ಬೊರಿವಲಿ (ಮುಂಬೈ): ವಾಣಿಜ್ಯ ನಗರಿ ಮುಂಬೈನ ಬೊರಿವಿಲಿ ರೈಲ್ವೇ ನಿಲ್ದಾಣದ ಬಳಿ ಇರುವ ಸ್ಟ್ರೀಟ್ ಫುಡ್ ತಯಾರಕನೊಬ್ಬ ತಾನು ತಯಾರಿಸುವ ಇಡ್ಲಿ, ವಡೆ ಮೊದಲಾದ ಆಹಾರಕ್ಕೆ ಶೌಚಾಲಯದ ನೀರು ಬಳಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.
ಶೌಚಾಲಯದ ನೀರು ಬಳಸುವ ಈ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. ಅಪರಿಚಿತ ವ್ಯಕ್ತಿಯೊಬ್ಬ ಆತ ಶೌಚಾಲಯದಿಂದ ನೀರನ್ನು ಕ್ಯಾನ್ನಲ್ಲಿ ತುಂಬಿಸಿಕೊಂಡು ಹೋಗುತ್ತಿರುವುದನ್ನು ಚಿತ್ರೀಕರಣ ಮಾಡಿದ್ದಾನೆ. ನೀರನ್ನು ತುಂಬಿಸಿಕೊಂಡು ಹೋಗುವ ವ್ಯಾಪಾರಿ, ಆ ನೀರನ್ನು ತನ್ನ ಸ್ಟಾಲ್ನಲ್ಲಿ ಕುಡಿಯಲು, ಕೈ ಹಾಗೂ ಪ್ಲೇಟ್ಗಳನ್ನು ತೊಳೆಯಲು ಬಳಸುತ್ತಾನೆ. ಅಲ್ಲದೇ ಚಟ್ನಿ ತಯಾರಿಗೂ ಅದೇ ನೀರನ್ನು ಬಳಸುತ್ತಾನೆ. ಇವೆಲ್ಲವೂ ಈ ವಿಡಿಯೋದಲ್ಲಿ ದಾಖಲಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ರಸ್ತೆ ಬದಿ ಜ್ಯೂಸ್ ತಯಾರಕನೊಬ್ಬ ಅನಾರೋಗ್ಯಕರ ನೀರನ್ನು ಬಳಸಿ, ಜ್ಯೂಸ್ ತಯಾರಿಸಿ ಸುದ್ದಿಯಾಗಿದ್ದ. ಇದರ ಬೆನ್ನಲ್ಲೇ ಇಡ್ಲಿ ವ್ಯಾಪಾರಿ ಕೂಡಾ ಕೊಳಕು ನೀರು ಬಳಸಿ ಆಹಾರ ತಯಾರಿಸಿ, ಜನರ ಆರೋಗ್ಯದ ಮೇಲೆ ಆಟವಾಡುತ್ತಿರುವುದು ಸುದ್ದಿಯಾಗಿದೆ.