆಹಲಿ: ಕಾಂಗ್ರೆಸ್ನ ಒಂದು ಗುಂಪು ಸಚಿನ್ ಪೈಲಟ್ ಪಕ್ಷದಿಂದ ತುಂಬಾ ದೂರ ಹೋಗಿದ್ದಾರೆ ಎಂದು ಭಾವಿಸಿದರೂ, ಪಕ್ಷದ ಉನ್ನತ ನಾಯಕರು ಇನ್ನೂ ಕೂಡಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರಿಗಾಗಿ ಪಕ್ಷದ ಬಾಗಿಲುಗಳು ತೆರದಿವೆ ಎನ್ನುವ ಮೂಲಕ ಸಂಧಾನದ ಬಾಗಿಲು ತೆರೆದಿಟ್ಟಿದ್ದಾರೆ. ಆದರೆ ಸಚಿನ್ ಪೈಲಟ್ ಅವರ ಮುಂದಿನ ನಿರ್ಧಾರ ಏನು ಎಂಬುದು ಮಾತ್ರ ಗೊತ್ತಾಗಬೇಕಿದೆ.
ಬಂಡಾಯ ನಾಯಕರಾಗಿರುವ ಸಚಿನ್ ಪೈಲಟ್ ದಕ್ಷಿಣ ಭಾರತದ ಕಾಂಗ್ರೆಸ್ನ ಹಿರಿಯ ಪಕ್ಷದ ಮುಖಂಡರೊಂದಿಗೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸಂಭಾಷಣೆಯ ಬಗ್ಗೆ ಪೈಲಟ್ ಯಾವುದೇ ದೃಢೀಕರಣ ನೀಡದಿದ್ದರೂ, ಕಾಂಗ್ರೆಸ್ ಪಕ್ಷದ ಬಾಗಿಲುಗಳು ಇನ್ನೂ ಕೂಡಾ ಅವರಿಗಾಗಿ ತೆರೆದಿವೆ ಎಂದು ಅವರಿಗೆ ತಿಳಿಸಲಾಗಿದೆ.
ಈವರೆಗಿನ ಬೆಳವಣಿಗೆಗಳನ್ನು ಕಾಂಗ್ರೆಸ್ ಪಕ್ಷ ಮರೆಯಲು ಸಿದ್ಧವಾಗಿದ್ದು, ಪೈಲಟ್ ಪಕ್ಷಕ್ಕೆ ಹಿಂದಿರುಗಿದರೆ ಅವರಿಗೆ ಸಮಾನ ಗೌರವ ನೀಡಲಾಗುವುದು ಎಂದು ತಿಳಿಸಲಾಗಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ.
ನಾನು ಪೈಲಟ್ ವಿರೋಧಿಯಲ್ಲ ಎಂದು ಗೆಹ್ಲೋಟ್ ಹೇಳಿದ್ದಾರೆ. ಆದರೆ, ಅವನು ಮೊದಲು ಬಿಜೆಪಿಯ ಆತಿಥ್ಯವನ್ನು ಬಿಟ್ಟು ಬೇಷರತ್ತಾಗಿ ಪಕ್ಷಕ್ಕೆ ಮರಳಬೇಕಾಗುತ್ತದೆ ಎಂದು ಗೆಹ್ಲೋಟ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.